ಕುಶಾಲನಗರ, ಏ. ೭: ಸಮೀಪದ ಚಿಕ್ಕಹೊಸೂರು ಗ್ರಾಮದಲ್ಲಿ ಯುಗಾದಿ ಹೊಸ ವರುಷದ ಅಂಗವಾಗಿ ಶ್ರೀ ಬಸವೇಶ್ವರ ದೇವರ ಉತ್ಸವ ಹಾಗೂ ಡಾ. ಶಿವಕುಮಾರ ಸ್ವಾಮೀಜಿಗಳ ೧೧೫ನೇ ವರುಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು. ವೀರಗಾಸೆ, ವಾದ್ಯದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮೂಲಕ ಬಸವ ಉತ್ಸವ ಮೂರ್ತಿ ಹಾಗೂ ಶಿವಕುಮಾರ ಸ್ವಾಮೀಜಿಗಳ ಮೂರ್ತಿಯನ್ನು ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಉತ್ಸವದಲ್ಲಿ ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಸ್ವಾಮಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಗ್ರಾಮದ ಪ್ರಮುಖರಾದ ಪ್ರಭುಸ್ವಾಮಿ, ಮಂಜುನಾಥಸ್ವಾಮಿ, ನಟರಾಜ, ಜಗದೀಶ್, ಸೋಮಶೇಖರ್, ರಾಜ, ಬಸವರಾಜು, ಶಿವಕುಮಾರ್, ಕೆಂಪರಾಜ್ ಭಾಗವಹಿಸಿದ್ದರು.