೨೦೦೨ ರಲ್ಲಿ ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆಯ

ಮುಂದುವರಿದ ಭಾಗ ಈ ಕೆಳಗಿನಂತಿದೆ.

ಈ ಕ್ಷೇತ್ರ ಪರಿಧಿಯಲ್ಲಿ ಮದ್ಯ, ಮಾಂಸ, ಮೋಜು, ದ್ಯೂತ ಇತ್ಯಾದಿ ಅನೈತಿಕ ವ್ಯಸನ ಸಂಬAಧಿಯಾದ ಮಾರಾಟ ವ್ಯವಹಾರವೂ ಸರ್ವಥಾ ನಿಷಿದ್ಧವಾಗಿರುತ್ತದೆ ಎಂಬುದನ್ನು ಎಲ್ಲರೂ ತಿಳಿದಿರತಕ್ಕದ್ದು.

ಬ್ರಹ್ಮಗಿರಿಯೇ ಮೊದಲಾದ ವಿವಿಧ ದೇವ ಸಂಕೇತÀಗಳಿಗೆ ಹೋಗುವ ದಾರಿಯಲ್ಲಿ ಭಕ್ತರಿಗೆ ಮಾರ್ಗದರ್ಶಕವೂ, ಸ್ಥಳ ಪುರಾಣದ ಸೂಚಕವೂ, ಭಕ್ತಿ ಪ್ರಚೋದಕವೂ ಆದ ಉನ್ನತ ಶಿಲ್ಪಕಲಾ ಸಂಪುಟವಾದ ಭವ್ಯ ಮಹಾದ್ವಾರವನ್ನು ನಿರ್ಮಿಸಿ, ವೈಭವದ ವಾತಾವರಣವನ್ನು ಸೃಷ್ಟಿ ಮಾಡತಕ್ಕದ್ದು. ರಕ್ಷಕರು, ಆಡಳಿತ ವರ್ಗದವರು ಲೆಕ್ಕಪತ್ರಗಳನ್ನು ಸರಿಯಾಗಿ ಪ್ರಾಮಾಣಿಕವಾಗಿ ಇಟ್ಟು ಶ್ರೀ ದೇವರ ಸ್ಥಿರ ಭಂಡಾರ ವೃದ್ಧಿಯಲ್ಲಿರುವಂತೆ ನೋಡಿಕೊಳ್ಳತಕ್ಕದ್ದು ಬಹುಮುಖ್ಯವಾಗಿರುತ್ತದೆ. ಶ್ರೀಯುತ ತಂತ್ರಿಗಳ ಸಮಕ್ಷಮದಲ್ಲಿ ಆಡಳಿತ ಮಂಡಳಿ, ಸೀಮೆಯ ಸಮಸ್ತರು, ಎಲ್ಲ ಭಕ್ತಮಹಾಜನತೆ, ಅರ್ಚಕರು, ಸಿಬ್ಬಂದಿ ವರ್ಗದವರೂ ಸೇರಿ ದೇವಾಲಯ ನಿಯಮ ಸಂವಿಧಾನವನ್ನು ರೂಪಿಸಿ ಅದರಂತೆ ನಡೆದುಕೊಳ್ಳುವ ಪ್ರತಿಜ್ಞೆಯನ್ನು ಎಲ್ಲರೂ ಕೈಗೊಳ್ಳತಕ್ಕದ್ದು ಅತ್ಯಂತ ಅಗತ್ಯವಾಗಿರುತ್ತದೆ. ಆಚಾರ್ಯರ ತಪಸ್ಸು, ವೇದಮಂತ್ರಾದಿಗಳ ಜಪ, ದೇವಾಲಯದ ನಿಯಮ, ಉತ್ಸವ, ವಿಶೇಷ ಉತ್ಸವಾದಿಗಳು, ಅನ್ನದಾನ ಇತ್ಯಾದಿಗಳಿಂದ ಕ್ಷೇತ್ರಾಭಿವೃದ್ಧಿಯಾಗುತ್ತದೆಯಾದ್ದರಿಂದ ಈ ವಿಷಯ ಗಳಲ್ಲಿ ಅತ್ಯಂತ ಭಯ, ಭಕ್ತಿ ಮತ್ತು ಅನುರಾಗದಿಂದ ಆಡಳಿತ ಮಂಡಳಿ, ಅರ್ಚಕರು, ಸಿಬ್ಬಂದಿಗಳು ಮತ್ತು ಮಹಾಜನತೆ ಶ್ರದ್ಧೆ ವಹಿಸಿ ನಿರಂತರವಾಗಿ ಮುಂದುವರೆಯುವAತೆ ನೋಡಿಕೊಳ್ಳತಕ್ಕದ್ದು.

ದೇವತಾ ನೈವೇದ್ಯಗಳನ್ನು ಅತ್ಯಂತ ಪರಿಶುದ್ಧಿಯಿಂದ ಉತ್ತಮ ದ್ರವ್ಯಗಳನ್ನು ಉಪಯೋಗಿಸಿ ಪೂರ್ಣ ಪಾತ್ರದಲ್ಲಿ ಲೋಪವಿಲ್ಲದೇ, ಪೂರ್ವ ಪದ್ಧತಿ ಪ್ರಕಾರ, ಪರಮಾನ್ನ, ಅಪ್ಪವಡೆ, ಫಲ, ಕ್ಷೀರ, ತ್ರಿಮಧುರ, ತಾಂಬೂಲ, ಅಡಿಕೆ, ಹೊದಲು, ತೆಂಗಿನಕಾಯಿ ಸಮರ್ಪಣೆ ಇತ್ಯಾದಿಗಳನ್ನೂ ಪರಿಶುದ್ಧವಾದ ಕುಂಕುಮ, ಗಂಧ, ಹೂವು, ಹಣ್ಣು ಇತ್ಯಾದಿಗಳ ಉಪಯೋಗ ಮತ್ತು ವಿನಿಯೋಗವನ್ನೂ ಸಕ್ರಮವಾಗಿ ನಡೆಸಿಕೊಂಡು ಬರುವುದು. ಅಪಕ್ವ ನೈವೇದ್ಯಗಳನ್ನು ಸಮರ್ಪಿಸಬಾರದು, ನೈವೇದ್ಯ ಶಾಲೆಯಲ್ಲಿ ನೈವೇದ್ಯ ವಿನಹ ಬೇರೆ ಪಾಕಗಳನ್ನು ಮಾಡಬಾರದು.

ಪರಿಚಾರಕ ವರ್ಗದವರನ್ನು ನೇಮಿಸಿ, ಶುಚಿತ್ವ, ಹೂವು, ಪರಿಕರ್ಮ ಗಳಲ್ಲಿ ಅವರು ಉದ್ಯುಕ್ತರಾಗುವಂತೆ ಮಾಡತಕ್ಕದ್ದು ಮತ್ತು ಅವರೂ ಶುದ್ದಿಯಲ್ಲಿರತಕ್ಕದ್ದು, ದೇವಾಲಯದ ದೀಪ , ಪೂಜಾ ಸಾಮಗ್ರಿ, ನೈವೇದ್ಯ ಪಾತ್ರೆ ಸಾಮಗ್ರಿ, ಉತ್ಸವ ಸಂಬAಧಿ ಪರಿಕರಗಳು ಮತ್ತು ಆಭರಣ ವಿಶೇಷ ಗಳು, ಭೂಷಣಾದಿಗಳನ್ನು ಅಭಿವೃದ್ಧಿಪಡಿಸತಕ್ಕದ್ದು ಹಾಗೂ ಸಂರಕ್ಷಿಸತಕ್ಕದ್ದು ಅಗತ್ಯ. ಸನ್ಯಾಸಿಗಳು ಮಠಾಧಿಪತಿಗಳು ಈ ಕ್ಷೇತ್ರಕ್ಕೆ ಆಗಮಿಸುವ ಸಮಯದಲ್ಲಿ ಯಥೋಚಿತವಾದ ಪೂರ್ವಶಿಷ್ಟ ಸಂಪ್ರದಾಯದ ರೀತ್ಯಾ ಸ್ವಾಗತ, ವಸತಿ ಇತ್ಯಾದಿಗಳ ವ್ಯವಸ್ಥೆ ಮಾಡುವುದು ಅಗತ್ಯ.ಅರ್ಚಕರು, ವೈದಿಕ ವಿದ್ಯಾಭ್ಯಾಸ, ಶಾಸ್ತಾçಧ್ಯಯನಗಳಿಗೆ ಪ್ರಾಶಸ್ತö್ಯ ಕೊಟ್ಟು ತಮ್ಮ ಪೂರ್ವಿಕ ಚೈತನ್ಯಗಳ ಮಹಾ ಪರಂಪರೆಯ ಉಳಿವಿಗಾಗಿ ವೇದ, ಶಾಸ್ತಾçದಿಗಳ ಅಧ್ಯಯನಗಳಲ್ಲಿ ತಾವು ಹಾಗೂ ತಮ್ಮವರನ್ನು ತೊಡಗಿಸಿಕೊಂಡು ಪರಂಪರೆಯ ಊರ್ಜಿತಕ್ಕಾಗಿ ಪ್ರತಿಜ್ಞೆ ಮಾಡುವುದು ಅಗತ್ಯವಾಗಿದೆ ಎಂಬುದು ಗಮನಾರ್ಹ ವಿಚಾರವಾಗಿದೆ.

ಉತ್ಸವ, ಉತ್ಸವದ ದಿನ ಪಂಚಾAಗ ಇತ್ಯಾದಿಗಳ ಬಗ್ಗೆ ಶಾಸ್ತಿçÃಯವಾದ ನಿರ್ಣಯವನ್ನು ತಂತ್ರಿಗಳ ಸಮಕ್ಷಮದಲ್ಲಿ ತೆಗೆದುಕೊಂಡು ಮುಂದಕ್ಕೆ ಅದೇ ರೀತಿ ಆಚರಿಸಿಕೊಂಡು ಬರುವುದಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕು.

ಶ್ರೀ ಕ್ಷೇತ್ರದಲ್ಲಿ ಅನ್ನದಾನ ವೃದ್ಧಿ ಮಾಡಬೇಕಾದುದು ಅತಿ ಪ್ರಾಮುಖ್ಯವಾಗಿರುತ್ತದೆ.

ಸರಕಾರ, ಮುಜರಾಯಿ ಸಮಿತಿ ಹಾಗೂ ಸಾರ್ವಜನಿಕ ಭಕ್ತಾದಿಗಳು ಸೇರಿದರೆ ಮಾತ್ರ ಇಲ್ಲಿಯ ಅಭಿವೃದ್ಧಿ ಸಾಧ್ಯ. ಆದ್ದರಿಂದ ಇವುಗಳ ಸಮನ್ವಯತೆ ಯನ್ನು ಕಾಪಾಡಿಕೊಂಡು ಬರುವುದು ಅತ್ಯಗತ್ಯವಾಗಿರುತ್ತದೆ.

ಪ್ರತಿವರ್ಷ ಶ್ರೀ ಅಗಸ್ತö್ಯ ಮಹರ್ಷಿಗಳು, ಶ್ರೀ ಅಗಸ್ತೆö್ಯÃಶ್ವರ, ಶ್ರೀ ಗಣಪತಿ, ಶ್ರೀ ವನ ಶಾಸ್ತಾವು ಸಾನ್ನಿಧ್ಯಗಳಿಗೂ ಕೂಡ ಉತ್ಸವ ವಿಶೇಷ ಪೂಜೆ ಸೇವೆಗಳನ್ನು ನಿಶ್ಚಯಿಸಿ, ನಡೆಸತಕ್ಕದ್ದು, ಶ್ರೀ ಅಗಸ್ತö್ಯ ಮಹರ್ಷಿಗಳನ್ನು ಶ್ರೀ ಅಗಸ್ತೆö್ಯÃಶ್ವರನನ್ನೂ ಬ್ರಹ್ಮಗಿರಿಯಲ್ಲಿರುವ ಸಪ್ತರ್ಷಿಗಳ ಸಂಕೇತವನ್ನೂ ಎಷ್ಟು ಮಾತ್ರಕ್ಕೂ ಕಡೆಗಣಿಸದೇ ಉಪೇಕ್ಷೆ ಮಾಡದೆ, ಪೂಜ್ಯಭಾವ ದಿಂದ ಆರಾಧಿಸಿಕೊಂಡು ಯಾತ್ರಿಕರೂ ಕೂಡಾ ಇದನ್ನು ಆಚರಿಸುವಂತೆ ಒಂದು ಸಂವಿಧಾನ ವನ್ನು ರೂಪಿಸಿಕೊಂಡು ಅದರಂತೆ ಮುಂದು ವರೆಯತಕ್ಕದ್ದು, ಮುಖ್ಯವಾಗಿದೆ.

೨೦೨೨ ರ ಜನವರಿ ತಾ. ೧೪, ೧೫ ಮತ್ತು ೧೬ ರಂದು ನಡೆದ ಅಷ್ಟಮಂಗಲ ಪ್ರಶ್ನೆಗೂ ಮುನ್ನ ತಲಕಾವೇರಿಯ ಶ್ರೀ ಅಗಸ್ತೆö್ಯÃಶ್ವರ ಸನ್ನಿಧಿಯಲ್ಲಿ ಪೂಜೆ, ಶ್ರೀ ಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ, ಶ್ರೀ ಕಾವೇರಿ ಬ್ರಹ್ಮ ಕುಂಡಿಕೆಯಲ್ಲಿ ಪೂಜೆ, ಪ್ರಾರ್ಥನೆ, ಸ್ವರ್ಣ ಪ್ರಶ್ನೆ ಮತ್ತು ನವಗ್ರಹ ಪೂಜೆಯೊಂದಿಗೆ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ಆರಂಭಗೊAಡಿತು. ಮಕರ ಸಂಕ್ರಾAತಿಯ ಶುಭದಿನದಂದು ಮಕರ ರಾಶಿಯ ಕುಂಭ ಲಗ್ನದಲ್ಲಿ ತಲಕಾವೇರಿಯ ಅನ್ನ ಛತ್ರದ ಸಭಾಂಗಣದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.

ಪ್ರಶ್ನೆಯೊಂದಿಗೆ ತಲಕಾವೇರಿ ಕ್ಷೇತ್ರಕ್ಕೆ ಸಂಬAಧಿಸಿದAತೆ ಜೀರ್ಣೋದ್ಧಾರದ ಕೈಂಕರ್ಯ ನಿರ್ವಹಿಸುವ ಸಂದರ್ಭ ಯಾವದೇ ವಿಘ್ನಗಳು ಬಾರದಿರಲೆಂದು ಕ್ಷೇತ್ರದ ತಂತ್ರಿಯವರಾಗಿದ್ದ ನೀಲೇಶ್ವರದ ಶ್ರೀ ಕೆ.ವಿ. ಪದ್ಮನಾಭ ತಂತ್ರಿ ಹಾಗೂ ಇತರ ಪ್ರಮುಖರ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಿಹಾರ ಕ್ರಮಗಳನ್ನು ನಿರ್ಣಯಿಸಲಾಯಿತು.

ಮಕರ ಸಂಕ್ರಾAತಿಯ ಪುಣ್ಯ ಕಾಲದಲ್ಲಿ ಜ. ೧೪ ರಂದು ತಲಕಾವೇರಿ ಕ್ಷೇತ್ರದ ಅಭಿವೃದ್ಧಿಗಾಗಿ ಆರಂಭಗೊAಡ ಪ್ರಶ್ನೆ ವೇಳೆ ಮಕರ ರಾಶಿಯ ಗೋಚರ ಫಲದೊಂದಿಗೆ ಮುಂದುವರಿದು ಜ.೧೬ ರ ಅಪರಾಹ್ನ ೨.೧೫ ಗಂಟೆಗೆ ಮೀನಾ ರಾಶಿ ಫಲದೊಂದಿಗೆ ಮುಕ್ತಾಯಗೊಂಡಿತ್ತು. ಆ ಸಂದರ್ಭ ಆಗಿನ ಜಿಲ್ಲಾಧಿಕಾರಿಯಾಗಿದ್ದ ಜಿ.ವಿ. ರಾಮಚಂದ್ರ, ಕೈಲಾಸಾಶ್ರಮದ ಶ್ರೀ ಪೂರ್ಣಾನಂದ ಸ್ವಾಮೀಜಿ ಮೊದಲಾದವರಿದ್ದರು. ಕೇರಳದ ತಳಿಪರಂಬುವಿನ ಜ್ಯೋತಿಶ್ಶಾಸ್ತç ಪ್ರವೀಣ ಪಿ.ಟಿ. ನಾರಾಯಣ ವಾರಿಯರ್ ಹಾಗೂ ಪುತ್ತೂರಿನ ಗೋಪಾಲಕೃಷ್ಣ ಭಟ್ ಅವರುಗಳು ಪ್ರಶ್ನೆಯನ್ನು ನಡೆಸಿಕೊಟ್ಟರು. ಜ್ಯೋತಿಷಿ ಆಗ ಸಮಿತಿಯವರಿಗೆ ನೇರವಾಗಿ ಕಿವಿ ಮಾತೊಂದನ್ನು ಹೇಳಿ ಮುನ್ನೆಚ್ಚರಿಕೆಯಿತ್ತ್ತಿದ್ದರು. ತಲಕಾವೇರಿ ಕ್ಷೇತ್ರದ ಅಭಿವೃದ್ಧಿಗೆ ಧನ ಸಹಾಯ ತಾನಾಗಿಯೇ ಪ್ರಾಪ್ತಿಯಾಗಲಿದೆ. ಆದರೆ, ಕಾಮಗಾರಿ ನಿರ್ವಹಿಸಲ್ಪಡುವ ದಿನಗಳಲ್ಲಿ ಸಾಕಷ್ಟು ಟೀಕೆ ಟಿಪ್ಪಣಿಗಳು ವ್ಯಕ್ತಗೊಳ್ಳಲಿವೆ.ಅಂತಹ ಯಾವದೇ ಸಂದರ್ಭವನ್ನೂ ಎದೆಗುಂದದ ರೀತಿ ನಿಭಾಯಿಸಿಕೊಂಡು ಅತಿ ಜಾಗ್ರತೆಯಿಂದ ಕಾರ್ಯೋನ್ಮುಖರಾಗಬೇಕೆಂದು ಜ್ಯೋತಿಷ್ಯ ಪರಿಣಿತರು ಸೂಚಿಸಿದ್ದರು.

ಜೀರ್ಣೋದ್ಧಾರ ಸಮಿತಿ

ಈ ಪ್ರಶ್ನಾ ಕಾರ್ಯಗಳು ಮುಕ್ತಾಯ ವಾಗುವಾಗ ರಾಜ್ಯ ಸರಕಾರದ ಪರವಾಗಿ ಆಗಿನ ಮುಜರಾಯಿ ಖಾತೆ ಸಚಿವರಾಗಿದ್ದ ಸುಮಾ ವಸಂತ್ ಅವರು ವೀರಾಜಪೇಟೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರ ಅಧ್ಯಕ್ಷ ಸ್ಥಾನದೊಂದಿಗೆ ಭಾಗಮಂಡಲ-ತಲಕಾವೇರಿ ಜೀರ್ಣೋದ್ಧಾರ ಕಾರ್ಯಕ್ಕಾಗಿ ನೂತನ ಸಾರ್ವಜನಿಕ ಸಮಿತಿ ರಚಿಸಿದರು. ಜೀರ್ಣೋದ್ಧಾರ ಕಾರ್ಯಕ್ಕೂ ಮುನ್ನ ಸಮಿತಿಯು ಈ ಹಿಂದೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಮುಜರಾಯಿ ಸಮಿತಿಯಿಂದ ಕೇಳಲ್ಪಟ್ಟಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿದ್ದ ದೋಷಗಳ ನಿವಾರಣೆಗೆ ಕ್ಷೇತ್ರ ತಂತ್ರಿ ಯವರ ಮೂಲಕ ಪರಿಹಾರ ಕಾರ್ಯ ನಡೆಸಿತು.

ಪರಿಹಾರ ಕಾರ್ಯಗಳು

ತಾ. ೩-೪-೨೦೦೨ ರಿಂದ ೨-೫-೨೦೦೨ ರ ಅವಧಿವರೆಗೆ ಎಲ್ಲ ದೋಷಗಳ ಪರಿಹಾರ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿತು. ತಲಕಾವೇರಿಯಲ್ಲಿ ರಾತ್ರಿ ದೊಂದಿಗಳ ಬೆಳಕಿನಲ್ಲಿ ತಾಂತ್ರಿಕ ವಿಧಾನಗಳಲ್ಲಿಯೂ ಅನೇಕ ಪರಿಹಾರ ಕಾರ್ಯಗಳು ನಡೆದವು. ಪ್ರಶ್ನೆಯಲ್ಲಿ ಬಂದAತೆ ಬಸ್ ಒಂದು ಬೆಳಗಿನ ವೇಳೆಯ ಮಂಜಿನ ಮಬ್ಬಿನಲ್ಲಿ ಚಲಿಸಿ ತಲಕಾವೇರಿಯಲ್ಲಿ ಹಲವು ವರ್ಷಗಳ ಹಿಂದೆ ಅನೇಕ ಗೋವುಗಳು ಸಾವನ್ನಪ್ಪ್ಪಿದ ಘಟನೆ ಕುರಿತು ಸ್ಥಳೀಯರು ಖಾತರಿಪಡಿಸಿದರು. ಇದರ ಪರಿಹಾರವನ್ನು ಉಡುಪಿಗೆ ತೆರಳಿ ಶ್ರೀ ಕೃಷ್ಣನ ಸಮ್ಮುಖದಲ್ಲಿ ವಿಶೇಷ ಪೂಜೆ ಮೂಲಕ ಪರಿಹಾರ ನಡೆಸಲಾಯಿತು. ಸರ್ಪವೊಂದನ್ನು ತಲಕಾವೇರಿಯಲ್ಲಿ ಹಲವು ವರ್ಷಗಳ ಹಿಂದೆ ಹತ್ಯೆಗೈಯಲಾಗಿತ್ತು. ಈ ಕುರಿತು ಪ್ರಶ್ನೆಯಲ್ಲಿ ಕಂಡುಬAದಾಗ ಸ್ಥಳೀಯರು ಅದು ನೈಜ ಮಾಹಿತಿಯೆಂದು ಖಾತರಿಪಡಿಸಿದ್ದರು. ಅದರ ಪರಿಹಾರಾರ್ಥ ಭಾಗಮಂಡಲದ ಪುರೋಹಿತ ರಾಗಿದ್ದ ಅನಂತಭಟ್ (ಈಗ ದಿವಂಗತರು) ವೈದಿಕ ವಿಧಾನದಂತೆ ತಲಕಾವೇರಿಯಲ್ಲಿ ಬ್ರಹ್ಮ ವಟುಗಳ ಸಮ್ಮುಖದಲ್ಲಿ ಸರ್ಪ ಸಂಸ್ಕಾರ ನಡೆಸಿದರು. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿ ಅಲ್ಲಿಯೂ ಆಶ್ಲೇಷ ಬಲಿ ನಡೆಸ ಲಾಯಿತು. ಸನ್ಯಾಸಿಯೊಬ್ಬರು ಸ್ಥಳೀಯರೊಬ್ಬರ ಹಿಂಸೆ ತಾಳಲಾರದೆ ತಲಕಾವೇÀರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ ಅವರ ಬಳಿಯಿದ್ದ ಸ್ವರ್ಣ ಸಹಿತ ವಿಶೇಷ ಸಾಲಿÀಗ್ರಾಮವೊಂದನ್ನು ಸ್ಥಳೀಯರೊಬ್ಬರು ಅಪಹರಿಸಿದ್ದರು. ಇದೆÀಲ್ಲ ನೈಜ ಘಟನೆಗಳೆಂದು ಇತರ ಸ್ಥಳೀಯರು ಖಚಿತಪಡಿಸಿದ್ದು ಆ ವ್ಯಕ್ತಿಯ ಸಾವಿನ ದೋಷ ಪರಿಹಾರಕ್ಕಾಗಿ ದೈವ ಸಮ್ಮುಖದಲ್ಲಿ ತಾಂತ್ರಿಕ ವಿಧಿ ವಿಧಾನ ಮೂಲಕ ಸಾಲಿಗ್ರ‍್ರಾಮ ಶಿಲಾ ದೈವಕ್ಕೆ ಆವಾಹಿಸಲಾಗಿತ್ತು. ಆದೇ ರೀತಿ ಬ್ರಾಹ್ಮಣ ವ್ಯಕ್ತಿಯೊಬ್ಬ ದೇವಾಲಯಕ್ಕೆ ಪ್ರದಕ್ಷಿಣೆ ಬರುತ್ತಿದ್ದಾಗ ಸಾವಿಗೀಡಾಗಿದ್ದು, ಆ ದೋಷಕ್ಕೆ ಸÀಂಬAಧಿಸಿದAತೆ ಸಾಲಿಗ್ರಾಮಕ್ಕೆ ಆವಾಹಿಸಲಾಗಿತ್ತು. ರಾತ್ರಿ ಅಗಸ್ತೆö್ಯÃಶ್ವರ ಸನ್ನಿಧಿಯಲ್ಲಿ ಈ ಶಕ್ತಿಗಳನ್ನು ಸಾಲಿಗ್ರಾಮಕ್ಕೆ ಆಹಾಹಿಸುವ ವೇಳೆ ಕೆಲವು ಶಕ್ತಿಗಳು ಬರಲೇ ಇಲ್ಲ. ಏಕೆಂದರೆ ಆವಾಹನೆ ಆಗಿದೆಯೇ ಇಲ್ಲವೇ ಎಂಬ ಬಗ್ಗೆ ಸ್ಥಳದಲ್ಲಿಯೇ ಜ್ಯೋತಿಷಿ (ಗೋಪಾಲಕೃಷ್ಣ ಭಟ್) ಇದ್ದು ಕವಡೆ ಮೂಲಕ ನೋಡುತ್ತಿದ್ದರು. ಆಗ ಅವರೇ ಒಂದು ಸಲಹೆ ಕೊಟ್ಟರು. ಸಮಿತಿಯವರು ವಿಶೇಷ ಪ್ರಾರ್ಥನೆ ಮಾಡಿ ದೇವಾಲಯಕ್ಕೆ ಸುತ್ತು ಬನ್ನಿ ಎಂದು. ಅಂದು ಸಂಕಷ್ಟ ಪೂಜೆ ದಿನ ಸಮಿತಿಯ ಪರವಾಗಿ ಸಂಕಲ್ಪ ಮಾಡಲಾಯಿತು. ಈ ಬಾಧಾ ಶಕ್ತಿಗಳೆಲ್ಲ ಸಾಲಿಗ್ರಾಮಕ್ಕೆ ಆವಾಹನೆಯಾದರೆ. ಮಡಿಕೇರಿಯ ವಿಜಯ ವಿನಾಯಕದಲ್ಲಿ ವಿಶೇಷ ಪೂಜೆ ಮಾಡಿಸುತ್ತೇವೆ ಎನ್ನುವ ಪ್ರಾರ್ಥನೆ ಬಳಿಕ ಕೇರಳದ ತಂತ್ರ ಪರಿಣಿತರೊಬ್ಬರಿಂದ ಆವಾಹಿಸಲಾಯಿತು. ಮತ್ತೆ ಪ್ರಶ್ನೆ ಕೇಳಿದಾಗ ಜ್ಯೋತಿಷಿಗಳು ಎಲ್ಲ ಬಾಧೆಗಳು ಸಾಲಿಗ್ರಾಮಕ್ಕೆ ಆವಾಹಿಸಲ್ಪಟ್ಟಿವೆ ಎಂದು ಖಚಿತಪಡಿಸಿದರು. ಬಳಿಕ ಒಂದು ದಿನ ಮಡಿಕೇರಿಯ ವಿಜಯ ವಿನಾಯಕ ದಲ್ಲಿಯೂ ಪೂಜೆ ನೆರವೇರಿಸಲಾಯಿತು. ಬಾಧಾ ಶಕ್ತಿಗಳ ಆವಾಹಿಸಲ್ಪಟ್ಟಿದ್ದ ಸಾಲಿಗ್ರಾಮ ಸಹಿತ ನಾವೆಲ್ಲ ಕೊಲ್ಲೂರಿಗೆ ತೆರಳಿದೆವು.ಅಲ್ಲಿ ಅಡಿಗ ಎಂಬ ಪ್ರಧಾನ ಅರ್ಚಕರು ಸುಮಾರು ಒಂದು ಗಂಟೆ ಕಾಲ ಇತರ ಯಾವದೇ ಭಕ್ತಾದಿಗಳ ಸೇವೆಯನ್ನು ತೆಗೆದುಕೊಳ್ಳದೆ ತಲಕಾವೇರಿ ಕ್ಷೇತ್ರಕ್ಕೆ ಮೀಸÀಲಾಗಿ ವಿಶೇಷ ಪೂಜೆ ನಡೆÀಸಿದರು. ಬಳಿಕ ನಾವು ಕೊಡಚಾದ್ರಿ ಬೆಟ್ಟಕ್ಕೆ ತೆರಳಿ ಅಲ್ಲಿ ಪಾರ್ವತಿ ಪರಮೇಶ್ವರರ ದೈವ ಸಮ್ಮುಖದಲ್ಲಿ ಅಲ್ಲಿನ ಅರ್ಚಕರ ಮೂಲಕ ಬಾಧಾ ಶಕ್ತಿಗಳನ್ನು ಸಾಲಿಗ್ರಾಮದ ಪೂಜಾ ಸಹಿತ ವಿಸರ್ಜಿಸ ಲಾಯಿತು. ಅರ್ಚಕರು ಅಲ್ಲಿ ಸದಾ ತೀರ್ಥರೂಪದಲ್ಲಿ ಹರಿಯುವ ಜಲಧಾರೆ ಯನ್ನು ತೋರಿಸಿ ಹೇಳಿದರು: ಇದೂ ಕೂಡ ತಲಕಾವೇರಿಯಂತೆಯೇ ನಿರಂತರ ತೀರ್ಥ ಬರುವ ಕ್ಷೇತ್ರ. ನೀವೆಲ್ಲ ಜಗತ್ತಿನ ಮಹಾನ್ ಕ್ಷೇತ್ರವಾದ ತಲಕಾವೇರಿಯಿಂದ ಬಂದಿದ್ದೀರಿ ಇದೂ ಕೂಡ ಮಹಾನ್ ಕ್ಷೇತ್ರವೇ ಆಗಿದೆ. ಈ ಕೊಡಚಾದ್ರಿಯಲ್ಲಿನ ಸಾಕ್ಷಾತ್ ಪಾರ್ವತೀ ಪರಮೇಶ್ವರರು ನೆಲೆ ನಿಂತಿರುವ ಪುಣ್ಯ ಸನ್ನಿಧಾನಕ್ಕೆ ಬಂದಿದ್ದೀರಿ. ಕಾವೇರಿ ಕ್ಷೇತ್ರದಲ್ಲಿ ಕಂಡು ಬಂದಿದ್ದ ಎಲ್ಲ ದೋಷಗಳೂ ಇಂದಿಗೆ ನಿವಾರಣೆಯಾಗಿದೆ. ಆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ, ಭಕ್ತಾದಿಗಳಿಗೆ ಒಳಿತಾಗುತ್ತದೆ ಎಂದು ಸಮಿತಿಯವರಿಗೆ ಆಶೀರ್ವಚನವಿತ್ತÀರು. (ಮುಂದುವರಿಯುವುದು)

- ಜಿ. ರಾಜೇಂದ್ರ, ಮಡಿಕೇರಿ.