ಪೊನ್ನಂಪೇಟೆ, ಏ. ೯: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ೧೯೭೯ನೇ ಸಾಲಿನ ಬಿಎ ವಿಭಾಗದ ವಿದ್ಯಾರ್ಥಿಗಳ ಎರಡನೇ ವರ್ಷದ ಸ್ನೇಹ ಸಮ್ಮಿಲನ ಸಂತೋಷಕೂಟ ಕಾರ್ಯಕ್ರಮ ಕಾವೇರಿ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು. ಪಳಂಗAಡ ವಾಣಿ ಚಂಗಪ್ಪ, ಬೊಳ್ಳಂಡ ಕಿಶೋರಿ, ಮೇಕೆರಿರ ಇಂದಿರಾ ಹಾಗೂ ಕಳ್ಳಿಚಂಡ ಕಾವೇರಮ್ಮ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮೃತಪಟ್ಟ ಸದಸ್ಯರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವರ್ಷ ಹೊಸದಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸದಸ್ಯರು ತಮ್ಮ ಪರಿಚಯ ಮಾಡಿಕೊಂಡರು. ಸದಸ್ಯರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊAಡರು.

ಮನರAಜನಾ ಸ್ಪರ್ಧೆಯಲ್ಲಿ ಸೂಸಿ ಬಹುಮಾನ ಪಡೆದುಕೊಂಡರು. ಪ್ರೊ.ತಿರುನೆಲ್ಲಿಮಾಡ ದೇವಯ್ಯ, ನಾಮೇರ ರವಿ ದೇವಯ್ಯ, ತಾತಂಡ ಗೀತಾ ತಾಂಬೂಲ ಆಟ ನಡೆಸಿ ಕೊಟ್ಟರು. ಈ ಆಟದಲ್ಲಿ ಅಮ್ಮಾಟಂಡ ಜ್ಯೋತಿ, ಪಟ್ಟಡ ವಾಣಿ, ಬೊಳಂದAಡ ಸುಶೀಲ, ಕೊಟ್ರಮಾಡ ಸಾವಿತ್ರಿ, ಆಲೆಮಾಡ ಉಷಾ ಬಹುಮಾನ ಪಡೆದುಕೊಂಡರು.ಕೊಟ್ರಮಾಡ ಸಾವಿತ್ರಿ, ಪಳಂಗAಡ ವಾಣಿ, ಅಲೆಮಾಡ ಉಷಾ ಹಳೆಯ ಚಲನ ಚಿತ್ರಗೀತೆಗಳನ್ನು ಹಾಡಿದರು. ಮಲ್ಲೇಂಗಡ ಮಧು ಕುಶಾಲಪ್ಪ ಕೊಡವ ಕ್ವಿಜ್ ನಡೆಸಿಕೊಟ್ಟರು. ಕಳ್ಳಿಚಂಡ ವಿಜು ಕಾವೇರಮ್ಮ ಸ್ವರಚಿತ ಕವನ ವಾಚಿಸಿದರು. ನಾಮೇರ ರವಿ ದೇವಯ್ಯ, ಪಳಂಗAಡ ವಾಣಿ ಚಂಗಪ್ಪ ಹಾಗೂ ಮಲ್ಲೇಂಗಡ ಮಧು ಕುಶಾಲಪ್ಪ ಕಾರ್ಯಕ್ರಮ ಆಯೋಜಿಸಿದ್ದರು. ಕೊಟ್ರಮಾಡ ಸಾವಿತ್ರಿ ಪ್ರಾರ್ಥಿಸಿ, ಚೋನಿರ ದಿನಕರ್ ಸ್ವಾಗತಿಸಿ, ಮಲ್ಲೇಂಗಡ ಮಧು ಕುಶಾಲಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.