ಶನಿವಾರಸAತೆ, ಏ. ೯: ಸಮೀಪದ ಕೊಡ್ಲಿಪೇಟೆಯ ಶ್ರೀರಾಮಲಿಂಗ ಚೌಡೇಶ್ವರಿ ದೇವಾಲಯದ ಸಮುದಾಯ ಭವನದಲ್ಲಿ ನೇಕಾರ ಸಮುದಾಯದವರು ವಚನಕಾರ ದೇವರ ದಾಸಿಮಯ್ಯ ಜಯಂತ್ಯೋತ್ಸವವನ್ನು ಆಚರಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಡಿ.ವಿ. ಸತೀಶ್ ಮಾತನಾಡಿ, ವಚನಕಾರ ದೇವರ ದಾಸಿಮಯ್ಯ ಅವರ ಜಯಂತಿಯನ್ನು ಸರಳವಾಗಿ ಆಚರಿಸಿ ಆಚರಣೆಗೆ ಚಾಲನೆ ನೀಡಲಾಗಿದೆ. ಮುಂದೆ ನೇಕಾರ ಸಮುದಾಯದವರು ಸ್ಥಳೀಯವಾಗಿ ಆಚರಿಸಲು ನಿರ್ಧರಿಸಿರುವುದರಿಂದ ಮುಂದಿನ ವರ್ಷ ಸಮುದಾಯ ಭವನದಲ್ಲೇ ವಿಜೃಂಭಣೆಯಿAದ ಆಚರಿಸಲಾಗುವುದು ಎಂದರು.
ಸದಸ್ಯರಾದ ಸುರೇಶ್, ಪ್ರಭಾಕರ್, ಚಂದ್ರಶೇಖರ್, ದಿನೇಶ್, ಯತೀಶ್, ನಿರ್ಮಲಾ, ರೇಖಾ, ಪದ್ಮಜ, ಭವ್ಯ, ಪೂರ್ಣಿಮಾ, ಲತಾ, ವಿಶಾಲ, ಜಯಶ್ರೀ, ಇತರರು ಹಾಜರಿದ್ದರು.