ಮಡಿಕೇರಿ ಏ. ೮: ಹಿರಿಯ ನಾಗರಿಕರ ವೇದಿಕೆಯ ೨೦೨೦-೨೧ ರ ಸಾಲಿನ ಸಾಮಾನ್ಯ ಸಭೆಯು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಕೊಂಗAಡ ಎ.ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ತಾ. ೯ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಕಡಗದಾಳು ರಸ್ತೆಯ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆಯಲಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಟೀರ ಎ. ಅಯ್ಯಪ್ಪ ಇತರರು ಪಾಲ್ಗೊಳ್ಳಲಿದ್ದಾರೆ. ಸಾಹಿತಿ ನಾಗೇಶ್ ಕಾಲೂರು ಮತ್ತು ನೇತ್ರ ತಜ್ಞ ಡಾ. ಸಿ.ಆರ್.ಪ್ರಶಾಂತ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಕಾರ್ಯದರ್ಶಿ ಪಿ.ಎಸ್. ಅರವಿಂದ ತಿಳಿಸಿದ್ದಾರೆ.