ಮಡಿಕೇರಿ, ಏ. ೫: ಬಡವರಿಗೆ ಸರ್ಕಾರ ಸೂರು ಒದಗಿಸಬೇಕೆಂದು ಆಗ್ರಹಿಸಿ ಜೆಡಿಎಸ್ ವತಿಯಿಂದ ತಾ. ೬ ರಿಂದ (ಇಂದಿನಿAದ) ತಾ. ೮ರವರೆಗೆ ಅಹೋರಾತ್ರಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿ.ಎಸ್. ಯಡಿಯೂರಪ್ಪ ಅವರು ಈ ಹಿಂದೆ ರಾಜ್ಯದಲ್ಲಿ ೧೦ ಲಕ್ಷ ಮನೆಗಳನ್ನು ನೀಡುವುದಾಗಿ ಘೋಷಿಸಿದ್ದರು. ಆದರೆ ಇದುವರೆಗೂ ಅದು ಕಾರ್ಯಗತಗೊಂಡಿಲ್ಲ ಎಂದು ಆರೋಪಿಸಿದ ಗಣೇಶ್ ಸರ್ಕಾರ ರಾಜ್ಯಕ್ಕೂ ಸೇರಿದಂತೆ ಕೊಡಗಿಗೂ ೧೦ ಸಾವಿರ ಮನೆಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ಒತ್ತಾಯಿಸಿ ಜೆಡಿಎಸ್ ವತಿಯಿಂದ ತಾ. ೬ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ಎವಿಶಾಲೆಯ ಬಳಿಯಿಂದ ನಗರಸಭೆವರೆಗೆ ಪಾದಯಾತ್ರೆ ನಡೆಸಿ ನಗರಸಭೆ ಎದುರು ತಾ. ೮ ರವರೆಗೆ ಅಹೋರಾತ್ರಿ ಪ್ರತಿಭಟನೆ ಮಾಡಲಾಗುವುದು. ಮಡಿಕೇರಿ ನಗರಸಭೆಯಲ್ಲೂ ಕೂಡ ಸೂರಿಗಾಗಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದು, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ನಗರಸಭೆ ಎದುರಲ್ಲೇ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪ್ರಸ್ತುತ ಸಮಾಜದಲ್ಲಿ ಹಲಾಲ್, ಜಟ್ಕಾ, ಹಿಜಾಬ್, ಕೇಸರಿ ಬಗ್ಗೆಯೆ ಚರ್ಚೆಯಾಗುತ್ತಿದೆ ಹೊರತು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕೊಡಗಿನ ಜನರು ಜಾಗೃತರಾಗಬೇಕು ಎಂದು ಮನವಿ ಮಾಡಿದ ಗಣೇಶ್ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಇತರ ಸಂಘಟನೆಗಳ ಕಾರ್ಯಕರ್ತರುಗಳು ಜೆಡಿಎಸ್‌ನ ಜನಪರ ಹೋರಾಟಗಳಿಗೆ ಬಂದು ಕೈಜೋಡಿಸುವಂತೆ ಆಹ್ವಾನವಿತ್ತರು.

ವಿಧಾನ ಸಭೆ ಚುನಾವಣೆಗೆ ಸಂಬAಧಿಸಿದAತೆ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ತಲೆಬಾಗುವವರು ಪಕ್ಷದಲ್ಲಿ ಮುಂದುವರಿಯಬಹುದು. ತಲೆಬಾಗಲು ಆಗದವರು ಯಾವುದೇ ಗೊಂದಲ ಮೂಡಿಸದೆ ಪಕ್ಷದಿಂದ ತೆರಳಬಹುದು ಎಂದು ಗಣೇಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್‌ಖಾನ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ನಗರಸಭಾ ಸದಸ್ಯ ಮುಸ್ತಫ, ನಗರ ಜೆಡಿಎಸ್ ಅಧ್ಯಕ್ಷ ಮೋನಿಷ್, ತಾಲೂಕು ಪ್ರಧಾನ ಕಾರ್ಯದರ್ಶಿ ನಚಿಕೇತ್ ಉಪಸ್ಥಿತರಿದ್ದರು.