(ವಿಶೇಷ ವರದಿ : ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಏ. ೯: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ೮೪೦ಚ.ಕಿ.ಮೀ. ವಿಸ್ತೀರ್ಣವಿದ್ದು ನಾಗರಹೊಳೆ ವನ್ಯ ಜೀವಿ ಪ್ರದೇಶದಲ್ಲಿ ೧೨೫ ಹುಲಿಗಳು ವಾಸಿಸುತ್ತಿವೆ. ಹುಲಿಯ ರಕ್ಷಣೆಗೆ ಇಲಾಖೆಯು ಅಗತ್ಯ ಕ್ರಮ ಕೈಗೊಂಡಿದೆ. ಹುಲಿಯ ಹತ್ಯೆಯನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಸಹಜವಾಗಿ ಹುಲಿಯ ಸಂತತಿ ವೃದ್ಧಿಸುತ್ತಿವೆ. ಅರಣ್ಯದಲ್ಲಿ ಸಿಗುವ ಪ್ರಾಣಿಗಳನ್ನು ಬೇಟೆಯಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತ ದಿನಗಳನ್ನು ಕಳೆಯುತ್ತಿವೆ. ಆಗಿಂದ್ದಾಗ ಕೆಲವು ಹುಲಿಗಳು ಅರಣ್ಯದಂಚಿನ ಪ್ರದೇಶಗಳಿಗೆ ತೆರಳಿ ಇಲ್ಲಿ ಸುಲಭವಾಗಿ ಸಿಗುವ ಜಾನುವಾರುಗಳ ಮೇಲೆ ದಾಳಿ ನಡೆಸಿ ನಂತರ ಅರಣ್ಯ ಪ್ರದೇಶದತ್ತ ವಾಪಸ್ಸಾಗುತ್ತಿವೆ. ವಯಸ್ಸಾದ ಹುಲಿಗಳು ಅರಣ್ಯದಂಚಿನ ಪ್ರದೇಶವನ್ನೇ ತಮ್ಮ ವಾಸಸ್ಥಳವನ್ನಾಗಿ ಮಾಡಿಕೊಂಡಿವೆ.

ದಟ್ಟಾರಣ್ಯವನ್ನು ತಮ್ಮ ವಾಸಸ್ಥಳವನ್ನಾಗಿ ಮಾಡಿಕೊಂಡಿರುವ ಹುಲಿಗಳು ಆಗಿಂದ್ದಾಗ ಜನವಲಯದ ಪ್ರದೇಶಗಳಿಗೆ ಬರುತ್ತಿರುತ್ತದೆ. ಈ ವೇಳೆ ತಮ್ಮ ಆಹಾರಕ್ಕಾಗಿ ಸ್ಥಳೀಯ ರೈತರ ಜಾನುವಾರುಗಳ ಮೇಲೆ ದಾಳಿ ನಡೆಸಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ನಂತರ ತಾವು ಬಂದ ಪ್ರದೇಶಕ್ಕೆ ವಾಪಸ್ಸಾಗುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ೧೪ ದಿನಗಳ ಹಿಂದೆ ಬಿಟ್ಟಂಗಾಲ ಸಮೀಪದ ಸುತ್ತಮುತ್ತಲಿನ ಗ್ರಾಮದಲ್ಲಿ ಹುಲಿಯೊಂದರ ಸಂಚಾರವಿದ್ದು ಅನೇಕ ಜಾನುವಾರುಗಳನ್ನು ಕೊಂದು ತನ್ನ ಆಹಾರವನ್ನಾಗಿ ಮಾಡಿಕೊಂಡಿತ್ತು. ನಂತರ ಅಮಾಯಕ ಕಾರ್ಮಿಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ತದ ನಂತರ ಹುಲಿಯ ಓಡಾಟ ಈ ಭಾಗದಲ್ಲಿ ಕಂಡು ಬಂತಾದರೂ ಯಾವುದೇ ಅನಾಹುತಗಳು, ಜಾನುವಾರುಗಳ ಮೇಲೆ ದಾಳಿ ವರದಿಯಾಗಿಲ್ಲ. ಇದರಿಂದ ಸಹಜವಾಗಿಯೇ ಹುಲಿಗಳು ತಮ್ಮ ವಾಸ ಸ್ಥಳದತ್ತ ಹೆಜ್ಜೆ ಹಾಕಿರಬಹುದೆಂದು ಭಾವಿಸಲಾಗಿದೆ.

ಬ್ರಹ್ಮಗಿರಿ ಅರಣ್ಯ ವ್ಯಾಪ್ತಿಯ ಮಾಕುಟ್ಟ ವನ್ಯ ಜೀವಿ ವಿಭಾಗದಿಂದ ಹುಲಿಗಳು ದ.ಕೊಡಗಿನ ಬಿಟ್ಟಂಗಾಲ ಸಮೀಪದ ರುದ್ರಗುಪ್ಪೆ ಬಿ.ಶೆಟ್ಟಿಗೇರಿಯ ಕೊಂಗಣ, ಕುಂದ ಭಾಗದ ಈಚೂರು ಮುಂತಾದ ೫ ಕಿ.ಮೀ.ಸುತ್ತಳತೆಯಲ್ಲಿ ನಾಲ್ಕುಹುಲಿಗಳು ಸಂಚಾರ ಮಾಡುತ್ತಿರುವ ಬಗ್ಗೆ ಕುಟ್ಟಂದಿ ಬಳಿ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆಯ ತಂಡಕ್ಕೆ ಮಾಹಿತಿ ದೊರೆತಿದೆ.

ಈ ಭಾಗದಲ್ಲಿ ಅರಣ್ಯ ಇಲಾಖೆಯು ೬೦ಕ್ಕೂ ಹೆಚ್ಚಿನ ಕ್ಯಾಮರಾಗಳನ್ನು ಇಟ್ಟು ಹುಲಿಯ ಸಂಚಾರದ ಬಗ್ಗೆ ಮಾಹಿತಿ ಪಡೆದಿತ್ತು. ಕ್ಯಾಮರಾದಲ್ಲಿ ಸಿಕ್ಕಿರುವ ಹುಲಿಯ ಚಿತ್ರಗಳನ್ನು ಈಗಾಗಲೇ ಹುಲಿಗಳು ಯಾವ ಪ್ರದೇಶದಿಂದ ಆಗಮಿಸಿರ ಬಹುದೆಂದು ತಿಳಿಯಲು ಉನ್ನತ ಮಟ್ಟದ ಅಧಿಕಾರಿಗಳಿಗೆ ಕಳುಹಿಸಿ ಕೊಡಲಾಗಿದೆ. ಅಲ್ಲದೆ ಒಂದನೇ ರುದ್ರಗುಪ್ಪೆಯಲ್ಲಿ ಕಾರ್ಮಿಕ ಗಣೇಶ್‌ನ ಮೇಲೆರಗಿ ಪ್ರಾಣ ತೆಗೆದ ಹುಲಿಯನ್ನು ಪತ್ತೆ ಹಚ್ಚಲು ಪ್ರಯತ್ನ ನಡೆದಿದೆ.

ನಿರ್ಜನ ಪ್ರದೇಶ ಹಾಗೂ ಯಾವ ಸದ್ದು ಗದ್ದಲವಿಲ್ಲದ ಜಾಗಗಳನ್ನು ಆರಿಸಿಕೊಳ್ಳುವ ಅತೀ ಸೂಕ್ಷö್ಮತೆ ಉಳ್ಳ ಹುಲಿಯು ಸಮೀಪದಲ್ಲಿ ಹರಿಯುವ ಶುದ್ಧವಾದ ನೀರಿನ ಜಾಗವನ್ನು ಆರಿಸಿಕೊಳ್ಳುತ್ತವೆ. ಹೀಗಾಗಿ ಬಿಟ್ಟಂಗಾಲ ಸಮೀಪದ ಕೊಂಗಣ ಭಾಗದಲ್ಲಿ ಹರಿಯುತ್ತಿರುವ ಹೊಳೆಯ ಪ್ರದೇಶವನ್ನು ಆರಿಸಿಕೊಂಡಿದೆ. ಪ್ರತಿ ದಿನ ತನ್ನ ಆಹಾರವನ್ನು ಹುಡುಕಿಕೊಂಡು ರುದ್ರಗುಪ್ಪೆ, ಈಚೂರು, ಕೊಳತ್ತೋಡು, ಬೈಗೋಡು, ನಾಂಗಾಲ, ಬಿ.ಶೆಟ್ಟಿಗೇರಿ ಮುಂತಾದ ಭಾಗದಲ್ಲಿ ಸಂಚಾರ ಮಾಡುತ್ತಿವೆ.

ಕಾರ್ಯಾಚರಣೆ ತಂಡವು ಕಾರ್ಮಿಕ ಗಣೇಶ ಹುಲಿ ದಾಳಿಗೆ ಮೃತಪಟ್ಟ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಿ ಕ್ಯಾಮರಾಗಳ ಮೂಲಕ ಹುಲಿಯ ಸಂಚಾರವನ್ನು ಪತ್ತೆ ಹಚ್ಚುವ ಪ್ರಯತ್ನ ಭರದಿಂದ ಸಾಗುತ್ತಿದೆ. ಗಣೇಶನ ಮೃತ ದೇಹದ ಸುತ್ತಮುತ್ತಲಿನಲ್ಲಿ ಹುಲಿಯ ಕೂದಲನ್ನು

(ಮೊದಲ ಪುಟದಿಂದ) ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇದರಿಂದ ನರ ಭಕ್ಷಕ ಹುಲಿಯನ್ನು ಕಂಡು ಹಿಡಿಯಲು ಕಾರ್ಯಾಚರಣೆ ತಂಡಕ್ಕೆ ಅನುಕೂಲವಾಗಲಿದೆ. ವಿಧಿವಿಜ್ಞಾನ ಪ್ರಯೋಗಾಲಯದಿಂದ ಬರುವ ಮಾಹಿತಿಗಾಗಿ ಕಾರ್ಯಾಚರಣೆ ತಂಡ ಎದುರು ನೋಡುತ್ತಿದೆ.

ಅರಣ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ನಡುವೆ ಹುಲಿ ದಾಳಿ ನಡೆಸಿದ ಸಂದರ್ಭ ಆಗಿಂದ್ದಾಗ ಘರ್ಷಣೆಗಳು ನಡೆದಿವೆ. ಈ ಸಂದರ್ಭ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮಾತಿನ ಚಕಾಮಕಿಯು ವ್ಯಾಗ್ಯುದ್ಧಕ್ಕೆ ಕಾರಣವಾಗಿದೆ. ಹುಲಿ ಹಾವಳಿಯಿಂದ ರೈತರ ಜಾನುವಾರುಗಳು ಸಾವನ್ನಪ್ಪುತ್ತಿರುವುದರಿಂದ ಸುತ್ತಮುತ್ತಲಿನ ರೈತರು ಜಾನುವಾರುಗಳ ಸಾಕಾಣಿಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಿದ್ದಾರೆ. ಇತ್ತ ಹುಲಿಯಿಂದ ದಾಳಿಯಾದ ಜಾನುವಾರುಗಳ ಮಾಲೀಕರಿಗೆ ಅರಣ್ಯ ಇಲಾಖೆಯ ವತಿಯಿಂದ ನಿಗದಿತ ಪರಿಹಾರ ಹಾಗೂ ಕೂರ್ಗ್ ಫೌಂಡೇಷನ್ ವತಿಯಿಂದ ಜಾನುವಾರುಗಳ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯ ಧನವನ್ನು ಹಾಗೂ ಅರಣ್ಯ ಪ್ರದೇಶದ ಸುತ್ತಮುತ್ತಲಿನ ತೋಟದ ಮಾಲೀಕರಿಗೆ ಹುಲಿ ಹಾಗೂ ಆನೆ ಹಾವಳಿಯಿಂದ ರಕ್ಷಣೆ ಪಡೆಯಲು ಸೋಲಾರ್ ಬೇಲಿಯನ್ನು ಅಳವಡಿಸಲು ಸಹಾಯಧನ ವಿತರಿಸಲಾಗುತ್ತಿದೆ.ಕಳೆದ ಹತ್ತು ದಿನಗಳ ಕಾಲ ವಿರಾಮ ನೀಡಿದ್ದ ಹುಲಿರಾಯ ಶನಿವಾರ ಸಂಜೆಯ ವೇಳೆ ಕುಂದ ಈಚೂರು ಬಳಿಯಲ್ಲಿ ಹಸು ಮತ್ತು ಕರುವನ್ನು ಕೊಂದು ಹಾಕಿದೆ. ಕುಂದ ಗ್ರಾಮದ ಗುಮ್ಮಟೀರ ಶಂಬು ಎಂಬವರಿಗೆ ಸೇರಿದ ಹಸುವನ್ನು ಹುಲಿಯು ಶನಿವಾರ ಸಂಜೆಯ ವೇಳೆಯಲ್ಲಿ ದಾಳಿ ನಡೆಸಿ ಕೊಂದು ಹಾಕಿದೆ.

ಕುಂದ ಗ್ರಾಮದ ನೆರವಂಡ ಪೂವಮ್ಮ ಎಂಬವರಿಗೆ ಸೇರಿದ ಕರುವನ್ನು ಕಳೆದ ಎರಡು ದಿನಗಳ ಹಿಂದೆ ಕೊಂದು ಹಾಕಿದ್ದು ಇದರ ಬಹುತೇಕ ದೇಹವನ್ನು ಹುಲಿ ತಿಂದು ಹಾಕಿದೆ. ಅರಣ್ಯ ಇಲಾಖೆಯ ಕಾರ್ಯಾಚರಣೆ ತಂಡ ಕುಂದ ಈಚೂರು ಭಾಗಕ್ಕೆ ತೆರಳಿ ಹುಲಿಯ ಸೆರೆಗೆ ಬೋನನ್ನು ಅಳವಡಿಸಿದೆ. ಈ ಭಾಗದಲ್ಲಿ ಹುಲಿಯ ಸಂಚಾರ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತಂಡ ಕುಂದ ಈಚೂರು ಭಾಗದಲ್ಲಿ ಬೀಡು ಬಿಟ್ಟಿದೆ.

ಘಟನೆ ನಡೆದ ಸ್ಥಳಕ್ಕೆ ಡಿಎಫ್‌ಓ ಚಕ್ರಪಾಣಿ, ತಿತಿಮತಿ ವಲಯದ ಎ.ಸಿ.ಎಫ್. ಉತ್ತಪ್ಪ, ಪೊನ್ನಂಪೇಟೆ ವಲಯ ಆರ್.ಎಫ್.ಓ. ಅಶೋಕ್ ಹುನಗುಂದ, ದಿವಾಕರ್, ಸೇರಿದಂತೆ ಇನ್ನಿತರ ಅಧಿಕಾರಿಗಳು ಭೇಟಿ ನೀಡಿದ್ದು ಅಗತ್ಯ ಕ್ರಮ ಕೈಗೊಂಡಿದ್ದಾರೆ.ಕೇರಳದಿAದ ಬಂದಿರಬಹುದೇ.?

ಮಾಕುಟ್ಟ ವನ್ಯಜೀವಿ ವಿಭಾಗಕ್ಕೆ ಸೇರಿರುವ ಬ್ರಹ್ಮಗಿರಿ ಅರಣ್ಯ ಪ್ರದೇಶವು ಕೇರಳ ರಾಜ್ಯದ ಗಡಿ ಪ್ರದೇಶಕ್ಕೆ ಹೊಂದಿಕೊAಡಿರುವುದರಿAದ ಈ ಭಾಗದಿಂದ ಹುಲಿಗಳು ಇತ್ತ ಮುಖ ಮಾಡಿರುವ ಬಗ್ಗೆಯು ಸಮಗ್ರ ತನಿಖೆ ನಡೆಯುತ್ತಿದೆ. ಈ ಪ್ರದೇಶಕ್ಕೆ ಸಮೀಪವಿರುವ ದ.ಕೊಡಗಿನ ರುದ್ರಗುಪ್ಪೆ ಬಿ.ಶೆಟ್ಟಿಗೇರಿಯ ಕೊಂಗಣ, ಕುಂದ ಭಾಗದ ಈಚೂರು ಮುಂತಾದ ೫ ಕಿ.ಮೀ. ಸುತ್ತಳತೆಯಲ್ಲಿ ಈ ನಾಲ್ಕು ಹುಲಿಗಳು ಸಂಚಾರ ಮಾಡುತ್ತಿವೆ. ನಂತರ ಇವುಗಳು ಬ್ರಹ್ಮಗಿರಿ ಅರಣ್ಯ ಪ್ರದೇಶದತ್ತ ವಾಪಸ್ಸಾಗುತ್ತಿವೆಯೇ ಎಂದು ತಿಳಿಯಲು ಇಲಾಖೆಯು ಎಲ್ಲಾ ರೀತಿಯ ಕ್ರಮಗಳನ್ನು ಕೈಗೆತ್ತಿಕೊಂಡಿವೆ.

ನಾಗರಹೊಳೆ ವ್ಯಾಪ್ತಿಯ ಹುಲಿಗಳಲ್ಲ...

ನಾಗರಹೊಳೆ ವನ್ಯಜೀವಿ ವಿಭಾಗದ ಸುಮಾರು ೮೪೩ ಚ.ಕಿ.ಮೀನಲ್ಲಿ ಈಗಾಗಲೇ ೧೨೫ ಹುಲಿಗಳು ವಾಸವಾಗಿರುವ ಬಗ್ಗೆ ನಾಗರಹೊಳೆ ವನ್ಯ ಜೀವಿ ವಿಭಾಗದ ಡಿಎಫ್‌ಒ ಮಹೇಶ್ ಕುಮಾರ್ ಅಧಿಕೃತ ಮಾಹಿತಿ ಒದಗಿಸಿದ್ದಾರೆ. ಈ ಭಾಗದಿಂದ ಹುಲಿಯ ಸಂಚಾರವು ಬೇರೆಡೆ ಕಂಡು ಬಂದಲ್ಲಿ ಪತ್ತೆ ಹಚ್ಚಬಹುದಾಗಿದೆ. ಬಿಟ್ಟಂಗಾಲ ಸಮೀಪದ ಒಂದನೇ ರುದ್ರಗುಪ್ಪೆಯಲ್ಲಿ ಕಾರ್ಮಿಕನ ಮೇಲೆರಗಿದ ಹುಲಿಯು ನಾಗರಹೊಳೆ ವನ್ಯ ಜೀವಿ ವ್ಯಾಪ್ತಿಯಲ್ಲಿರುವ ಹುಲಿ ಅಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಹೀಗಾಗಿ ಬಿ.ಶೆಟ್ಟಿಗೇರಿ, ಕುಂದ, ಈಚೂರು ಹಾಗೂ ರುದ್ರಗುಪ್ಪೆ ಸುತ್ತಮುತ್ತಲಿನಲ್ಲಿ ಕ್ಯಾಮರಾಕ್ಕೆ ಸೆರೆಯಾದ ನಾಲ್ಕು ಹುಲಿಗಳು ಕೇರಳ ಗಡಿಭಾಗದಿಂದ ಮಾಕುಟ್ಟ ವನ್ಯಜೀವಿ ವಿಭಾಗದ ಮೂಲಕ ಬ್ರಹ್ಮಗಿರಿ ಅರಣ್ಯ ಪ್ರದೇಶದಿಂದ ಇತ್ತ ಆಗಮಿಸಿರಬಹುದೆಂದು ಹೇಳಲಾಗಿದೆ.

೫ ಕ್ಯಾಮರಾ ಅಪಹರಣ.!

ಕಳೆದ ಮಾರ್ಚ್ ೨೮ರಂದು ಬಿಟ್ಟಂಗಾಲ ಸಮೀಪದ ೧ನೇ ರುದ್ರಗುಪ್ಪೆ ಬಳಿ ಕಾಳು ಮೆಣಸು ಕುಯ್ಯುವ ಸಂದರ್ಭ ಕಾರ್ಮಿಕ ಗಣೇಶನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು ನಂತರ ಈ ವಿಷಯದಲ್ಲಿ ರೈತ ಸಂಘ ಹಾಗೂ ಗ್ರಾಮದ ಜನತೆ ತೀವ್ರ ಪ್ರತಿಭಟನೆ ನಡೆಸಿ ನರಹಂತಕ ಹುಲಿಯನ್ನು ಕೊಂದು ಹಾಕುವಂತೆ ಇಲಾಖೆಯ ಮೇಲೆ ಒತ್ತಡ ಹಾಕಿದ್ದರು.

ತದ ನಂತರ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ವತಿಯಿಂದ ೫ ವಿವಿಧ ತಂಡಗಳು ಕಾರ್ಯಾಚರಣೆಗೆ ಇಳಿದಿದ್ದವು. ಈ ವೇಳೆ ಹುಲಿಯ ಪತ್ತೆಗಾಗಿ ವಿವಿಧ ಪ್ರದೇಶದಲ್ಲಿ ಕಾರ್ಯಾಚರಣೆ ತಂಡವು ಕ್ಯಾಮರಾಗಳನ್ನು ಅಳವಡಿಸಿತ್ತು. ಇದರ ಮೂಲಕ ಹುಲಿಯ ಸಂಚಾರವನ್ನು ತಿಳಿಯಲು ಅನುಕೂಲವಾಗಿತ್ತು. ಆದರೆ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ೫ ಕ್ಯಾಮರಾಗಳನ್ನು ಅಪರಿಚಿತರು ಅಪಹರಣ ಮಾಡಿರುವ ಬಗ್ಗೆ ವರದಿಯಾಗಿದೆ.

ಇದರಿಂದ ಇಲಾಖೆಗೆ ಇನ್ನುಳಿದ ಕ್ಯಾಮರಾಗಳನ್ನು ರಕ್ಷಣೆ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕುಂದ, ಬಿ.ಶೆಟ್ಟಿಗೇರಿ ಹಾಗೂ ಬೇಗೂರು ಭಾಗದಲ್ಲಿ ಅಳವಡಿಸಲಾಗಿದ್ದ ಕ್ಯಾಮರಾಗಳನ್ನು ಅಪರಿಚಿತರು ಅಪಹರಣ ಮಾಡಿದ್ದು ಒಂದು ಕ್ಯಾಮರಾದ ಬೆಲೆ ರೂ. ೧೫ ಸಾವಿರ ಎಂದು ತಿಳಿದು ಬಂದಿದೆ. ಕ್ಯಾಮರಾ ಅಪಹರಣಕ್ಕೆ ಸಂಬAಧಿಸಿದAತೆ ಇಲಾಖಾಧಿಕಾರಿಗಳು ಸದ್ಯದಲ್ಲಿಯೇ ಪೊಲೀಸ್ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇರಳದಿಂದ ಬಂದಿರಬಹುದೇ.?