ಭಾರತದಲ್ಲಿ ಕೊರೊನಾ ರೂಪಾಂತರಿ ಪತ್ತೆ

ನವದೆಹಲಿ, ಏ. ೬: ಡೆಲ್ಟಾ, ಡೆಲ್ಟಾ ಪ್ಲಸ್, ಓಮಿಕ್ರಾನ್‌ನಂತೇ ಅತಿ ವೇಗವಾಗಿ ಹರಡಬಲ್ಲ ಕೊರೊನಾ ವೈರಸ್ ಹೊಸ ರೂಪಾಂತರಿ ‘ಎಕ್ಸ್ ಇ’ ಭಾರತಕ್ಕೂ ಕಾಲಿಟ್ಟಿದೆ. ಕೊರೊನಾ ವೈರಸ್ ರೂಪಾಂತರಿ ಘಿಇ ಯ ಭಾರತದ ಮೊದಲ ಪ್ರಕರಣ ಬುಧವಾರ ಮುಂಬೈನಲ್ಲಿ ವರದಿಯಾಗಿದೆ. ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಪ್ರಕಾರ, ಕಪ್ಪಾ ರೂಪಾಂತರದ ಒಂದು ಪ್ರಕರಣ ಇಂದು ಪತ್ತೆಯಾಗಿದೆ. ವೈರಸ್‌ನ ಹೊಸ ರೂಪಾಂತರಗಳನ್ನು ಹೊಂದಿರುವ ರೋಗಿಗೆ ಇಲ್ಲಿಯ ವರೆಗೆ ಯಾವುದೇ ತೀವ್ರವಾದ ರೋಗಲಕ್ಷಣಗಳು ಕಂಡುಬAದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ೩೭೬ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ ೨೩೦ ಮುಂಬೈ ನಿವಾಸಿಗಳ ಪರೀಕ್ಷಾ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳಿಸಲಾಗಿತ್ತು. ೨೩೦ ಮುಂಬೈ ರೋಗಿಗಳಲ್ಲಿ ೨೨೮ ಒಮಿಕ್ರಾನ್, ಒಂದು ಕಪ್ಪಾ ಮತ್ತು ಒಂದು ಘಿಇ ವೈರಸ್ ದೃಢಪಟ್ಟಿದೆ. ಒಟ್ಟು ೨೩೦ ರೋಗಿಗಳಲ್ಲಿ ೨೧ ಮಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಅವರಲ್ಲಿ ಯಾರಿಗೂ ಆಮ್ಲಜನಕ ಅಥವಾ ತೀವ್ರ ನಿಗಾಘಟಕದ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಾದವರಲ್ಲಿ ೧೨ ಮಂದಿ ಲಸಿಕೆ ಹಾಕಿಸಿಕೊಂಡಿಲ್ಲ ಮತ್ತು ಒಂಬತ್ತು ಮಂದಿ ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

ಮಂಡ್ಯದ ಹುಡುಗಿಗೆ ಅಲ್‌ಖೈದಾ ಮುಖ್ಯಸ್ಥನ ಶಬ್ಬಾಸ್ ಗಿರಿ

ಬೆಂಗಳೂರು, ಏ. ೬: ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದಕ್ಕೆ ಇದೀಗ ಉಗ್ರ ಸಂಘಟನೆ ಅಲ್ ಖೈದಾ ಎಂಟ್ರಿ ಕೊಟ್ಟಿದ್ದು, ಉಗ್ರ ಸಂಘಟನೆಯ ಮುಖ್ಯಸ್ಥ, ಮೋಸ್ಟ್ ವಾಂಟೆಡ್ ಉಗ್ರ ಅಯ್ಮಾನ್ ಅಲ್ ಜವಾಹಿರಿ, ಮಂಡ್ಯದಲ್ಲಿ ಹಿಜಾಬ್ ವಿರೋಧಿಸಿ ಜೈ ಶ್ರೀರಾಮ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಅವರನ್ನು ಹಾಡಿ ಹೊಗಳಿದ್ದಾರೆ. ಮುಸ್ಕಾನ್ ಖಾನ್ ಅವರನ್ನು ಶ್ಲಾಘಿಸಿ ೯ ನಿಮಿಷಗಳ ವೀಡಿಯೋವನ್ನು ಬಿಡುಗಡೆ ಮಾಡಿರುವ ಜವಾಹಿರಿ, ಹಿಜಾಬ್ ನಿಷೇಧದ ವಿರುದ್ಧ ಧ್ವನಿ ಎತ್ತುವಂತೆ ಭಾರತೀಯ ಮುಸ್ಲಿಮರಿಗೆ ಕರೆ ನೀಡಿದ್ದಾನೆ. ವೀಡಿಯೋದಲ್ಲಿ ಭಾರತದ ಹಿಂದೂ ಪ್ರಜಾಪ್ರಭುತ್ವದಲ್ಲಿ ಮುಸ್ಲಿಮರು ಕಿರುಕುಳಕ್ಕೆ ಒಳಗಾಗಿದ್ದು, ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯದ ಮುಸ್ಕಾನ್ ಭಾರತದ ಮಹಾನ್ ಮಹಿಳೆ (ನೋಬಲ್ ವುಮೆನ್ ಆಫ್ ಇಂಡಿಯಾ) ಎಂದ ಕರೆದಿದ್ದಾನೆ. ಅಲ್ಲದೆ ಮುಸ್ಕಾನ್‌ನನ್ನು ಹೊಗಳಿ ಕವನ ಓದಿದ್ದಾನೆ. ಸಾಮಾಜಿಕ ಮಾಧ್ಯಮದ ಮೂಲಕ ಮುಸ್ಕಾನ್ ಬಗ್ಗೆ ತಿಳಿದಿದೆ ಎಂದು ವೀಡಿಯೋದಲ್ಲಿ ಜವಾಹಿರಿ ಹೇಳಿದ್ದಾನೆ. ಈ ಸಹೋದರಿ ತಕ್ಬೀರ್ ಧ್ವನಿಯನ್ನು ಎತ್ತುವ ಮೂಲಕ ನನ್ನ ಹೃದಯವನ್ನು ಗೆದ್ದಿದ್ದಾಳೆ ಎಂದು ಉಗ್ರ ಹೇಳಿದ್ದಾನೆ. ಜವಾಹಿರಿಯ ಈ ವೀಡಿಯೊವನ್ನು ಅಲ್ ಖೈದಾದ ಅಧಿಕೃತ ಶಬಾಬ್ ಮೀಡಿಯಾ ಬಿಡುಗಡೆ ಮಾಡಿದೆ. ಒಸಾಮಾ ಬಿನ್ ಲಾಡೆನ್ ನಂತರ ಅಲ್ ಖೈದಾ ನಾಯಕನಾದ ಜವಾಹಿರಿ ಕರ್ನಾಟಕ ಕಾಲೇಜು ವಿದ್ಯಾರ್ಥಿ ಮುಸ್ಕಾನ್ ಖಾನ್‌ನನ್ನು ಮುಕ್ತಕಂಠದಿAದ ಹೊಗಳಿದ್ದಾನೆ. ಬಿಡುಗಡೆ ಮಾಡಿದ ವೀಡಿಯೋಗೆ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಶೀರ್ಷಿಕೆ ನೀಡಲಾಗಿದೆ.

ಗೌರಿ ಹತ್ಯೆ ಪ್ರಕರಣ-ಮೇ ೨೭ ರಿಂದ ವಿಚಾರಣೆ

ಬೆಂಗಳೂರು, ಏ. ೬: ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯಾದ ನಾಲ್ಕು ವರ್ಷಗಳ ನಂತರ ಮೇ ೨೭ ರಿಂದ ಪ್ರಕರಣದ ವಿಚಾರಣೆ ಆರಂಭವಾಗಲಿದೆ ಎಂದು ಪ್ರಾಸಿಕ್ಯೂಸನ್ ವಕೀಲರು ಹೇಳಿದ್ದಾರೆ. ಇಲ್ಲಿಯವರೆಗೂ ವಿಚಾರಣೆ ಆರಂಭವಾಗಿರಲಿಲ್ಲ. ಇದೀಗ ಮೇ ೨೭ ರಿಂದ ವಿಚಾರಣೆ ಆರಂಭವಾಗಲಿದೆ ಎಂದು ಹಿರಿಯ ವಕೀಲ ಎಸ್ ಬಾಲನ್ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಕಿಂಗ್ ಪಿನ್ ಅಮೋಲ್ ಕಾಳೆ, ಶೂಟರ್ ವಾಗ್ಮೋರ್ ಮತ್ತು ಮೊಬೈಕ್ ಸವಾರ ಗಣೇಶ್ ಮಿಸ್ಕಿನ್ ಸೇರಿದಂತೆ ೧೭ ಆರೋಪಿಗಳು ವಿಚಾರಣೆ ಎದುರಿಸಲಿದ್ದಾರೆ ಎಂದು ಬಾಲನ್ ಹೇಳಿದ್ದಾರೆ. ವಿಚಾರಣೆ ಆರಂಭವಾಗುತ್ತಿರುವುದಕ್ಕೆ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೂ ಜಾಮೀನು ಅರ್ಜಿಗಳಿಗೆ ಸಂಬAಧಿಸಿದAತೆ ವಿಚಾರಣೆ ನಡೆಯುತಿತ್ತು. ಇದೀಗ ವಿಚಾರಣೆ ಆರಂಭವಾಗುತ್ತಿರುವುದು ನಮಗೆ ಸಂತಸವನ್ನುAಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ. ೨೦೧೭ ಸೆಪ್ಟೆಂಬರ್ ೫ ರಂದು ಎಡಪಂಥೀಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿತ್ತು.

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ನಿಯಮ ಹಿಂದಕ್ಕೆ

ಕೊಲAಬೊ, ಏ. ೬: ಶ್ರೀಲಂಕಾ ಆರ್ಥಿಕ ಸ್ಥಿತಿ ಮತ್ತಷ್ಟು ಉಲ್ಭಣ ಗೊಂಡಿದ್ದು, ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಗೊಟಬಯ ರಾಜಪಕ್ಸೆ ಅವರು ಇದ್ದಕ್ಕಿದ್ದಂತೆ ತುರ್ತು ಪರಿಸ್ಥಿತಿ ನಿಯಮ ವನ್ನು ವಾಪಸ್ ಪಡೆದಿದ್ದಾರೆ. ಇದರಿಂದಾಗಿ ಶ್ರೀಲಂಕಾಗೆ ಅಗತ್ಯವಾಗಿ ಬೇಕಾಗಿರುವ ಅಂರ‍್ರಾಷ್ಟಿçÃಯ ಹಣಕಾಸು ನಿಧಿ (ಐಎಂಎಫ್) ಹಣಕಾಸು ಪರಿಹಾರ ಪ್ಯಾಕೇಜಿಗೆ ಒಪ್ಪಿಗೆ ಸೂಚಿಸುವ ಪ್ರಕ್ರಿಯೆ ಮತ್ತಷ್ಟು ಕಠಿಣವಾದಂತಾಗಿದೆ. ಏ. ೧ ರಿಂದ ಜಾರಿಯಾಗುವಂತೆ ಅಧ್ಯಕ್ಷರ ಅಧ್ಯಾದೇಶವನ್ನು ಏ. ೫ರ ಮಧ್ಯರಾತ್ರಿಯಿಂದ ಜಾರಿಯಾಗುವಂತೆ ರದ್ದುಪಡಿಸಲಾಗಿದೆ. ಮಂಗಳವಾರ ತಡರಾತ್ರಿ ಈ ಸಂಬAಧ ವಿಶೇಷ ಗಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ತುರ್ತು ಪರಿಸ್ಥಿತಿ ಘೋಷಣೆ ಮೂಲಕ, ಪ್ರತಿಭಟನಾಕಾರರನ್ನು ಬಂಧಿಸುವ, ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಸೇರಿದಂತೆ ಹಲವು ಅಧಿಕಾರಗಳು ಅಧ್ಯಕ್ಷರಿಗೆ ಲಭ್ಯವಾಗಿದ್ದವು. ಆದರೆ ಅಧ್ಯಕ್ಷರ ಪದತ್ಯಾಗಕ್ಕೆ ಹಲವು ಮಂದಿ ಸಂಸದರಿAದ ಆಗ್ರಹಗಳು ಕೇಳಿ ಬಂದಿದ್ದವು. ಆಡಳಿತಾರೂಢ ಮೈತ್ರಿಕೂಟದ ಹನ್ನೊಂದು ಪಕ್ಷಗಳು ಮಂಗಳವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿ, ತಾವು ಸ್ವತಂತ್ರ ಸಂಸದರಾಗಿ ಕಾರ್ಯನಿರ್ವಹಿಸುವುದಾಗಿ ಪ್ರಕಟಿಸಿದ್ದರು.

ಅನಿಲ್ ದೇಶಮುಖ್ ಪೊಲೀಸ್ ವಶಕ್ಕೆ

ಮುಂಬೈ, ಏ. ೬: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧನ ಕ್ಕೊಳಗಾಗಿರುವ ಮಹರಾಷ್ಟç ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಸಿಬಿಐ ವಿಶೇಷ ಕೋರ್ಟ್ ಹೆಚ್ಚಿನ ವಿಚಾರಣೆಗಾಗಿ ತಾ. ೧೧ ರವರೆಗೆ ಸಿಬಿಐ ವಶಕ್ಕೆ ನೀಡಿ ಬುಧವಾರ ಆದೇಶಿಸಿದೆ. ಇದಕ್ಕು ಮುನ್ನ ದೇಶಮುಖ್ ಅವರ ಆಪ್ತ ಸಹಾಯಕ ಕುಂದನ್ ಶಿಂಧೆ ಮತ್ತು ಕಾರ್ಯದರ್ಶಿ ಸಂಜೀವ್ ಪಲಾಂಡೆ ಅವರನ್ನು ವಶಕ್ಕೆ ಪಡೆದಿದ್ದ ಸಿಬಿಐ ಇದೀಗ ಮಾಜಿ ಗೃಹ ಸಚಿವರನ್ನು ಬಂಧಿಸಿ, ತನ್ನ ವಶಕ್ಕೆ ಪಡೆದುಕೊಂಡಿದೆ. ಮಂಗಳವಾರ ಸಂಜೆ ಜೆಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎನ್‌ಸಿಪಿ ಹಿರಿಯ ನಾಯಕ ದೇಶಮುಖ್ ಅವರನ್ನು ಇಂದು ಬೆಳಿಗ್ಗೆ ಸಿಬಿಐ ಬಂಧಿಸಿತ್ತು. ಬಳಿಕ ಅವರನ್ನು ಸಿಬಿಐ ವಿಶೇಷ ನ್ಯಾಯಾಧೀಶ ವಿಸಿ ಬಾರ್ಡೆ ಅವರ ಮುಂದೆ ಹಾಜರುಪಡಿಸಲಾಗಿದ್ದು, ತಾ. ೧೧ ರವರೆಗೆ ಸಿಬಿಐ ಕಸ್ಟಡಿಗೆ ನೀಡಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪ್ರಮುಖ ಆದ್ಯತೆ

ನವದೆಹಲಿ, ಏ. ೬: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನವದೆಹಲಿಯಲ್ಲಿಂದು ಹಲಾಲ್ ಮತ್ತು ಹಿಜಾಬ್ ವಿಚಾರಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು ಧಾರ್ಮಿಕ ವಿಚಾರವಾಗಿದ್ದು, ಕಾನೂನು ಎಲ್ಲರಿಗೂ ಒಂದೇ, ಕಾನೂನಿಗೆ ಎಲ್ಲರೂ ತಲೆಬಾಗಿ ನಡೆಯಲೇಬೇಕು, ನಮ್ಮ ಸರ್ಕಾರ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು ಪ್ರಾಮುಖ್ಯತೆ ನೀಡುತ್ತದೆ ಎಂದು ಹೇಳಿದರು. ಸಮಾಜದಲ್ಲಿ ಶಾಂತಿ ಕದಡುತ್ತಿರುವ ಬಗ್ಗೆ ಸರ್ಕಾರ ಕೈಕಟ್ಟಿ ಕುಳಿತಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಏನಾದರೂ ಅಂದುಕೊಳ್ಳಲಿ. ವೈಯಕ್ತಿಕ ವಿಚಾರಗಳನ್ನು ಜನ ತೀರ್ಮಾನಿಸುತ್ತಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು. ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಹಲವಾರು ವಿಚಾರಗಳು ಬಂದಾಗ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದೇವೆ. ಹೇಳಿಕೆ ಕೊಟ್ಟರಷ್ಟೇ ಆಡಳಿತ ಅಲ್ಲ. ಆಡಳಿತ ಮಾಡಲು ರೀತಿ ನೀತಿಗಳಿವೆ. ಅದರಂತೆ ನಾವು ಆಡಳಿತ ಮಾಡುತ್ತೇವೆ ಎಂದು ಅವರು ತಿಳಿಸಿದರು.