ಸಿದ್ದಾಪುರ, ಏ. ೮: ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ೨೯ನೇ ವರ್ಷದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ತಾ. ೯ ಹಾಗೂ ೧೦ ರಂದು ನಡೆಯಲಿದೆ. ತಾ. ೯ ರಂದು ಬೆಳಿಗ್ಗೆ ೮ ಗಂಟೆಗೆ ಗಣಪತಿ ಹೋಮ ಸಂಜೆ ೫.೩೦ಕ್ಕೆ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರು ಧ್ವಜಾರೋಹಣ ಮಾಡುವ ಮೂಲಕ ಚಾಲನೆಯನ್ನು ನೀಡಲಿದ್ದಾರೆ. ಸಂಜೆ ೫.೪೫ಕ್ಕೆ ಪಾಲಚಂಡ ಮಾಚಮ್ಮ ಚೀಯಣ್ಣ ಅವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಸಂಜೆ ೬.೩೦ಕ್ಕೆ ಕೆ.ಪಿ. ಶೇಖರ್ ಅವರ ಮನೆಯಿಂದ ಮುತ್ತಪ್ಪ ಕಲಶವನ್ನು ವಾದ್ಯಮೇಳದೊಂದಿಗೆ ಶ್ರೀ ಮುತ್ತಪ್ಪ ದೇವಾಲಯಕ್ಕೆ ಕರೆತರಲಾಗುವುದು.

ಸಂಜೆ ೬.೩೦ಕ್ಕೆ ಮುತ್ತಪ್ಪನ ವೆಳ್ಳಾಟಂ, ರಾತ್ರಿ ೮.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೮ ಗಂಟೆಗೆ ಶಾಸ್ತಪ್ಪನ ವೆಳ್ಳಾಟಂ, ರಾತ್ರಿ ೧೦ಕ್ಕೆ ಭಗವತಿ ವೆಳ್ಳಾಟಂ, ತಾ. ೧೦ ರಂದು ಬೆಳಿಗ್ಗೆ ೫ ಗಂಟೆಗೆ ಗುಳಿಗನ ತೆರೆ ೫.೩೦ಕ್ಕೆ ಶಾಸ್ತಪ್ಪನ ತೆರೆ ೬ ಗಂಟೆಗೆ ತಿರುವಪ್ಪನ ತೆರೆ, ೯ ಗಂಟೆಗೆ ಭಗವತಿ ತೆರೆ ನಡೆಯಲಿದೆಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.