ಮಡಿಕೇರಿ, ಏ. ೬: ನಗರದ ಹೊರವಲಯದ ಕರವಲೆ ಭಗವತಿ ದೇವಾಲಯದಲ್ಲಿ ೨೦೧೯ರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
ವಿವಿಧ ಕಳ್ಳತನ ಮಾಡಿಕೊಂಡು ಊರೂರು ಸುತ್ತಾಡುತ್ತಿದ್ದ ರವಿಕುಮಾರ್ (೪೦) ಬಂಧಿತ ಆರೋಪಿ. ಮೂರು ವರ್ಷಗಳ ಹಿಂದೆ ಮಡಿಕೇರಿ ದಸರಾ ಸಂದರ್ಭ ಬಂದಿದ್ದ ಆರೋಪಿ ದಶಮಂಟಪ ಸಾಗುವ ಎಲ್ಲಾ ದೇವಾಲಯಗಳಿಗೆ ತೆರಳಿದ್ದ. ಈ ಸಂದರ್ಭ ನಗರದ ಹೊರವಲಯದಲ್ಲಿದ್ದ ಕರವಲೆ ಭಗವತಿ ದೇವಾಲಯ ಕಳ್ಳತನ ಮಾಡಲು ಸೂಕ್ತ ಎಂದು ತಿಳಿದು ೨ ತಿಂಗಳ ಬಳಿಕ ದೇವಾಲಯಕ್ಕೆ ನುಗ್ಗಿ ತಾಮ್ರದ ವಸ್ತುಗಳು, ತ್ರಿಶೂಲ ಸೇರಿದಂತೆ ದೇವರ ಅಲಂಕಾರಿಕ ವಸ್ತುಗಳನ್ನು ಕದ್ದು ಪರಾರಿಯಾಗಿದ್ದ.
ಇತ್ತೀಚಿಗೆ ಹಾಸನದಲ್ಲಿ ದೇವಾಲಯ ಕಳ್ಳತನ ಪ್ರಕರಣದಲ್ಲಿ ರವಿಕುಮಾರ್‌ನನ್ನು ಬಂಧಿಸಿದಾಗ ಮಡಿಕೇರಿ ಕಳ್ಳತನ ಪ್ರಕರಣ ಬಯಲಾಗಿದೆ.
(ಮೊದಲ ಪುಟದಿಂದ) ಕರವಲೆ ಭಗವತಿ ದೇವಾಲಯದಲ್ಲಿ ಕಳವು ಮಾಡಿದ್ದ ವಸ್ತುಗಳನ್ನು ಮೈಸೂರಿನ ಚಿನ್ನದ ಅಂಗಡಿಗೆ ಮಾರಾಟ ಮಾಡಿದ್ದಾನೆ. ಆದರೆ, ಅದರ ಮಾಲೀಕ ಕೋವಿಡ್‌ನಿಂದ ಮೃತಪಟ್ಟ ಹಿನ್ನೆಲೆ ಕಳವಾದ ವಸ್ತುಗಳು ದೊರೆತ್ತಿಲ್ಲ ಎಂದು ತಿಳಿದು ಬಂದಿದೆ.
ಆರೋಪಿಯನ್ನು ಮಡಿಕೇರಿ ನ್ಯಾಯಾಲಯಕ್ಕೆ ಒಪ್ಪಿಸಿ ವಿಚಾರಣೆ ನಡೆಸಿ ಬಳಿಕ ಹಾಸನದ ಬಂಧಿಖಾನೆಯಲ್ಲಿ ಶಿಕ್ಷೆಗೆ ಒಳಪಡಿಸಲಾಗಿದೆ. ಈ ಸಂಬAಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.