ಕುಶಾಲನಗರ, ಏ. ೯: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನೂತನವಾಗಿ ರಚನೆಗೊಂಡ ಕುಶಾಲನಗರ ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಉದ್ಯಮಿ ಎಂ.ಕೆ. ದಿನೇಶ್, ಉಪಾಧ್ಯಕ್ಷರಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮೈಮುನ, ಕಾರ್ಯದರ್ಶಿ ಯಾಗಿ ಕಣಿವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಎಸ್. ಗಣೇಶ್ ಅಧಿಕಾರ ಸ್ವೀಕರಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಕುಶಾಲನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಸ್ವಾಗತಿಸಿದರು.
ನಂತರ ಮಾತನಾಡಿದ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯು ಮಾನವ ನಿರ್ಮಾಣದ ಒಂದು ಮಹತ್ವದ ಶಿಕ್ಷಣ ನೀಡುವುದರೊಂದಿಗೆ ವಿದ್ಯಾರ್ಥಿಗಳು - ಯುವಜನಾಂಗ ಶಿಸ್ತು, ಸಂಯಮ ಕಲಿಕೆಯೊಂದಿಗೆ ಉತ್ತಮ ನಾಗರಿಕರಾಗಲು ಸಹಕಾರಿಯಾಗಿದೆ. ಜತೆಗೆ ಯುವಜನತೆಯ ಬೆಳವಣಿಗೆಗೆ ಸಹಕರಿಸುವುದೇ ಚಳವಳಿಯ ಉದ್ದೇಶವಾಗಿದೆ ಎಂದರು.
ಪ್ರತಿಜ್ಞಾ ವಿಧಿ ಬೋಧಿಸಿ ಸಂಸ್ಥೆಯ ಮೂಲಭೂತ ತತ್ವಗಳು ಮತ್ತು ಉದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ, ಈ ಸಂಸ್ಥೆಯು ಯುವ ಜನತೆಗಾಗಿರುವ, ಸ್ವಯಂ ಪ್ರೇರಿತವಾದ, ರಾಜಕೀಯವಲ್ಲದ, ಶೈಕ್ಷಣಿಕ ಚಳವಳಿಯಾಗಿದೆ ಎಂದರು.
ಸAಸ್ಥೆಯ ತಾಲೂಕು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಎಂ.ಕೆ. ದಿನೇಶ್, ರಾಷ್ಟಿçÃಯ ಹಾಗೂ ಅಂರ್ರಾಷ್ಟಿçÃಯ ಶಾಂತಿ, ಅರಿವು ಮತ್ತು ಸಹಕಾರಗಳ ಬೆಳವಣಿಗೆಯೊಂದಿಗೆ ಸಾಮರಸ್ಯ ಹೊಂದಿದ ರಾಷ್ಟçನಿಷ್ಠೆ ಹೊಂದಿರುವ ಈ ಸಂಸ್ಥೆಯ ಮೂಲಕ ಸಮಾಜದ ಅಭಿವೃದ್ಧಿಗೆ ಎಲ್ಲರೂ ಕಂಕಣಬದ್ಧರಾಗಿ ಶ್ರಮಿಸೋಣ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಮಾತನಾಡಿ, ಈ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ, ಗುಂಪು ಕುಶಲತೆ ಮತ್ತು ವೈಯಕ್ತಿಕ ಹೊಣೆಗಾರಿಕೆಯ ಒಂದು ಪ್ರಜ್ಞೆಯನ್ನು ಬೆಳೆಸಲು ನೆರವಾಗಿದೆ. ಶಾಲೆಗಳಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆಗಳನ್ನು ಸಂಘಟಿಸಲು ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆದ ಸಂಸ್ಥೆಯ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆ.ಎಸ್. ಮೂರ್ತಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ರಾಷ್ಟçಪ್ರೇಮ ಬೆಳೆಸುವುದರೊಂದಿಗೆ ಅವರನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಲು ಪ್ರೇರೇಪಣೆ ನೀಡುತ್ತದೆ ಎಂದರು. ಸಂಸ್ಥೆಯ ಉಪಾಧ್ಯಕ್ಷೆ ಮೈಮುನ ಮಾತನಾಡಿದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷೆ ರಾಣಿ ಮಾಚಯ್ಯ, ಜಿಲ್ಲಾ ಗೈಡ್ಸ್ ಸಂಸ್ಥೆಯ ಆಯುಕ್ತೆ ಬಿ.ಬಿ. ಸಾವಿತ್ರಿ, ಜಿಲ್ಲಾ ಸಂಘಟಕಿ ಯು.ಸಿ. ದಮಯಂತಿ, ಸ್ಥಾನೀಕ ಕಮೀಷನರ್ ಹೆಚ್.ಆರ್. ಮುತ್ತಪ್ಪ, ಕೋಶಾಧಿಕಾರಿ ಪುಷ್ಪವೇಣಿ, ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಟಿ.ಜಿ. ಪ್ರೇಮಕುಮಾರ್, ಸಹ ಕಾರ್ಯದರ್ಶಿ ಸರೋಜ, ಜಿಲ್ಲಾ ತರಬೇತುದಾರ ಸುರೇಶ್ ಕುಮಾರ್, ಗೈಡ್ ಕ್ಯಾಪ್ಟನ್ ಸುಲೋಚನ, ಸಂಸ್ಥೆಯ ಸೋಮವಾರಪೇಟೆ ತಾಲೂಕು ಘಟಕದ ಕಾರ್ಯದರ್ಶಿ ಟಿ.ಎಸ್. ಚಂದ್ರಶೇಖರ್, ಸಂಪನ್ಮೂಲ ವ್ಯಕ್ತಿ ಕೆ.ಯು. ರಂಜಿತ್, ಸಂಸ್ಥೆಯ ಸಂಪಾಜೆ ವಲಯದ ಅಧ್ಯಕ್ಷ ಎಂ. ಧನಂಜಯ, ಕಾರ್ಯದರ್ಶಿ ಉಷಾರಾಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖರಾದ ಎಂ.ಎನ್. ವೆಂಕಟನಾಯಕ್, ಎಸ್. ನಾಗರಾಜ್, ಕೆ.ವಿ. ಉಮೇಶ್, ಟಿ.ವಿ. ಶೈಲಾ, ಸಿ.ಆರ್.ಪಿ. ,ಎಸ್.ಆರ್. ಶಿವಲಿಂಗ, ಇತರರು ಇದ್ದರು.
ಸಂಸ್ಥೆಯ ಜಿಲ್ಲಾ ಗೈಡ್ ಆಯುಕ್ತೆ ಬಿ.ಬಿ. ಸಾವಿತ್ರಿ ಸ್ವಾಗತಿಸಿದರು. ತಾಲೂಕು ಕಾರ್ಯದರ್ಶಿ ಟಿ.ಎಸ್. ಚಂದ್ರಶೇಖರ್ ವಂದಿಸಿದರು.