ವೀರಾಜಪೇಟೆ, ಏ. ೮: ನಗರದ ಮಸೀದಿಯ ಆಡಳಿತ ಮಂಡಳಿಯ ವತಿಯಿಂದ ಸಾರ್ವಜನಿಕರಿಗೆ ಒಂದು ದಿನದ ಉಚಿತ ಅರೋಗ್ಯ ತಪಾಸಣೆ ಶಿಬಿರವು ಅಯೋಜನೆಗೊಂಡಿತ್ತು.
ವೀರಾಜಪೇಟೆ ನಗರದ ಸುಣ್ಣದ ಬೀದಿಯ ಮದೀನ ಮಸೀದಿ ಅಡಳಿತ ಮಂಡಳಿ ಮತ್ತು ಬಿಳುಗುಂದ ಗ್ರಾಮದ ಸಮಾಜ ಸೇವಾಕರಾದ ಇಮ್ರಾನ್ ಸಿದ್ದೀಕಿ ಅವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಸುಣ್ಣದ ಬೀದಿಯ ಈದ್ಗಾ ಮೈದಾನದಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು. ಮೈಸೂರು ಗೋಪಾಲಗೌಡ, ಶಾಂತವೇರಿ ಮೆಮೋರಿಯಲ್ ಆಸ್ಪತ್ರೆಯ ನರವಿಜ್ಞಾನಿ ಮತ್ತು ಪಾರ್ಶ್ವವಾಯು ತಜ್ಞರಾದ ಡಾ. ಸುಶ್ರುತ ಹೆಚ್.ಎಸ್ ಅವರ ಉಪಸ್ಥಿತಿಯಲ್ಲಿ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುವ ೮ ಮಂದಿ ನುರಿತ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ ಹೃದ್ರೋಗ, ನರಶಾಸ್ತçಜ್ಞರು, ಗ್ಯಾಸ್ಟೊçà ಎಂಟರಾಲಜಿಸ್ಟ್, ಮನೋವೈದ್ಯರು. ಮೂತ್ರಪಿಂಡ ತಜ್ಞರು, ಹಾಗೂ ಹಲವು ರೋಗಗಳ ತಜ್ಞರು ಶಿಬಿರದಲ್ಲಿ ಹಾಜರಿದ್ದು ಶಿಬಿರಕ್ಕೆ ಆಗಮಿಸಿದ್ದ ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.
ಈ ಸಂರ್ಭದಲ್ಲಿ ಶಿಬಿರದ ಡಾ. ಸುಶ್ರುತ ಹೆಚ್.ವಿ. ಆಯೋಜಕರಾದ ಎಸ್.ಹೆಚ್. ಮೈನುದ್ದೀನ್ ಮತ್ತು ಬಿ.ಆರ್. ಬಾಬು ಅವರು ಮಾತನಾಡಿದರು.