ಕೂಡಿಗೆ, ಏ. ೮: ಕೂಡು ಮಂಗಳೂರು ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಉಪ ಗ್ರಾಮಗಳಲ್ಲಿ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಲ ಜೀವನ ಕುಡಿಯುವ ನೀರಿನ ಸರಬ ರಾಜು ಯೋಜನೆಯ ಕಾಮಗಾರಿಗಳು ಪ್ರಾರಂಭವಾಗಿ ವರ್ಷಗಳೇ ಕಳೆಯುತ್ತಾ ಬಂದಿದೆ. ಕಾಮಗಾರಿಯು ವಿವಿಧ ಗ್ರಾಮಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಡೆಯುತ್ತಿದೆ. ಸಂಬAಧಿಸಿದ ಇಲಾಖೆಯವರು ಸಂಪೂರ್ಣವಾಗಿ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣ ಗೊಳಿಸಲು ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರುಗಳ ಒತ್ತಾಯಿಸಿದರು.

ಸಭೆಯಲ್ಲಿ ಹಾಜರಿದ್ದ ಸದಸ್ಯರು ತಮ್ಮ ತಮ್ಮ ವಾರ್ಡ್ ಸಮಸ್ಯೆಗಳನ್ನು ತಿಳಿಸಿದರು. ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಬಾಕಿ ಇದ್ದು ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ಮನವರಿಕೆ ಮಾಡಿ ಕಂದಾಯವನ್ನು ವಸೂಲಿ ಮಾಡುವ ಬಗ್ಗೆ ಚರ್ಚೆಗಳು ನಡೆದವು. ನೀರಿನ ಕಂದಾಯವನ್ನು ಸಮರ್ಪಕವಾಗಿ ಪಾವತಿ ಮಾಡದ ಗ್ರಾಮಸ್ಥರಿಗೆ ಮೂರು ಬಾರಿ ಸೂಚನೆಯನ್ನು ನೀರು ಕಡಿತಗೊಳಿಸುವ ಕ್ರಮ ತೆಗೆದುಕೊಳ್ಳುವ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ನಂತರ ಕೈಗಾರಿಕಾ ಬಡಾವಣೆ ಯಲ್ಲಿರುವ ಸ್ಮಶಾನ ಜಾಗದ ವಿಷಯದ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು.

ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಬಾಸ್ಕರ್ ನಾಯಕ್ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.

ಮೂವರು ಸದಸ್ಯರು ಸಭಾತ್ಯಾಗ: ಮಾಸಿಕ ಸಭೆ ಆರಂಭವಾಗಿ ಹಲವು ವಿಷಯಗಳ ಚರ್ಚೆ ಅರಂಭ ಗೊಂಡಾಗ ಬಸವನತ್ತೂರು ಗ್ರಾಮದ ವಾರ್ಡ್ ಸದಸ್ಯರುಗಳಾದ ಫಿಲೋಮಿನಾ ಮತ್ತು ಗೌರಮ್ಮ ಮತ್ತು ೩ನೇ ವಾರ್ಡ್ನ ಷಂಶುದೀನ್ ಅವರುಗಳು ಅಧ್ಯಕ್ಷೆ ಇಂದಿರಾ ರಮೇಶ್ ಸದಸ್ಯರುಗಳ ಗಮನಕ್ಕೆ ತಾರದೆ ಸೋಲಾರ್ ದೀಪ ಅಳವಡಿಕೆ ಮತ್ತು ಬೀದಿ ದೀಪಗಳ ಅಳವಡಿಕೆ ಮುಂದಾಗಿರುವುದರಿAದ ಮತ್ತು ಸಭೆಯಲ್ಲಿ ಚರ್ಚೆಯಾದ ಯಾವುದೇ ವಿಷಯಗಳನ್ನು ಅನುಷ್ಠಾನ ಗೊಳಿಸುವುದಿಲ್ಲ ಎಂದು ಆರೋಪಿಸಿ ಮೂವರು ಸದಸ್ಯರು ಸಭಾತ್ಯಾಗ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಕಳೆದ ಮಾಸಿಕ ಸಭೆಯಲ್ಲಿ ಬಸವನತ್ತೂರು ಗ್ರಾಮದಲ್ಲಿ ಬೀದಿ ದೀಪಗಳ ಸಮಸ್ಯೆಗಳು ಇರುವ ಜಾಗವನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ, ಅತಿ ಅವಶ್ಯಕತೆ ಇರುವ ಜಾಗದಲ್ಲಿ ಬೀದಿ ದೀಪ ಅಳವಡಿಕೆ ಮಾಡಲಾಗಿದೆ. ಆನೆಕೆರೆ ಸಮೀಪದ ಜೇನುಕುರುಬ ಜನಾಂಗ ಒಂದು ಕುಟುಂಬದರಿಗೆ ಕಳೆದ ೨೦ ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಇರುವವವರ ಮನೆಯ ಮುಂದೆ ಸೋಲಾರ್ ದೀಪವನ್ನು ನಿಯಮಾನುಸಾರವಾಗಿ ಅಳವಡಿಕೆ ಮಾಡಲಾಗಿದೆ. ಅಧ್ಯಕ್ಷರ ವಿವೇಚನೆಯ ಅನುಗುಣವಾಗಿ ೭ ವಾರ್ಡನ ಅಭಿವೃದ್ಧಿಗೆ ಪೂರಕವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.