ಕುಶಾಲನಗರ, ಏ.೭: ೨೦೨೨-೨೩ ನೇ ಸಾಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸುವ ಮತ್ತು ಸ್ಥಳದಲ್ಲಿಯೇ ಉದ್ದಿಮೆ ಪರವಾನಿಗೆ ನವೀಕರಿಸುವ ಸಲುವಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ವಿಶೇಷ ಆಂದೋಲನ ಕಾರ್ಯಕ್ರಮ ತಾ.೮ರಿಂದ (ಇಂದಿನಿAದ) ಹಮ್ಮಿಕೊಂಡಿದೆ.

ಪಟ್ಟಣದ ಮೂರು ಕಡೆ ವಿಶೇಷ ತೆರಿಗೆ ಪಾವತಿ ಆಂದೋಲನ ಕೌಂಟರ್ ತೆರೆಯಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.

ಕುಶಾಲನಗರ ರಥಬೀದಿಯ ವಾಸವಿ ಮಹಲ್ ಮುಂಭಾಗದ ಆವರಣ ಕರಿಯಪ್ಪ ಬಡಾವಣೆ ಮತ್ತು ಬೈಚನಹಳ್ಳಿಯ ಟಿವಿಎಸ್ ಶೋರೂಮ್ ಸಮೀಪ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ.

ತಾ. ೩೦ರ ಒಳಗಾಗಿ ತೆರಿಗೆ ಪಾವತಿಸುವ ಜನರಿಗೆ ಶೇಕಡ ೫ ರಿಯಾಯಿತಿ ದೊರೆಯಲಿದೆ. ಈ ಸಾಲಿನ ಆಸ್ತಿ ತೆರಿಗೆಯನ್ನು ಜೂನ್ ೩೦ ರ ಒಳಗಡೆ ಪಾವತಿಸುವಂತೆ ಅವರು ಕೋರಿದ್ದಾರೆ.