ಪೊನ್ನಂಪೇಟೆ, ಏ. ೬: ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಹುದ್ದೆಗೆ ಬಿಎಸ್ಸಿ ಅರಣ್ಯಶಾಸ್ತç ಪದವೀಧರರಿಗೆ ನೀಡಿದ್ದ ಶೇ. ೭೫ ರಷ್ಟು ಮೀಸಲಾತಿಯನ್ನು ಕಡಿತಗೊಳಿಸಿ ಶೇ. ೫೦ಕ್ಕೆ ಇಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಆವರಣದಲ್ಲಿ ಪೊನ್ನಂಪೇಟೆ ಕರ್ನಾಟಕ ಅರಣ್ಯ ಪದವೀಧರರ ಮತ್ತು ವಿದ್ಯಾರ್ಥಿಗಳ ಸಂಘದ ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯುತ್ತಿದೆ. ತರಗತಿಗಳನ್ನು ಬಹಿಷ್ಕರಿಸಿ ಕಾಲೇಜಿನ ಮುಂಭಾಗ ಧರಣಿ ಕುಳಿತಿರುವ ಅರಣ್ಯಶಾಸ್ತç ವಿದ್ಯಾರ್ಥಿಗಳು ಸರ್ಕಾರದ ಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸರ್ಕಾರದ ಅವೈಜ್ಞಾನಿಕ ವಿಧಾನದಿಂದ ಅರಣ್ಯ ಪದವಿ ಪಡೆದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ವೃತ್ತಿಪರ ಶಿಕ್ಷಣ ಪದವಿಗಳ ಪ್ರವೇಶಾತಿಗಾಗಿ ನಡೆಸುವ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು, ಅರಣ್ಯ ಶಾಸ್ತç ಪದವಿಯನ್ನು ಆಯ್ದುಕೊಂಡು ೪ ವರ್ಷಗಳ ಸತತ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಂಡ ವಿದ್ಯಾರ್ಥಿಗಳ ಭವಿಷ್ಯವನ್ನು ಕಿತ್ತುಕೊಂಡಿರುವ ಸರ್ಕಾರ, ಅರಣ್ಯಶಾಸ್ತç ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ಆದ್ದರಿಂದ ಸರ್ಕಾರದ ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಹಾಗೂ ಅರಣ್ಯ ಇಲಾಖೆಯ ಹುದ್ದೆಗೆ ಅರಣ್ಯಶಾಸ್ತç ಪದವಿಯನ್ನು ಕನಿಷ್ಟ ವಿದ್ಯಾರ್ಹತೆಯನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಅರಣ್ಯಶಾಸ್ತç ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಹಾಗೂ ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮೀಸಲಾತಿಯನ್ನು ಕಡಿತ ಗೊಳಿಸಿರುವ ಬಗ್ಗೆ ಇತ್ತೀಚೆಗೆ ವಿಧಾನಸೌಧಕ್ಕೆ ತೆರಳಿ ಅರಣ್ಯ ಸಚಿವರನ್ನು ಭೇಟಿ ಮಾಡಿದಾಗ, ಅರಣ್ಯ ಸಚಿವರು ಮಾತನಾಡಿ, ಅರಣ್ಯ ಇಲಾಖೆಯ ಹುದ್ದೆಗಳಿಗೆ ಬೇರೆಬೇರೆ ಇಲಾಖೆಯವರನ್ನು ಕೂಡ ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಅರಣ್ಯದಲ್ಲಿ ಟ್ರೆಂಚಿAಗ್ ಮಾಡಲು ಇಂಜಿನಿಯರಿAಗ್ ಪದವೀಧರರು ಬೇಕು. ಅಗ್ರಿಕಲ್ಚರಲ್ ಇಲಾಖೆಯವರು ಪ್ಲಾಂಟೇಶನ್ ಮಾಡೋಕೆ ಬೇಕು. ಹಾರ್ಟಿಕಲ್ಚರ್ ಪದವಿ ಪಡೆದವರು ಹಣ್ಣಿನ ಗಿಡಗಳನ್ನು ನೆಡಲುಬೇಕು. ವೆಟನರಿ ಇಲಾಖೆಯವರು ಕಾಡಿನಲ್ಲಿರುವ ಪ್ರಾಣಿಗಳಿಗೆ ಏನಾದರೂ ತೊಂದರೆ ಸಂಭವಿಸಿದಾಗ ಬೇಕಾಗುತ್ತಾರೆ. ಆದ್ದರಿಂದ ಈ ಇಲಾಖೆಯವರನ್ನು ಅರಣ್ಯ ಇಲಾಖೆಯ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಸಮಜಾಯಿಸಿಕೆ ನೀಡಿದ್ದಾರೆ. ಆದರೆ ಅರಣ್ಯಶಾಸ್ತç ಪದವಿ ವಿದ್ಯಾರ್ಥಿಗಳು ತಮ್ಮ ೪ ವರ್ಷದ ಪದವಿಯ ಸಂದರ್ಭದಲ್ಲಿ

(ಮೊದಲ ಪುಟದಿಂದ) ಈ ಎಲ್ಲಾ ವಿಷಯಗಳ ಬಗ್ಗೆ ಅಧ್ಯಯನ ಮಾಡಿ ಅದರ ಬಗ್ಗೆ ಜ್ಞಾನವನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ ಅರಣ್ಯ ಸಚಿವರ ಹೇಳಿಕೆ ಸರಿಯಾಗಿಲ್ಲ. ಸರ್ಕಾರ ಕೂಡಲೇ ಮೀಸಲಾತಿ ಕಡಿತ ನಿರ್ಧಾರವನ್ನು ಕೈಬಿಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರಣ್ಯಶಾಸ್ತç ಪದವಿಯನ್ನು ಪರಿಗಣಿಸಬೇಕು. ಅರಣ್ಯ ಶಾಸ್ತç ಪದವೀಧರರಿಗೆ ಅರಣ್ಯ ಇಲಾಖೆಯ ಹುದ್ದೆಯಲ್ಲಿ ಶೇ. ೧೦೦ ರಷ್ಟು ಮೀಸಲಾತಿಯನ್ನು ನೀಡಬೇಕು. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು. ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಕೂಡ ಪ್ರತಿಭಟನೆ ಮಾಡುವ ಬಗ್ಗೆ ಈಗಾಗಲೇ ಚಿಂತನೆ ನಡೆಸುತ್ತಿದ್ದೇವೆ ಎಂದು ಅಂತಿಮ ಪದವಿ ವಿದ್ಯಾರ್ಥಿ ಎನ್.ಜಿ. ರೇವಣ್ಣ ಹೇಳಿದರು.

ಪಿಯುಸಿಯಲ್ಲಿ ಶೇ. ೯೦ ರಷ್ಟು ಅಂಕಗಳನ್ನು ಪಡೆದುಕೊಂಡು, ಅರಣ್ಯದ ಬಗ್ಗೆ ಕಾಳಜಿ ಇರುವುದರಿಂದ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಸಲುವಾಗಿ ಅರಣ್ಯ ಕಾಲೇಜಿಗೆ ಪ್ರವೇಶ ಪಡೆದುಕೊಂಡಿದ್ದೇವೆ. ಪ್ರತಿ ವರ್ಷ ಸುಮಾರು ೧೬೦ ವಿದ್ಯಾರ್ಥಿಗಳು ಅರಣ್ಯ ಪದವಿ ಪೂರ್ಣಗೊಳಿಸುತ್ತಾರೆ. ಸರ್ಕಾರದ ನಿರ್ಧಾರದಿಂದ ಇವರ ಬದುಕು ಬೀದಿಗೆ ಬೀಳಲಿದೆ. ನಮ್ಮ ಪೋಷಕರು ರೈತರು ಹಾಗೂ ಬಡ ವರ್ಗದವರಾಗಿದ್ದು ಕಷ್ಟಪಟ್ಟು ದುಡಿದು ಸಾಲ ಮಾಡಿ ಕಾಲೇಜಿಗೆ ಸೇರಿಸಿದ್ದಾರೆ. ಆದರೆ ಈಗ ಸರ್ಕಾರ ಅರಣ್ಯಶಾಸ್ತç ಪದವೀಧರರ ಭವಿಷ್ಯವನ್ನೇ ಮಣ್ಣುಪಾಲು ಮಾಡಲು ಹೊರಟಿದೆ. ಸರ್ಕಾರ ಪುನರ್ ಪರಿಶೀಲನೆ ನಡೆಸಿ ಆರ್‌ಎಫ್‌ಓ ಹುದ್ದೆಗೆ ನಿಗದಿ ಮಾಡಿರುವ ಶೇ. ೫೦ ಮೀಸಲಾತಿಯನ್ನು ಶೇ. ೧೦೦ ರಷ್ಟಕ್ಕೆ ಏರಿಸಿ, ಅರಣ್ಯ ಪದವಿಯನ್ನು ಕನಿಷ್ಟ ವಿದ್ಯಾರ್ಹತೆಯನ್ನಾಗಿ ಮಾಡಬೇಕು. ಈ ಮೂಲಕ ಅರಣ್ಯಶಾಸ್ತç ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದು ತೃತೀಯ ಪದವಿ ವಿದ್ಯಾರ್ಥಿನಿ ಗೀತಾ ಎ.ಎನ್. ಒತ್ತಾಯಿಸಿದ್ದಾರೆ.

ಪ್ರತಿ ಸೆಮಿಸ್ಟರ್‌ಗೆ ರೂ. ೧೬ ಸಾವಿರ ಶುಲ್ಕ ಪಾವತಿಸುತ್ತೇವೆ. ಜೊತೆಗೆ ಉಳಿದುಕೊಳ್ಳುವ ಹಾಗೂ ಆಹಾರ ವ್ಯವಸ್ಥೆಗೆ ಪ್ರತ್ಯೇಕ ಹಣ ಬೇಕಾಗುತ್ತದೆ. ಪೋಷಕರು ನಮ್ಮ ಭವಿಷ್ಯವನ್ನು ನಂಬಿ ಕಷ್ಟಪಟ್ಟು ಹಣ ಒದಗಿಸುತ್ತಾರೆ. ಆದರೆ, ನಮಗೆ ಹುದ್ದೆಗಳಲ್ಲಿ ಆದ್ಯತೆಯೇ ನೀಡದೆ ನಾವು ಅರಣ್ಯ ಸಂಬAಧ, ವನ್ಯಜೀವಿ ಸಂಬAಧ ಪಠ್ಯ ವಿಷಯಗಳಲ್ಲದೆ, ಅರಣ್ಯ ಪ್ರದೇಶಗಳಲ್ಲಿಯೂ ನಡೆಸುವ ಅಧ್ಯಯನವೆಲ್ಲ ವ್ಯರ್ಥವಾಗಿ ಹೋಗುತ್ತಿದೆ. ತಾ. ೮ ರಂದು ಕೊಡಗು ಜಿಲ್ಲೆಗೆ ಆಗಮಿಸುವ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಇಲ್ಲಿಗೆ ಭೇಟಿ ನೀಡಿ ನಮ್ಮ ಕಷ್ಟವನ್ನು ಪರಿಹರಿಸಲಿ ಎಂದು ವಿದ್ಯಾರ್ಥಿನಿ ಶ್ರೇಷ್ಠ ಆಗ್ರಹಿಸಿದ್ದಾರೆ.

- ಚನ್ನನಾಯಕ್