ಚೆಯ್ಯಂಡಾಣೆ, ಏ. ೭: ಚೆಯ್ಯಂಡಾಣೆ ಸಮೀಪದ ಕೋಕೇರಿ ಗ್ರಾಮದ ನಿವೃತ್ತ ಶಿಕ್ಷಕ ಬಿದ್ದಂಡ ರಾಜ ಉತ್ತಪ್ಪ ಅವರಿಗೆ ಬೀಳ್ಕೊಡಲಾಯಿತು. ಕೆಲವು ಖಾಸಗಿ ಶಾಲೆಗಳಲ್ಲಿ ಎಂಟು ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಇವರು ೧೯೯೩ ರಲ್ಲಿ ಸರಕಾರಿ ಸೇವೆಗೆ ಪದಾರ್ಪಣೆ ಮಾಡಿದರು. ಮೊದಲು ದೇವರಪುರ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದರು.

೨೦೦೨ ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹುದ್ದೆ ವಹಿಸಿದ್ದರು. ೨ ವರ್ಷಗಳ ಬಳಿಕ ಕಡಂಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡರು. ೧೮ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಮಾರ್ಚ್ನಲ್ಲಿ ವಯೋನಿವೃತ್ತಿ ಹೊಂದಿದ್ದ ಉತ್ತಪ್ಪ ಅವರನ್ನು ಕಡಂಗದ ಗ್ರಾಮಸ್ಥರು, ಸ್ಥಳೀಯ ಸಂಘ-ಸAಸ್ಥೆಗಳು ಹಳೇ ವಿದ್ಯಾರ್ಥಿಗಳ ಸಂಘ, ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಸೇರಿದಂತೆ ಹಲವಾರು ಸಂಘ-ಸAಸ್ಥೆಗಳ ಪ್ರಮುಖರು ಇವರನ್ನು ಸನ್ಮಾನಿಸಿ ಬೀಳ್ಕೊಟ್ಟರು.