ಸೋಮವಾರಪೇಟೆ, ಏ. ೯: ಇಲ್ಲಿನ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಪಡಿತರದಾರರಿಗೆ ಸರಿಯಾಗಿ ಪಡಿತರ ವಿತರಿಸುತ್ತಿಲ್ಲ ಎಂದು ಪಡಿತರದಾರರು ದೂರಿದ್ದಾರೆ.
ಇಲ್ಲಿ ತಿಂಗಳ ಸರಿಯಾದ ಸಮಯದಲ್ಲಿ ಸಂಘದ ಬಾಗಿಲು ತೆರೆದು ಪಡಿತರ ವಿತರಣೆ ಮಾಡುತ್ತಿಲ್ಲ. ತಿಂಗಳಿಗೆ ನಾಲ್ಕೆöÊದು ದಿನಗಳು ಮಾತ್ರ ಬಾಗಿಲು ತೆರೆದು ಪಡಿತರ ವಿತರಿಸುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರೇ ಹೆಚ್ಚಾಗಿ ಇರುವುದರಿಂದ ಒಂದು ದಿನ ರಜೆ ಹಾಕಿ ಅಕ್ಕಿಯನ್ನು ಪಡೆಯಬೇಕಾಗಿದ್ದು, ಸಮಸ್ಯೆಯಾಗುತ್ತಿದೆ ಎಂದು ಸುಶೀಲ ದೂರಿದರು. ಸೋಮವಾರ ಸಂತೆಯ ದಿನವಾಗಿದ್ದು, ಕೂಲಿ ಕಾರ್ಮಿಕರಿಗೆ ರಜೆ ಇರುತ್ತದೆ. ಅಂದು ಪೂರ್ತಿ ದಿನವಾದರೂ ಪಡಿತರ ವಿತರಿಸಿದ್ದಲ್ಲಿ ಪ್ರಯೋಜನವಾಗುತ್ತಿತ್ತು. ಕೊನೆಯ ಪಕ್ಷ ತಿಂಗಳ ಕೊನೆಯವಾರವಾದರೂ ಬೆಳಿಗ್ಗೆಯಿಂದ ಸಂಜೆಯವರೆಗೆ ಪಡಿತರ ವಿತರಿಸಬೇಕು. ಮುಂದಿನ ದಿನಗಳಲ್ಲಾದರೂ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ. ಸಂಘದಲ್ಲಿ ಇಬ್ಬರು ಮಾತ್ರ ಸಿಬ್ಬಂದಿಗಳಿರುವುದರಿAದ ತಿಂಗಳು ಪೂರ್ತಿ ಬಾಗಿಲು ತೆರೆದು ಪಡಿತರ ವಿತರಿಸಲು ಸಮಸ್ಯೆಯಾಗಿದೆ. ಆದುದ್ದರಿಂದ ಸಮಯವಾದಾಗ ಬಾಗಿಲು ತೆರೆದು ಪಡಿತರ ವಿತರಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಹೇಳಿದರು.
ಆಹಾರ ಇಲಾಖೆಯ ಅಧಿಕಾರಿ ಯಶಸ್ವಿನಿ ಮಾತನಾಡಿ, ಮಾಸಿಕ ೧೦ನೇ ತಾರೀಖಿನೊಳಗೆ ಎಲ್ಲ ನ್ಯಾಯ ಬೆಲೆ ಅಂಗಡಿಗಳಿಗೂ ಪಡಿತರ ವಿತರಿಸಲಾಗುತ್ತಿದೆ. ನ್ಯಾಯಬೆಲೆ ಅಂಗಡಿಯವರು ತಿಂಗಳ ೧೦ನೇ ತಾರೀಖಿನಿಂದ ತಿಂಗಳ ಕೊನೆಯವರೆಗೂ ಬಾಗಿಲು ತೆರೆದು ಪಡಿತರದಾರರಿಗೆ ಪಡಿತರ ವಿತರಿಸಬೇಕಿದೆ. ಯಾವುದೇ ಕಾರಣಕ್ಕೂ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾದ ಕೆಲಸವನ್ನು ಸಂಘದವರು ಮಾಡಬೇಕು. ತಪ್ಪಿದಲ್ಲಿ ಇಲಾಖೆಯ ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.