ಕೂಡಿಗೆ, ಏ. ೭: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಗ್ರಾಮದ ಶ್ರೀ ಹನುಮಂತರಾಯ ಸ್ವಾಮಿ ದೇವಾಲಯದ ೧೩ನೇ ವಾರ್ಷಿಕ ಪೂಜೋತ್ಸವ, ನೂತನ ಮುಖ್ಯದ್ವಾರ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ನಡೆಯಿತು.

ತೊರೆನೂರಿನ ವಿರಕ್ತ ಮಠದ ಶ್ರೀ ಶ್ರೀ ಮಲ್ಲೇಶ ಸ್ವಾಮೀಜಿ, ಬಸವ ಪಟ್ಟಣದ ಶ್ರೀ ಶಿವಯೋಗಿ ಸ್ವಾಮೀಜಿ, ಅರಕಲಗೂಡಿನ ಚಿಲುಮೆಮಠದ ಶ್ರೀ ಶ್ರೀ ಜಯದೇವ ಸ್ವಾಮೀಜಿ ದಿವ್ಯ ಧಾರ್ಮಿಕ ಸಭಾ ಕಾರ್ಯಕ್ರಮ ಸಾನಿಧ್ಯ ವಹಿಸಿದ್ದರು.

ಸೋಮವಾರ ಬೆಳಿಗ್ಗೆ ದೇವಾಲಯದ ನೂತನ ಮುಖ್ಯ ದ್ವಾರವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿ ಗ್ರಾಮದಲ್ಲಿ ಒಂದು ಶಾಲೆ ಮತ್ತು ದೇವಾಲಯವಿದ್ದಲ್ಲಿ ಅಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಸಾಧ್ಯ ಎಂದರು.

ಬಳಿಕ ದೇವರ ಮೂರ್ತಿಯನ್ನು ಒಳಗೊಂಡ ಅಲಂಕೃತ ಬೆಳ್ಳಿರಥ ಮೆರವಣಿಗೆಗೆ ದಾನಿ ಬೆಳ್ಳುಳ್ಳಿ ಕುಮಾರ್ ಚಾಲನೆ ನೀಡಿದರು. ಅರ್ಚಕ ಬಸವಕುಮಾರ್ ಶಾಸ್ತಿç ಪೂಜಾ ವಿಧಿ ನೆರವೇರಿಸಿದರು.

ಹಾಸನ ಜಿಲ್ಲೆಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅರಕಲಗೂಡು ತಾಲೂಕಿನಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿರುವ ಹೆಬ್ಬಾಲೆಯ ಹೆಚ್ ಎಸ್ ಲೋಕೇಶ್ ಮಾಜಿ ಸೈನಿಕರಾದ ಟಿ.ವಿ. ರವಿ, ಟಿ.ಸಿ. ಭಾಗ್ಯವಂತ, ಟಿ.ಟಿ. ರವಿಕುಮಾರ್. ಟಿ.ವೈ. ವಿಶ್ವೇಶ್ವರಯ್ಯ ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಜಿ.ಪಂ. ಮಾಜಿ ಸದಸ್ಯ ಹೆಚ್.ಆರ್.ಶ್ರೀನಿವಾಸ, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಮಹೇಶ್, ಶಿರಂಗಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎನ್. ಲೋಕೇಶ್, ದೇವಾಲಯ ಸಮಿತಿ ಅಧ್ಯಕ್ಷ ಟಿ.ಸಿ. ಚಿಕ್ಕಯ್ಯ, ಕಾರ್ಯದರ್ಶಿ ಎಸ್.ಎಂ. ಹರೀಶ್, ಗೌರವ ಅಧ್ಯಕ್ಷ ಗುರುಲಿಂಗಪ್ಪ, ಮುಖ್ಯದ್ವಾರ ಸಮಿತಿ ಅಧ್ಯಕ್ಷ ಟಿ.ಎಂ. ಮೋಹನ್ ರಾಜ್, ಕಾರ್ಯದರ್ಶಿ ಟಿ.ಕೆ. ವಸಂತ, ಪ್ರಮುಖರಾದ ಟಿ.ಬಿ. ಜಗದೀಶ್, ರಾಜಶೇಖರ್, ತ್ರಿನೇಶ್, ಪ್ರಕಾಶ್, ಬಿ.ಎ.ಹರೀಶ್, ಅಪ್ಪಣ್ಣಿ, ಕೆ.ಎಸ್. ಕೃಷ್ಣೇಗೌಡ, ಫಾಲ್ಗುಣ, ವೀರಭದ್ರಶೆಟ್ಟಿ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.