ಮಡಿಕೇರಿ, ಏ. ೮: ಕರ್ನಾಟಕ ಬಾಲವಿಕಾಸ ಅಕಾಡೆಮಿಯು ೨೦೧೯, ೨೦೨೦ ಹಾಗೂ ೨೦೨೧ನೇ ಸಾಲಿನಲ್ಲಿ ಮಕ್ಕಳ ಕ್ಷೇತ್ರದಲ್ಲಿ ರಚಿಸಲ್ಪಟ್ಟ ಆಯ್ದ ಉತ್ತಮ ಪುಸ್ತಕಗಳಿಗೆ “ಮಕ್ಕಳ ಪುಸ್ತಕ ಚಂದಿರ” ಪ್ರಶಸ್ತಿ ಪ್ರದಾನ ಮಾಡಲು ಉದ್ದೇಶಿಸಲಾಗಿದೆ. ಆಯಾಯ ಸಾಲಿನ ಅವಧಿಯಲ್ಲಿ ಅಂದರೆ ಜನವರಿಯಿಂದ ಡಿಸೆಂಬರ್ ತಿಂಗಳ ಅಂತ್ಯದ ಅವಧಿಯಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ನಾಟಕ, (ಪಠ್ಯಾಧಾರಿತ ಬಿಟ್ಟು) ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತ ಕೃತಿ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ) ಮಕ್ಕಳ ಸಾಹಿತ್ಯ ವಿಮರ್ಶಾ ಕೃತಿ ಹೀಗೆ ಏಳು ಪ್ರಕಾರದ ಮಕ್ಕಳ ಸಾಹಿತ್ಯ ಕೃತಿ ಪ್ರಶಸ್ತಿಗೆ ಆಹ್ವಾನಿಸಲಾಗಿದೆ.

ಈ ಕ್ಷೇತ್ರಗಳಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಪ್ರಶಸ್ತಿಗಾಗಿ ಪರಿಗಣಿಸಲು/ ಮೌಲ್ಯಮಾಪನಗೊಳಿಸಲು ಪತ್ರಿಯೊಂದು ಕೃತಿಯ ೪ ಪ್ರತಿಗಳನ್ನು ಸಲ್ಲಿಸಲು ತಾ. ೧೮ ರವರೆಗೆ ಅವಧಿ ವಿಸ್ತರಿಸಲಾಗಿದೆ. ಪುಸ್ತಕಗಳನ್ನು ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇಔಟ್ ಹಿಂಭಾಗ, ಕೆಹೆಚ್‌ಬಿ ಕಾಲೋನಿ, ಲಕಮನಹಳ್ಳಿ ಧಾರವಾಡ-೫೮೦೦೦೪ ಇಲ್ಲಿಗೆ ಕಳುಹಿಸುವುದು. ಅರ್ಜಿ ಸಲ್ಲಿಸುವಾಗ “ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗಾಗಿ ಅರ್ಜಿ” ಎಂದು ಲಕೋಟೆ ಮೇಲೆ ನಮೂದಿಸಿರಬೇಕು.

ಹೆಚ್ಚಿನ ಮಾಹಿತಿಗೆ ಯೋಜನಾಧಿಕಾರಿಗಳು, ಚಂದ್ರಿಕಾ ಲೇಔಟ್ ಹಿಂಭಾಗ, ಕೆ.ಹೆಚ್.ಬಿ ಕಾಲೋನಿ, ಲಕಮನಹಳ್ಳಿ ಧಾರವಾಡ-೫೮೦೦೦೪, ಕಚೇರಿ ದೂರವಾಣಿ: ೦೮೩೬-೨೪೬೧೬೬೬ ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.