ಸೋಮವಾರಪೇಟೆ, ಏ. ೮: ಸಮೀಪದ ಕೋವರ್ಕೊಲ್ಲಿ ತೋಟದ ಶ್ರೀ ವನದುರ್ಗಾದೇವಿ ದೇವಾಲಯದಲ್ಲಿ ೪೮ನೇ ವರ್ಷದ ವಾರ್ಷಿಕೋತ್ಸವ ಪೂಜಾ ಸಮಾರಂಭ ನಡೆಯಿತು.
ದೇವಾಲಯದ ಅರ್ಚಕ ಬಾಲು ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ದುರ್ಗಾಹೋಮ ನಡೆಯಿತು. ಸಂಜೆ ದೇವಿಯ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಕಾಫಿ ತೋಟದ ಕಾರ್ಮಿಕರಿಗೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಿತು.