ಮಡಿಕೇರಿ, ಏ. ೫: ರಾಮ್‌ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಪೋರೆಯನ ಬಿಪಿನ್ ಬಸಪ್ಪ ಅವರನ್ನು ಪಾರ್ಟಿಯ ಕೇಂದ್ರ ಕಾರ್ಯದರ್ಶಿ ಆರ್.ಜೆ. ಸುರೇಶ್ ನೇಮಕ ಮಾಡಿದ್ದಾರೆ. ಇವರೊಂದಿಗೆ ಪಾರ್ಟಿಯ ಉಪಾಧ್ಯಕ್ಷರಾಗಿ ಪೋರೆಯನ ಡೆರಿನಾ ಬಸಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪೋರೆಯನ ಜಿತೇಂದ್ರ ಬಸಪ್ಪ ಅವರುಗಳನ್ನು ನೇಮಕ ಮಾಡಿರುವುದಾಗಿ ಅಧ್ಯಕ್ಷ ಬಿಪಿನ್ ಬಸಪ್ಪ ತಿಳಿಸಿದ್ದಾರೆ.