*ಗೋಣಿಕೊಪ್ಪ, ಏ. ೭: ಅರುವತ್ತೊಕ್ಲು ಮೈಸೂರಮ್ಮ ನಗರದ ಶ್ರೀ ಆಶೀರ್ವಾದ ಮುತ್ತಪ್ಪ ಭಕ್ತ ಮಂಡಳಿ ವತಿಯಿಂದ ಆಚರಿಸುವ ೧೧ನೇ ವರ್ಷದ ಶ್ರೀ ಮುತ್ತಪ್ಪ ದೇವರ ಉತ್ಸವ ತಾ. ೯ ಹಾಗೂ ೧೦ರಂದು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ತಾ. ೯ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೮ ಗಂಟೆಗೆ ದ್ವಜಾರೋಹಣ, ೯.೩೦ಕ್ಕೆ ಕಳಸ ಪೂಜೆ, ಅಪರಾಹ್ನ ೪.೩೦ ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವುದು, ೬.೩೦ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ, ೭.೩೦ಕ್ಕೆ ತಾಲಪ್ಪೊಲಿ ಆರತಿ ಪೂಜೆ, ೮ ಗಂಟೆಗೆ ವಸೂರಿಮಲ ಅಮ್ಮನ ತೆರೆ ನಂತರ ಅನ್ನಸಂತರ್ಪಣೆ ನಡೆಯಲಿದೆ.

ತಾ. ೧೦ರಂದು ಬೆಳಿಗ್ಗೆ ೬ ಗಂಟೆಯಿAದ ೧೧ ಗಂಟೆಯವರೆಗೆ ಮುತ್ತಪ್ಪನ್, ತಿರುವಪ್ಪನ್ ವೆಳ್ಳಾಟಂ, ಪೈಂಗುತ್ತಿ, ವಸೂರಿಮಲ ಅಮ್ಮನವರ ತೆರೆ ನಡೆಯಲಿದೆ.