ಗೋಣಿಕೊಪ್ಪ ವರದಿ, ಏ. ೬: ಹಳ್ಳಿಗಟ್ಟು ಫ್ರೆಂಡ್ಸ್ ಸ್ಪೋರ್ಟ್ಸ್ ಅಸೋಸಿಯೇಷನ್ ಕ್ಲಬ್ ವತಿಯಿಂದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟವನ್ನು ತಾ. ೧೬ ರಂದು ಹಳ್ಳಿಗಟ್ಟು ವಿ.ಆರ್.ಎಂ. ಪ್ಲಾಂಟ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಅಸೋಷಿಯೇಷನ್ ಅಧ್ಯಕ್ಷ ಮನೆಯಪಂಡ ಪ್ರಾಣ್ ಬೋಪಣ್ಣ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟನೆ ನಡೆಯಲಿದ್ದು, ರಾತ್ರಿವರೆಗೆ ಪಂದ್ಯಾಟ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಂದ್ಯಾವಳಿಯ ಮೂರು ಉತ್ತಮ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು. ಆಸಕ್ತ ತಂಡಗಳು ತಾ. ೧೨ ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕಿದೆ ಎಂದರು. ಹೆಚ್ಚಿನ ಮಾಹಿತಿಗೆ ೯೯೮೦೭೪೯೫೭೭, ೯೪೪೮೭೨೦೨೪೮ ಸಂಖ್ಯೆ ಸಂಪರ್ಕಿಸಬಹುದಾಗಿದೆ. ಗೋಷ್ಠಿಯಲ್ಲಿ ಅಸೋಸಿಯೇಷನ್ ಕಾರ್ಯದರ್ಶಿ ಅಜಿತ್ ಗಣಪತಿ, ಖಜಾಂಚಿ ಬಿ.ಎಸ್. ಸುರೇಶ್, ಸದಸ್ಯರಾದ ರಾಜಾ ಚಂದ್ರಶೇಖರ್, ಬಿ.ಪಿ. ಮನು ಇದ್ದರು.