ಮಡಿಕೇರಿ, ಏ. ೯: ಇತ್ತೀಚೆಗೆ ನಿಧನರಾದ ನಿವೃತ್ತ ಶಿಕ್ಷಕ, ವೀರಾಜಪೇಟೆ ತಾಲೂಕು ಹಿರಿಯ ನಾಗರಿಕರ ವೇದಿಕೆಯ ನಿರ್ದೇಶಕ ಪುಟ್ಟಿಚಂಡ ಎ. ಅಯ್ಯಣ್ಣ ಅವರಿಗೆ ವೀರಾಜಪೇಟೆ ತಾಲೂಕು ಹಿರಿಯ ನಾಗರಿಕರ ವೇದಿಕೆ, ತೂಕ್ಬೊಳಕ್ ಕಲೆ, ಕ್ರೀಡೆ ಸಾಹಿತ್ಯ ಅಕಾಡೆಮಿ, ತೂಕ್ ಬೊಳಕ್ ಪತ್ರಿಕೆ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಇವರ ವತಿಯಿಂದ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ನಾಲ್ಕು ಸಂಸ್ಥೆಯ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ವೀರಾಜಪೇಟೆ ತಾಲೂಕು ಹಿರಿಯ ನಾಗರಿಕರ ವೇದಿಕೆಯ ಸ್ಥಾಪಕ ಅಧ್ಯಕ್ಷ ನಾಯಡ ವಾಸು ನಂಜಪ್ಪ, ಕಾರ್ಯದರ್ಶಿ ಪುಲಿಯಂಡ ಪಿ. ಪೊನ್ನಪ್ಪ ನಿರ್ದೇಶಕರುಗಳಾದ ಪಾಲೆಕಂಡ ರಮೇಶ್ ನಂಜಪ್ಪ, ಕಾಟಿಮಾಡ ಅಣ್ಣಯ್ಯ, ಶ್ರೀಮತಿ ಲೀಲಾ ಅಣ್ಣಯ್ಯ, ಪಾರುವಂಗಡ ಸನ್ನಿ, ಕುಪ್ಪಣಮಾಡ ಬಿದ್ದಪ್ಪ, ಕಂಬೀರAಡ ಕಸ್ತೂರಿ ಅಯ್ಯಪ್ಪ, ಮುಲ್ಲೇರ ಪಿ. ಪೊನ್ನಮ್ಮ, ಕೂತಂಡ ನಾಣಯ್ಯ, ಪಾಂಡAಡ ಡಿ. ಮೊಣ್ಣಪ್ಪ, ವಿಠಲ, ವಕೀಲರುಗಳಾದ ಮಾಳೇಟಿರ ನಂಜಪ್ಪ, ಪುಷ್ಪ, ಪುಚ್ಚಿಮಂಡ ಕಾವೇರಿ ಅಪ್ಪಯ್ಯ, ಬೊಳಕಾರಂಡ ವಿಠಲ ತಿಮ್ಮಯ್ಯ, ಹಾಗೂ ಮೇಕೇರಿರ ಮೋಹನ್, ಮುಲೈÃರಿರ ಸುಬ್ಬಯ್ಯ ಉಪಸ್ಥಿತರಿದ್ದರು.