ಕಡAಗ, ಏ. ೯: ಕೊಡಗು ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಮೂರನೇ ವರ್ಷದ ಕಾಲ್ಚೆಂಡು ಕ್ರೀಡಾಕೂಟ ಕುಶಾಲನಗರದ ಟರ್ಫ್ ಮೈದಾನದಲ್ಲಿ ನಡೆಯಿತು.
ಮೂರನೇ ವರ್ಷದ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾಟದ ಚಾಂಪಿಯನ್ ತಂಡವಾಗಿ ಅಲ್ ಅಮೀನ್ ಪಾಲಿಬೆಟ್ಟ ತಂಡ ಹಾಗೂ ರನ್ನರ್ ತಂಡ ವಾಗಿ ಯುನೈಟೆಡ್ ಎಫ್.ಸಿ ಕುಂಜಿಲ ತಂಡ, ಕೊಟ್ಟಮುಡಿ ತೃತೀಯ ಹಾಗೂ ಕೆ.ಬಿ ಬಾಯ್ಸ್ ಸುಂಟಿಕುಪ್ಪ ನಾಲ್ಕನೆಯ ಸ್ಥಾನವನ್ನು ಪಡೆಯಿತು. ಕ್ರೀಡಾ ಕೂಟದಲ್ಲಿ ೬೫ ತಂಡಗಳು ಭಾಗವಹಿಸಿದ್ದವು ಪ್ರಥಮ ಹಾಗೂ ದ್ವಿತೀಯ ತಂಡಕ್ಕೆ ೫೫,೫೫೫ ೩೩,೩೩೩ ಮತ್ತು ಸೆಮಿಫೈನಲ್ ಅರ್ಹತೆ ಪಡೆದ ತಂಡಗಳಿಗೆ ೫,೫೫೫ನಗದು ಹಾಗೂ ಟ್ರೋಫಿಗಳನ್ನು ನೀಡಲಾಯಿತು. ಕ್ರೀಡಾಕೂಟದ ಆಯೋಜನೆಯಲ್ಲಿ ಮುಸ್ಲಿಂ ಕಪ್ ಸ್ಥಾಪಕ ಆಸಿಫ್ ಕೊಂಡAಗೇರಿ ಹಾಗೂ ಕೊಡಗು ಮುಸ್ಲಿಂ ಕಾಲ್ಚೆಂಡು ಕ್ರೀಡಾಕೂಟದ ಅಧ್ಯಕ್ಷ ಸಲೀಂ ಗೋಣಿಕೊಪ್ಪ ಕಾರ್ಯನಿರ್ವಹಿಸಿದರು.