*ಸಿದ್ದಾಪುರ, ಏ.೫ : ಅಭ್ಯತ್ ಮಂಗಲದ ಗ್ರೀನ್ ಫೀಲ್ಡ್ ಎಸ್ಟೇಟ್ ನ ಶ್ರೀ ವೈದ್ಯನಾಥ ದೈವರಾಜ ಕೋಟೆದಬಬ್ಬು ಸ್ವಾಮಿ ಸೇವಾ ಸಮಿತಿ ವತಿಯಿಂದ ಶ್ರೀ ವೈದ್ಯನಾಥೇಶ್ವರ ದೈವಸ್ಥಾನದ ವಾರ್ಷಿಕೋತ್ಸವ ಮತ್ತು ನೇಮೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ನೇಮೋತ್ಸವ ಮಂಗಳೂರಿನ ನವೀನ್ ಮತ್ತು ತಂಡದ ನೇತೃತ್ವದಲ್ಲಿ ನೆರವೇರಿತು.
ಶ್ರೀ ಚಾಮುಂಡೇಶ್ವರಿ ಕತ್ತಲಕಾನದ ಗುಳಿಗ ಮತ್ತು ಜಾಗದ ಗುಳಿಗ ಹಾಗೂ ಪಂಜುರ್ಲಿ ಗುಳಿಗ ನೇಮೋತ್ಸವ, ರಾಹುಗಳಿಗೆ ನೇಮೋತ್ಸವ ಜರುಗಿತು. ಎರಡು ದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ದಾಮು, ಕೇಶವ, ವಿಶ್ವನಾಥ ಲಿಂಗಪ್ಪ, ವಿನೋದ್ ಹಾಗೂ ಚೇತನ್ ಹಾಜರಿದ್ದರು.