ವೀರಾಜಪೇಟೆ, ಏ. ೯: ಜಾನಪದವನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕು ಎಂದು ಕೆ.ಪಿ.ಸಿ.ಸಿ. ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ವೀರಾಜಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ನಗರದ ಸೆರಿನಿಟಿ ಹಾಲ್ನಲ್ಲಿ ಆಯೋಜಿಸಲಾಗಿದ್ದ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ಮತ್ತು ಮಾಧವಿ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಜಾನಪದದ ಸೊಗಡು ಹಳ್ಳಿಗಳಲ್ಲಿ ನೆಲೆಸಿರುವವರ ಕಣಕಣದಲ್ಲಿ ತುಂಬಿಕೊAಡಿದೆ. ಜಾನಪದ ಕಲೆ ಸದಾಕಾಲ ಚಿರಾಯುವಾಗÀಬೇಕು ಎಂದು ಆಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕದ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಅವರು ಮಾತನಾಡಿ, ಜೀವನದ ಮೌಲ್ಯಗಳಿಗೆ ಜೀವ ತುಂಬಿದ ಜಾನಪದ ಸಾಹಿತ್ಯಗಳು ಬದುಕಿನ ಜೀವಾಳವಾಗಿವೆ. ಪ್ರತಿಯೊಬ್ಬರು ಜಾನಪದದ ಮೌಲ್ಯವನ್ನು
(ಮೊದಲ ಪುಟದಿಂದ) ಅರ್ಥೈಸಿಕೊಂಡು ಮುನ್ನಡೆಯ ಬೇಕೆಂದು ಸಲಹೆಯಿತ್ತರು.
ಸ್ವರಾರ್ಣವ ಸಂಗೀತ ಶಾಲೆಯ ಸಂಗೀತ ಗುರುಗಳಾದ ದಿಲೀ ಕುಮಾರ್ ಪ್ರಾಸ್ತಾವಿಕ ನುಡಿಯಾಡಿದರು. ಜಾನಪದ ಪರಿಷತ್ ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಟೋಮಿ ಥೋಮಸ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪದ ಕಲೆಯು ಇಂದು ಪಾಶ್ಚಾತ್ಯ ಸಂಸ್ಕೃತಿಗಳ ಪ್ರಭಾವದಿಂದಾಗಿ ನಶಿಸುವ ಹಂತದಲ್ಲಿದ್ದು, ಅದನ್ನು ಉಳಿಸಿಕೊಳ್ಳ ಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ಕಾರ್ಯಕ್ರಮಗಳಿಂದ ಜಾನಪದ ಸಾಹಿತ್ಯ, ಕಲೆಯನ್ನು ಜೀವಂತವಾಗಿರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಚೆಂಡೆ ವಾದಕ ಮತ್ತು ಶಿಕ್ಷಕರಾದ ಶಾಜಿ ಮಾಲ್ದಾರೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಅತಿಥಿಗಳನ್ನು ಚೆಂಡೆ ವಾದ್ಯದೊಂದಿಗೆ ವೇದಿಕೆಗೆ ಕರೆತರಲಾಯಿತು.
ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಆರ್. ಸುಶ್ಮಿತ, ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕದ ಕೋಶಾಧಿಕಾರಿ ಸಂಪತ್ ಕುಮಾರ್, ವೀರಾಜಪೇಟೆ ತಾಲೂಕು ಘಟಕದ ಕೋಶಾಧಿಕಾರಿ ಡಿ.ಸಿ. ಧ್ರುವ ಕುಮಾರ್ ಮತ್ತು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ. ಅನಿಲ್ ಉಪಸ್ಥಿತರಿದ್ದರು.
ಶಿಕ್ಷಕಿ ನಳಿನಾಕ್ಷಿ ನಿರೂಪಿಸಿ, ವೀರಾಜಪೇಟೆ ತಾಲೂಕು ಘಟಕದ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಜಿತ ಕಾರ್ಯಪ್ಪ ವಂದಿಸಿದರು.