ಗೋಣಿಕೊಪ್ಪಲು, ಏ. ೫: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಶ್ರೀಮಂಗಲ ಪೊಲೀಸರು ದಿಢೀರ್ ದಾಳಿ ನಡೆಸಿ ಮರಳು ಸಾಗಾಟ ಮಾಡುತ್ತಿದ್ದ ಕಾನೂರು ಗ್ರಾಮದ ಬಸಪ್ಪ ಅವರಿಗೆ ಸೇರಿದ ಸ್ವರಾಜ್ ಮಜ್ದಾ(ಕೆ.ಎ.೧೨ ಎ ೧೧೨೫)ವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶ್ರೀಮAಗಲ ಠಾಣೆಯ ಉಪ ನಿರೀಕ್ಷಕ ಆರ್. ರವಿಶಂಕರ್, ಎಎಸ್‌ಐ ಅರುಣ್‌ಕುಮಾರ್, ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಸಂದರ್ಭ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಡಿವೈಎಸ್ಪಿ ಜಯಕುಮಾರ್, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದ್ದು, ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿವಪ್ಪ, ಶರಣಪ್ಪ, ಈರಣ್ಣ ಹಾಗೂ ರಾಮಲಿಂಗ ಭಾಗವಹಿಸಿದ್ದರು. ಲಾರಿಯಲ್ಲಿದ್ದ ಚಾಲಕ ತಪ್ಪಿಸಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. - ಹೆಚ್.ಕೆ. ಜಗದೀಶ್