ಮಡಿಕೇರಿ, ಏ. ೭: ಮಡಿಕೇರಿ ತಾಲೂಕು, ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ‘ದುಡಿಯೋಣ ಬಾ' ಪೋಸ್ಟರ್ ಬಿಡುಗಡೆ ಮಾಡುವ ಮೂಲಕ, ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಭರತ್ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಯಡಿಯಲ್ಲಿ ಮಾರ್ಚ್ ೧೫ ರಿಂದ ಜೂನ್ ೩೦ ರವರೆಗೆ, ದುಡಿಯೋಣ ಬಾ ಅಭಿಯಾನದಲ್ಲಿ ಭಾಗವಹಿಸಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಸಂಪಾಜೆ ಗ್ರಾಮದ ಜನರು ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಇನ್ನಷ್ಟು ಯೋಜನೆಯ ಅವಕಾಶವನ್ನು ಪಡೆದುಕೊಳ್ಳಲು ಕರೆ ನೀಡಿದರು.
ಈ ಸಂದರ್ಭ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಯಡಿಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ' ನವ ಭಾರತದ ನಾರಿ' ಪ್ರಶಸ್ತಿಗೆ ಭಾಜನರಾದ ನರೇಗಾ ಫಲಾನುಭವಿ ಉದಯಕುಮಾರಿ ಸಂಪಾಜೆಯವರನ್ನು, ಗೌರವಿಸ ಲಾಯಿತು ಹಾಗೂ ನರೇಗಾದಡಿ ನೂರು ದಿನ ಕೆಲಸ ಪೂರೈಸಿದ ಸೀತಮ್ಮ ಸುಂದರ, ಜಲಜಾ ಚಂದ್ರಶೇಖರ, ನಾರಾಯಣ ಕುಕ್ಕೇಟಿ, ಕಾಯಕ ಬಂಧು ಯಮುನಾ ಅವರನ್ನು ಸನ್ಮಾನಿಸಲಾಯಿತು. ಸಂಪಾಜೆ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಮಾಹಿತಿಯುಳ್ಳ ಕರಪತ್ರವನ್ನು ಹಂಚಲಾಯಿತು. ಒಉಓಖಇಉಂ mಚಿಜiಞeಡಿi ಥಿouಣube ಚಾನೆಲ್ನಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ನರೇಗಾ ಕಾಮಗಾರಿ ಕುರಿತಾದ ವೀಡಿಯೋ ಡಾಕ್ಯುಮೆಂಟರಿಯನ್ನು, ಪ್ರದರ್ಶಿಸಲಾಯಿತು ಹಾಗೂ ಜಾಬ್ ಕಾರ್ಡ್ ಅನ್ನು ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ವಿತರಿಸಿದರು.
ನರೇಗಾ ಉದ್ಯಾನವನದಲ್ಲಿ ಸಸಿ ನೆಡುವಿಕೆ : ಪಂಚಾಯಿತಿ ಮುಂಭಾಗ ಹಾಗೂ ಬಿ.ಸಿ.ಎಂ ಹಾಸ್ಟೆಲ್ ಮುಂಭಾಗ ನಿರ್ಮಿಸುತ್ತಿರುವ ನರೇಗಾ ಉದ್ಯಾನವನದಲ್ಲಿ ಸಸಿಯನ್ನು ಜಾಬ್ ಕಾರ್ಡ್ದಾರರು ನೆಟ್ಟರು.
ಪೌಷ್ಟಿಕ ತೋಟ ತರಕಾರಿ ಮಾರಾಟ : ನರೇಗಾದಲ್ಲಿ ರೂ.೧೮೫೪ ರಷ್ಟು ವೈಯಕ್ತಿಕ ಪೌಷ್ಟಿಕ ತೋಟ ನಿರ್ಮಿಸಲು ಅವಕಾಶವಿದ್ದು, ಪೌಷ್ಟಿಕ ತೋಟದಲ್ಲಿ ಬೆಳೆದ ಸೊಪ್ಪು, ತರಕಾರಿಯನ್ನು ಫಲಾನುಭವಿಗಳು ಮಾರಾಟಕ್ಕೆ ಇರಿಸಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಜನರು ತರಕಾರಿ ಖರೀದಿಯಲ್ಲಿ ತೊಡಗಿದ್ದರು.
ತಾಲೂಕು ಐ.ಇ.ಸಿ. ಸಂಯೋಜಕರಾದ ಅಕ್ಷಿತ ಕೆ.ಡಿ. ನರೇಗಾ ಮಾಹಿತಿಯನ್ನು ಒದಗಿಸಿ ಕೊಟ್ಟರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಸ್ವಾಗತಿಸಿ ನಿರೂಪಿಸಿದರು, ಕಾರ್ಯದರ್ಶಿ ಸೀತಾರಾಮು ವಂದಿಸಿದರು. ತಾಲೂಕು ಎಂ.ಐ.ಎಸ್. ಸಂಯೋಜಕರು ಬಿನ್ಸಿ ಜಿ.ಯು, ಗ್ರಾ.ಪಂ. ಉಪಾಧ್ಯಕ್ಷರು ಜಗದೀಶ್, ಗ್ರಾ.ಪಂ. ಸದಸ್ಯರು, ಪಂಚಾಯಿತಿ ಸಿಬ್ಬಂದಿ ವರ್ಗ, ಸ್ವಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.