ಮಡಿಕೇರಿ, ಏ. ೮: ಹಿಂದು ಜಾಗರಣಾ ವೇದಿಕೆಯ ನೇತೃತ್ವದಲ್ಲಿ ತಾ.೧೦ರಂದು ಬೆಳಿಗ್ಗೆ ೧೦ ಗಂಟೆಗೆ ಮಾದಾಪುರದಲ್ಲಿ ಹಾಗೂ ಸಂಜೆ ೬ ಗಂಟೆಗೆ ಸೋಮವಾರಪೇಟೆಯಲ್ಲಿ ರಾಮ ನವಮಿ ಉತ್ಸವ ನಡೆಯಲಿದೆ. ಮಾದಾಪುರದ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖ ನರಸಿಂಹ ಮಾಣಿ ಯವರ ದಿಕ್ಸೂಚಿ ಭಾಷಣ ಹಾಗೂ ಸಂಜೆ ಸೋಮವಾರಪೇಟೆಯ ಕಾರ್ಯಕ್ರಮದಲ್ಲಿ ೧೦ ಆಕರ್ಷಕ ಸ್ತಬ್ಧ ಚಿತ್ರಗಳ ಅದ್ಧೂರಿ ಶೋಭಾಯಾತ್ರೆ ನಡೆಯಲಿದೆ.