ಗೋಣಿಕೊಪ್ಪಲು, ಏ. ೯: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆ ಇಲ್ಲಿನ ಐಕ್ಯೂಎಸಿ, ರಾಜ್ಯಶಾಸ್ತç ವಿಭಾಗ ಮತ್ತು ಮಾನವ ಹಕ್ಕುಗಳ ಸಮಿತಿಯ ವತಿಯಿಂದ ದ್ವಿತೀಯ ಬಿ.ಎ. ಪದವಿಯ ವಿದ್ಯಾರ್ಥಿಗಳಾಗಿ 'ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್', ಪಾಲಿಬೆಟ್ಟದ ವಿಶೇಷಚೇತನ ಮಕ್ಕಳಿಗೆ ವಿದ್ಯಾರ್ಥಿ ಸಂಪರ್ಕ ಮತ್ತು ಕಲಿಕಾ ವಿಸ್ತರಣಾ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು 'ಚೆಶೈರ್ ಹೋಮ್' ಸಂಸ್ಥೆಯ ಅಧ್ಯಕ್ಷೆ ಗೀತಾ ಚಂಗಪ್ಪ ಉದ್ಘಾಟಿಸಿದರು.

ವಿದ್ಯಾರ್ಥಿಗಳ ಸಮಾಜಮುಖಿ ಕಲಿಕೆಯ ಆಸಕ್ತಿಗೆ ಶ್ಲಾಘನೆ ವ್ಯಕ್ತಪಡಿಸಿದರು.

ಸಂಸ್ಥೆಯ ಉಪಾಧ್ಯಕ್ಷರಾದ ಪುನೀತ ರಾಮಸ್ವಾಮಿ ಮಾತನಾಡಿ, ವಿಶೇಷಚೇತನ ಮಕ್ಕಳ ಸೇವೆಗೆ ಬೇಕಾಗುವ ದ್ವಿತೀಯ ಪಿಯುಸಿ ನಂತರದ ಕಲಿಕೆ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಒದಗಿಸಿದರು.

ಸಂಸ್ಥೆಯ ಖಜಾಂಚಿ ಡಾ. ಎ.ಸಿ. ಗಣಪತಿ ಅವರು ಮಾತನಾಡಿ, ಸಮಾಜದಲ್ಲಿನ ವಿಶೇಷಚೇತನ ಮಕ್ಕಳಿಗೆ ಕೇವಲ ಕರುಣೆ, ಅನುಕಂಪ ತೋರದೆ ಅವರದ್ದೇ ಆದ ರೀತಿಯಲ್ಲಿ ಸ್ವಾವಲಂಬಿಯಾಗಿಸಲು ಅವಕಾಶ ನೀಡಬೇಕೆಂದು ತಿಳಿಸಿದರು.

ಈ ದಿಸೆಯಲ್ಲಿ ಪ್ರಜ್ಞಾವಂತ ಯುವಜನತೆಯು ಕೈ ಜೋಡಿಸಬೇಕೆಂದು ಕರೆ ನೀಡಿದರು.

ಸಂಸ್ಥೆಯ ಮುಖ್ಯೋಪಾಧ್ಯಾಯ ಶಿವರಾಜ್ ಮಾತನಾಡಿ, "ಕಲಿಕಾ ವಿಸ್ತರಣೆ"ಯಂತಹ ಕಾರ್ಯಕ್ರಮ ಗಳಿಂದ ವಿದ್ಯಾರ್ಥಿಗಳ ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಯನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕದ ಅಧ್ಯಯ ನಕ್ಕಷ್ಟೇ ತಮ್ಮನ್ನು ತಾವು ಸೀಮಿತ ಗೊಳಿಸದೆ, ಇಂತಹ ಕಾರ್ಯಕ್ರಮ ಗಳಲ್ಲಿಯೂ ಭಾಗವಹಿಸು ವಂತಾಗಬೇಕೆAದು ಕರೆ ನೀಡಿದರು.

ವೇದಿಕೆಯಲ್ಲಿ ಸ.ಪ್ರ.ದ. ಕಾಲೇಜಿನ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರು ಮತ್ತು ಮಾನವ ಹಕ್ಕುಗಳ ಸಮಿತಿಯ ಸಂಚಾಲಕಿ ದಿವ್ಯ ಎಂ.ಬಿ. ಹಾಗೂ ವಿಭಾಗದ ಉಪನ್ಯಾಸಕ ವನಿತ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ವಿಶೇಷ ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ನಡೆಸಲಾಯಿತು. ಈ ವೇಳೆ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಚೆಶೈರ್ ಹೋಂ ಸಂಸ್ಥೆಯ ಅಧ್ಯಾಪಕ ವರ್ಗ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾಲೇಜಿನ ಐಶ್ವರ್ಯ ಸ್ವಾಗತಿಸಿ, ದಿವ್ಯ ವಂದಿಸಿ, ರಂಜಿತ ನಿರೂಪಿಸಿದರು.