ಮಡಿಕೇರಿ, ಏ. ೮: ನಗರದ ಶ್ರೀ ಮುತ್ತಪ್ಪ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ಮುತ್ತಪ್ಪ ದೇವರ ಕಲಶ ಮೆರವಣಿಗೆ ನಗರದ ಮುಖ್ಯಬೀದಿಗಳಲ್ಲಿ ಸಾಗಿತು.

ಗಾಂಧಿ ಮೈದಾನದಿಂದ ಆರಂಭಗೊAಡ ಮೆರವಣಿಗೆಗೆ ಕಡಗದಾಳು, ನೀರುಕೊಲ್ಲಿ, ಸಂಪಿಗೆಕಟ್ಟೆ, ಮಡಿಕೇರಿ ಕೆ.ಎಸ್.ಆರ್.ಟಿ.ಸಿ. ಡಿಪೋ ಮುಂಭಾಗ, ಮೈತ್ರಿ ಜಂಕ್ಷನ್ ಭಾಗದಿಂದ ಮಹಿಳೆಯರು ಕಲಶದೊಂದಿಗೆ ಬಂದರು. ಮೆರವಣಿಗೆ ಹಾಗೂ ಮಕ್ಕಳ ತಾಲಾಪೊಲಿ ಮೆರವಣಿಗೆಯನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಿದರು. ಮೆರವಣಿಗೆಗೆ ವಿವಿಧ ಕಲಾ ತಂಡಗಳು ಮೆರಗು ನೀಡಿದವು. ಮುತ್ತಪ್ಪ ದೇವರ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಮೆರವಣೆಗೆ ನಡೆಸಲಾಯಿತು.

(ಮೊದಲ ಪುಟದಿಂದ) ೫೦೦ಕ್ಕೂ ಹೆಚ್ಚು ಮಹಿಳೆಯರು ಕಲಶ ಹೊತ್ತು ಸಾಗಿದರು.ರೆಸ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ರವೀಂದ್ರ ರೈ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ. ನಗರಸಭಾ ಸದಸ್ಯರಾದ ಕೆ.ಎಸ್. ರಮೇಶ್, ಸುಬ್ರಮಣಿ, ಲೆಕ್ಕಪರಿಶೋಧಕ ಸುಧೀರ್, ದೇವಾಲಯ ಸಮಿತಿ ಅಧ್ಯಕ್ಷ ಸುಧೀರ್ ಮೆರವಣಿಗೆ ಸಮಿತಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಸೇರಿದಂತೆ ಇನ್ನಿತರರು ಇದ್ದರು.