ಮಡಿಕೇರಿ, ಏ. ೮: ಡಾ.ಭೀಮಾರಾವ್ ಅಂಬೇಡ್ಕರ್ ಕ್ರೀಡಾ ಸಮಿತಿ ಮತ್ತು ನಾಗಾಸ್ ಕ್ರೀಡಾ ಅಕಾಡೆಮಿ ಹುಲಿತಾಳದ ವತಿಯಿಂದ ಮೂರ್ನಾಡಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಜೈಭೀಮ್ ಕ್ರಿಕೆಟ್ ಕಪ್‌ಗೆ ಮಡಿಕೇರಿ ನಗರಸಭೆ ಪೌರಾಯುಕ್ತ ರಾಮದಾಸ್ ಚಾಲನೆ ನೀಡಿದರು.

ಜೈಭೀಮ್ ಕಪ್ ಅಧ್ಯಕ್ಷ ಯತೀಶ್ ಹೆಚ್.ಜಿ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರ್ನಾಡು ಗ್ರಾ.ಪಂ. ಅಧ್ಯಕ್ಷೆ ಸುಜಾತ ಬಿ.ಸಿ, ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಸದಸ್ಯ ಈರ ಸುಬ್ಬಯ್ಯ, ಚೆಸ್ಕಾಂ ಸಿಬ್ಬಂದಿ ದೀಪಕ್ ಸುಬ್ಬಯ್ಯ, ಸೈನಿಕ ಪ್ರಮೋದ್ ಕುಮಾರ್ ಹಾಜರಿದ್ದರು.

ಪಂದ್ಯಾಟದ ಮೊದಲ ದಿನ ೧೨ ತಂಡಗಳು ಸೆಣಸಾಡಿದವು. ಬಕ್ಕ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿತು. ತಾ. ೯ ಹಾಗೂ ೧೦ ರ ತನಕ ಪಂದ್ಯಾಟ ನಡೆಯಲಿದೆ.