ನಾಪೋಕ್ಲು, ಏ. ೮: ಇತಿಹಾಸ ಪ್ರಸಿದ್ಧ ನಾಪೋಕ್ಲು ಗ್ರಾಮದ ಶ್ರೀ ಪೊನ್ನು ಮುತ್ತಪ್ಪ ದೇವರ ಹಬ್ಬವು ತಾ. ೩ ರಿಂದ ೫ ರವರೆಗೆ ನಡೆಯಿತು. ತಾ. ೩ ರಂದು ಭಾನುವಾರ ಬೆಳಿಗ್ಗೆ ಗಣಪತಿ ಹೋಮ, ರಾತ್ರಿ ಗುರು ಪೂಜೆ ಕಾರ್ಯಕ್ರ‍್ರಮ ನಡೆಯಿತು.
ತಾ. ೪ ರಂದು ಪೈಂಗುತ್ತಿ, ಸಂಜೆ ಮುತ್ತಪ್ಪ ದೇವರ ಕಲಶ ಶ್ರೀ ಕಾವೇರಿ ನದಿಯಲ್ಲಿ ಸ್ನಾನದ ನಂತರ ಪ್ರಖ್ಯಾತ ಕೇರಳ ಚಂಡೆ ಮೇಳ ಪಟಾಕಿ, ಬಾಣಬಿರುಸುಗಳ ಸಂಭ್ರಮದೊAದಿಗೆ ನಗರದಲ್ಲಿ ಮೆರವಣಿಗೆ ಮೂಲಕ ದೇವಾಲಯಕ್ಕೆ ಬರಲಾಯಿತು. ಈ ಸಂದರ್ಭ ಮುತ್ತಪ್ಪ ದೇವರ ಬೊಳ್ಳಾಟ (ತೆರೆ) ಕಲಶ ಹೊತ್ತ ವರನ್ನು ದೇವಾಲ ಯಕ್ಕೆ ಬರಮಾಡಿ ಕೊಂಡು ದೇವಾಲ ಯದ ಪ್ರದಕ್ಷಿಣೆ ಬರಲಾಯಿತು. ರಾತ್ರಿ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು. ಪ್ರಾತಃ ಕಾಲ ೧ ಗಂಟೆಗೆ ಗುಳಿಗ ತೆರೆ, ಮತ್ತು ತಾ, ೫ ರಂದು ಮಂಗಳವಾರ ಬೆಳಿಗ್ಗೆ ಕುಟ್ಟಿಚಾತ, ತಿರೂಪನೆ ಮತ್ತು ಪೊನ್ನು ಮುತ್ತಪ್ಪ (ತೆರೆ) ಕೋಲ ನಡೆಯಿತು. ಈ ಸಂದರ್ಭ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿ ದೇವರ ಪ್ರಸಾದವನ್ನು ಸ್ವೀಕರಿಸಿದರು.