ಮಡಿಕೇರಿ, ಏ. ೫: ೨೦೨೧-೨೨ ನೇ ಸಾಲಿನ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ನಡೆಸಿದ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಕಾವೇರಿ ಕಲಾಪರಿಷತ್ ವಿದ್ಯಾರ್ಥಿನಿ ಶ್ರಾವ್ಯ.ಎಂ.ಎಸ್ ಜಿಲ್ಲೆಗೆ ೨ನೇ ಸ್ಥಾನ ಪಡೆದು ತೇರ್ಗಡೆಯಾಗಿದ್ದಾಳೆ. ವಿದುಷಿ ವಾಣಿ ಯಶವಂತ್ ಹಾಗೂ ಸಹನಾ ಎಸ್ ಇವರ ಶಿಷ್ಯೆಯಾಗಿರುವ ಈಕೆ ಕುಶಾಲನಗರದ ಉದ್ಯಮಿ ಎಂ.ವಿ.ಸತೀಶ್ ಹಾಗೂ ಶಿಲ್ಪ ಸತೀಶ್ ಅವರ ಪುತ್ರಿ.