ನಾಪೋಕ್ಲು, ಏ. ೫: ಪುರಾಣ ಪ್ರಸಿದ್ಧ ಕುಂಜಿಲ ಗ್ರಾಮದಲ್ಲಿರುವ ನಾಲ್ಕೇರಿ ಶ್ರೀ ಭಗವತಿ ದೇವಿಯ ಉತ್ಸವವು ತಾ. ೫ರಿಂದ ಆರಂಭವಾಗಿದ್ದು, ತಾ. ೮ರ ವರೆಗೆ ನಡೆಯಲಿದೆ. ತಾ. ೫ರಂದು ಸಂಜೆ ದೀಪಾರಾಧನೆ, ದೇವರ ಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಇಂದು ಅಂದರೆ, ತಾ. ೬ರಂದು ಬೆಳಿಗ್ಗೆ ಇರ್ಬೊಳಕು, ಪಟ್ಟಣಿ ಹಬ್ಬದ ಪ್ರಯುಕ್ತ ೧೦ ಗಂಟೆಗೆ ಅಲಂಕಾರ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೇವರ ನೃತ್ಯ ಬಲಿ ನಡೆಯಲಿದೆ. ತಾ. ೭ರಂದು ಬೆಳಿಗ್ಗೆ ಅಲಂಕಾರ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೇವಿಯ ಅವಭೃತ ಸ್ನಾನ, ನೃತ್ಯ ಬಲಿ, ವಸಂತ ಪೂಜೆ ನಡೆಯಲಿದ್ದು, ತಾ. ೮ರಂದು ದೇವಳದಲ್ಲಿ ಶುದ್ಧ ಕಲಶದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಳದ ತಕ್ಕಮುಖ್ಯಸ್ಥರು ಮತ್ತು ಆಡಳಿತ ಮಂಡಳಿ ತಿಳಿಸಿದ್ದಾರೆ.