ಮಡಿಕೇರಿ, ಏ. ೮ : ಷಣ್ಮುಗ ಕ್ರಿಕೆಟರ್ಸ್ ಹೆಬ್ಬೆಟ್ಟಗೇರಿ ಇವರ ಆಶ್ರಯದಲ್ಲಿ ದಿವಂಗತ ಜನಾರ್ಧನ ಸ್ಮರಣಾರ್ಥ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದ ಮೊಗೇರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಜನನಿ ವಾರಿಯರ್ಸ್ ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಕ್ರೇಜಿ ಇಲೆವೆನ್ ತಂಡ ನಿಗದಿತ ೫ ಓವರ್ ಗಳಲ್ಲಿ ೫ ವಿಕೆಟ್ ಕಳೆದುಕೊಂಡು ೫೮ ರನ್ ಗಳನ್ನು ಕಲೆಹಾಕಿತು. ೫೯ ರನ್‌ಗಳ ಗುರಿ ಬೆನ್ನಟ್ಟಿದ ಜನನಿ ವಾರಿಯರ್ಸ್ ತಂಡ ೪.೨ ಓವರ್ ಗಳಲ್ಲಿ ಕೇವಲ ಒಂದು ವಿಕೆಟ್ ಅನ್ನು ಮಾತ್ರ ಕಳೆದುಕೊಂಡು ೬೨ ರನ್ನ್ ಗಳನ್ನು ಕಲೆಹಾಕಿ ಗೆಲುವು ಸಾಧಿಸುವ ಮೂಲಕ ಮೊಗೇರ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ತಂಡವಾಗಿ ಆಗಿ ಹೊರಹೊಮ್ಮಿತು. ಚಾಂಪಿಯನ್ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ೨೫ ಸಾವಿರ ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ೧೫ ಸಾವಿರ ನಗದು ನೀಡಲಾಯಿತು.

ಶಿಸ್ತು ಬದ್ಧ ತಂಡ ಪ್ರಶಸ್ತಿಯನ್ನು ಷಣ್ಮುಗ ಕ್ರಿಕೆಟರ್ಸ್ ಹೆಬ್ಬೆಟ್ಟಗೇರಿ ತಂಡ ಪಡೆದುಕೊಂಡರೆ. ಫೈನಲ್ಸ್ ಮ್ಯಾನ್ ಆಫ್ ದಿ ಮ್ಯಾಚ್ ಜನನಿ ವಾರಿಯರ್ಸ್ ನ ಪ್ರವೀಣ್, ಬೆಸ್ಟ್ ಬ್ಯಾಟ್ಸ್ಮನ್ ಚಾಲೆಂಜರ್ಸ್ ಮಾರ್ಗೋಲ್ಲಿ ತಂಡದ ವಿಜೀತ್, ಬೆಸ್ಟ್ ಬೌಲರ್ ಕ್ರೇಜಿ ಇಲೆವೆನ್ ತಂಡದ ಸುಜು, ಅಪ್ಕಮಿಂಗ್ ಪ್ಲೇಯರ್ ಸೋಮವಾರಪೇಟೆ ಹಿಟ್ಟರ್ಸ್ ನ ಮೇಘನ್, ಬೆಸ್ಟ್ ಕ್ಯಾಚ್ ಜನನಿ ವಾರಿಯರ್ಸ್ನ ಸುನಿಲ್ ಹಾಗೂ ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ಜನನಿ ವಾರಿಯರ್ಸ್ ತಂಡದ ಪ್ರವೀಣ್ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಸಮುದಾಯದ ಹಿರಿಯರಾದ ಸೋಮಯ್ಯ ಹೆಬ್ಬಟ್ಟಗೇರಿ ಹಾಗೂ ಕಲಾರಂಗದಲ್ಲಿ ಜಡ್ಜ್ ಆಗಿ ರಾಷ್ಟç ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿರುವ ಸಮುದಾಯದ ಯುವ ಪ್ರತಿಭೆ ಹಾಗೂ ಮಡಿಕೇರಿಯ ಗುರುಕುಲ ಕಲಾ ಮಂಡಳಿಯ ನೃತ್ಯ ತರಬೇತು ದಾರ ದಿನೇಶ್.ಪಿ.ಎನ್ . ಹೆಬ್ಬಟ್ಟಗೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ದಿವಗಂತ ಜನಾರ್ಧನ್ ಅವರ ಮಗಳ ವಿದ್ಯಾಭ್ಯಾಸದ ಸಂಪೂರ್ಣ ಹೊಣೆಯನ್ನು ಶಕ್ತಿ ಎಂಟರ್ ಪ್ರೆöÊಸೆಸ್ ನ ಮಾಲೀಕ ಬಾರ್ಗವ್ ಚೆರಿಯಮನೆ ಅವರು ವಹಿಸಿಕೊಂಡರೆ, ಮೊಗೇರ ಯುವ ವೇದಿಕೆ ಕಗ್ಗೊಡ್ಲು ಇವರ ಸಂಯೋಗದಲ್ಲಿ ೨ ವಿದ್ಯಾರ್ಥಿಗಳಿಗೆ ಧನ ಸಹಾಯದ ಚೆಕ್ ಹಸ್ತಾಂತರಿಸಿದರು.

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯರಾದ ರವಿ. ಪಿ. ಎಂ, ಕೊಡಗು ಜಿಲ್ಲೆ ಮೊಗೇರ ಸಮಾಜದ ಮಡಿಕೇರಿ ತಾಲೂಕು ಅಧ್ಯಕ್ಷರಾದ ಸುರೇಶ್. ಪಿ. ಬಿ. ಕಾರ್ಯದರ್ಶಿ ಜನಾರ್ಧನ್, ಪಿ. ಬಿ. ಜಿಲ್ಲಾ ಖಜಾಂಚಿ ಚಂದ್ರು, ಹೋಬಳಿ ಘಟಕದ ಅಧ್ಯಕ್ಷರಾದ ಮಂಜು, ಜಿಲ್ಲಾ ಸಮಿತಿ ಸದಸ್ಯರಾದ ಪೊಡಿಯ ತಾಳತ್ ಮನೆ, ಸೋಮಯ್ಯ ಹೆಬ್ಬಟ್ಟಗೇರಿ, ಸತೀಶ್ ಕಗ್ಗೊಡ್ಲು. ದಿವಗಂತ ಜನಾರ್ದನ್‌ರವರ ಪತ್ನಿ ಶಾರದ, ಹಾಗೂ ಶಕ್ತಿ ಎಂಟರ್ ಪ್ರೆöÊಸೆಸ್‌ನ ಮಾಲೀಕ ಬಾರ್ಗವ್ ಚೆರಿಯಮನೆ ಪಾಲ್ಗೊಂಡಿದ್ದರು.

ಮೊಗೇರ ಪ್ರೀಮಿಯರ್ ಲೀಗ್‌ನ ಪ್ರಮುಖ ಆಯೋಜಕರಾದ ರಮೇಶ್ ಹೆಬ್ಬಟ್ಟಗೇರಿ, ಅಶೋಕ್ ಮಡಿಕೇರಿ, ದಿನೇಶ್ ಮಡಿಕೇರಿ, ದರ್ಶಿತ್ ಹೆಬ್ಬಟ್ಟಗೇರಿ,ವಿವೇಕ್ ಮೊಗೇರ ಕಡಗದಾಳು,ದಿನೇಶ್ ಹೆಬ್ಬಟ್ಟಗೇರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.