ಮಡಿಕೇರಿ, ಏ. ೬: ಚಿಪ್ಪು ಹಂದಿಯ ಚಿಪ್ಪನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳ ಬಂಧಿಸಿದೆ.

ಕಳೆದ ತಾ. ೨೮ ರಂದು ಅತ್ತೂರು ಗ್ರಾಮದ ಆರೋಗ್ಯ ಕ್ಷೇಮ ಕೇಂದ್ರದ ಮುಂಭಾಗ ಪ್ಲಾಸ್ಟಿಕ್ ಚೀಲವೊಂದರಲ್ಲಿ ಚಿಪ್ಪನ್ನು ತುಂಬಿಕೊAಡು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಬಗ್ಗೆ ದೊರೆತ ಮಾಹಿತಿಯನ್ವಯ ದಾಳಿ ನಡೆಸಿದ ಪೊಲೀಸರು ಆರೋಪಿಗಳಾದ ವೀರಾಜಪೇಟೆ ತಾಲೂಕು ಚೆನ್ನಂಗಿ ಗ್ರಾಮದ ರಾಜು, ಕೊಡ್ಲಿಪೇಟೆ ಕಟ್ಟೆಪುರ ಗ್ರಾಮದ ಧರ್ಮ ಅಲಿಯಾಸ್ ಮರಿ ಎಂಬವರುಗಳನ್ನು ಮಾಲು ಸಹಿತ ಬಂಧಿಸಿದ್ದಾರೆ.

(ಮೊದಲ ಪುಟದಿಂದ) ಆರೋಪಿಗಳನ್ನು ಪೊನ್ನಂಪೇಟೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಚಂದ್ರಕಾAತ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ಅರಣ್ಯ ಸಂಚಾರಿ ದಳದ ಪ್ರಬಾರ ಉಪ ನಿರೀಕ್ಷಕರಾದ ಸಿ.ಯು. ಸವಿ, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ. ಬೀನಾ, ಎಸ್.ಎಂ. ಯೋಗೇಶ್, ಪಿ.ಯು. ಮುನಿರ್, ಆರ್. ನಂದಕುಮಾರ್, ಮೋಹನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.