ಗುಡ್ಡೆಹೊಸೂರು, ಏ. ೭: ಶ್ರೀಶಿವಕುಮಾರ ಸ್ವಾಮೀಜಿ ಅವರ ೧೧೫ನೇ ವರ್ಷದ ಜಯಂತಿಯ ಅಂಗವಾಗಿ ಗುಡ್ಡೆಹೊಸೂರಿನ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ಪೂಜಾ ಕಾರ್ಯವನ್ನು ಬೊಳ್ಳೂರು ಗ್ರಾಮದ ಅರ್ಚಕ ರಾಜಪ್ಪ ಅವರು ನಡೆಸಿದರು.

ಈ ಸಂದರ್ಭ ಅಖಿಲಭಾರತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಸಾಂಭವಮೂರ್ತಿ, ತಾಲೂಕು ಕಾರ್ಯದರ್ಶಿ ಶುಭಶೇಖರ್, ಯುವ ವೇದಿಕೆಯ ಬಿ.ಎಂ. ಪ್ರದೀಪ್, ಮಧುಸೂದನ ಮತ್ತು ಸ್ಥಳೀಯರಾದ, ಬಿ.ಪಿ. ಗುರುಬಸಪ್ಪ, ಪಾಪಣ್ಣ, ಮಹೇಂದ್ರ, ಬಿ.ಎಸ್. ದಿನೇಶ್, ಗುರುಸ್ವಾಮಿ, ಬಿ.ಟಿ. ಪ್ರಸನ್ನ. ಬಿ.ಟಿ. ಮಹೇಶ್ ಮುಂತಾದವರು ಹಾಜರಿದ್ದರು.ವೇದಿಕೆಯ ಬಿ.ಎಂ. ಪ್ರದೀಪ್, ಮಧುಸೂದನ ಮತ್ತು ಸ್ಥಳೀಯರಾದ, ಬಿ.ಪಿ. ಗುರುಬಸಪ್ಪ, ಪಾಪಣ್ಣ, ಮಹೇಂದ್ರ, ಬಿ.ಎಸ್. ದಿನೇಶ್, ಗುರುಸ್ವಾಮಿ, ಬಿ.ಟಿ. ಪ್ರಸನ್ನ. ಬಿ.ಟಿ. ಮಹೇಶ್ ಮುಂತಾದವರು ಹಾಜರಿದ್ದರು.