ವೀರಾಜಪೇಟೆ, ಏ. ೯: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ ಲಾರಿ ಮತ್ತು ಲಘು ವಾಹನವನ್ನು ವಶಕ್ಕೆ ಪಡೆದಿರುವ ಘಟನೆ ಗಡಿಭಾಗ ಮಾಕುಟ್ಟ ತಪಾಸಣಾ ಕೇಂದ್ರದ ಬಳಿ ನಡೆದಿದೆ.

ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಸರ್ಕಾರದ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹಾಸನ ಜಿಲ್ಲೆಯ ಹೊಳೆನರಸಿಪುರದಿಂದ ಕೇರಳ ರಾಜ್ಯಕ್ಕೆ ಸಾಗಾಟ ಮಾಡಲಾಗುತ್ತಿದೆ ಎಂದು ಮಾಹಿತಿ ದೊರೆತÀ ಹಿನೆÀ್ನಲೆಯಲ್ಲಿ, ವೀರಾಜಪೇಟೆ ಪೆರುಂಬಾಡಿ ಮಾರ್ಗವಾಗಿ ಬಂದ ಈಚರ್ ಲಾರಿ

(ಕೆಎ-೦೧ಎಇ-೯೦೫೪) ಮತ್ತು ಮತ್ತೊಂದು ಮಹೀಂದ್ರಾ ದೋಸ್ತ್ ವಾಹನ (ಕೆಎ-೧೨ಬಿ-೮೦೮೪)ಗಳನ್ನು ಗಡಿ ತಪಾಸಣಾ ಕೇಂದ್ರದ

(ಮೊದಲ ಪುಟದಿಂದ) ಪೊಲೀಸ್ ಸಿಬ್ಬಂದಿ ತಪಾಸಣೆ ಮಾಡಿದಾಗ, ಸುಮಾರು ೩೩೦ ಚೀಲ ಪಡಿತರ ಅಕ್ಕಿ ಕಂಡುಬAದಿದೆ. ಅದನ್ನು ವಶಕ್ಕೆ ಪಡೆದಿರುವ ಆಹಾರ ನಿರೀಕ್ಷಕರು ಮತ್ತು ಪೊಲೀಸರು ವೀರಾಜಪೇಟೆ ನಗರ ಠಾಣೆಯಲ್ಲಿ ವಾಹನಗಳ ಚಾಲಕರು ಮತ್ತು ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ವೀರಾಜಪೇಟೆ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಸಿ.ವಿ. ಶ್ರೀಧರ್, ಸಿಬ್ಬಂದಿಗಳಾದ ರಾಮಣ್ಣ, ಮಹೇಂದ್ರ, ವೀರಾಜಪೇಟೆ ತಾಲೂಕು ಆಹಾರ ನಿರೀಕ್ಷಕರಾದ ಶೀನಾ ಕುಮಾರಿ, ಸಿಬ್ಬಂದಿ ಕವಿತಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. -ಕೆ.ಕೆ.ಎಸ್.ಅಕ್ರಮ ಪಡಿತರ ಅಕ್ಕಿ ಸಾಗಾಟ : ವಾಹನಗಳ ವಶ