ಸೋಮವಾರಪೇಟೆ, ಏ. ೯: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವತಿಯಿಂದ ೨೦೨೦-೨೨ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ೧೯ ವಿಶೇಷಚೇತನ ಫಲಾನುಭವಿಗಳಿಗೆ ಉಚಿತವಾಗಿ ೭೫೦ ಲೀಟರ್ ಸಾಮರ್ಥ್ಯದ ನೀರಿನ ಡ್ರಮ್ ಗಳನ್ನು ವಿತರಿಸಲಾಯಿತು.
ಅಧ್ಯಕ್ಷೆ ಕೆ.ಎಂ. ಬಿಂದು ಮಾತನಾಡಿ, ಸರ್ಕಾರದ ಸೌಲಭ್ಯಗಳಿಂದ ವಿಶೇಷ ಚೇತನರು ವಂಚಿತರಾಗಬಾರದು. ಮುಂದೆಯೂ ಪಂಚಾಯಿತಿಯಿAದ ಸಿಗಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇವೆ. ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಬಿ.ಕೆ. ರಶೀದಾ, ಸದಸ್ಯರುಗಳಾದ ಸತೀಶ್, ಗೋಪಾಲಕೃಷ್ಣ, ರುದ್ರಪ್ಪ, ಶಂಕರ್, ಭಾಗ್ಯ, ಪ್ರಮೀಳಾ, ವೀಣಾ, ಮಧುಸೂದನ್ ಹಾಗೂ ಪಿಡಿಒ ಹೆಚ್.ಎಸ್. ಹರೀಶ್ ಇದ್ದರು.