ಮಡಿಕೇರಿ, ಏ.೪: ತಾಲೂಕು ಸವಿತಾ ಸಮಾಜ ಹಾಗೂ ಕೊಡಗು ಜಿಲ್ಲಾ ಸವಿತಾ ಸಮಾಜದ ಸಹಕಾರ ದೊಂದಿಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ದೊರಕಿತು

ಉದ್ಘಾಟನೆ ನೆರವೇರಿಸಿದ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ; ಮಾತನಾಡಿ ಸಂಘಟಿತರಾಗಿ ಸಮಾಜವನ್ನು ಬೆಳೆಸಿ ಎಲ್ಲರೂ ಒಗ್ಗೂಡಿ ಕ್ರೀಡಾಕೂಟವನ್ನು ನಡೆಸುವಂತಾಗಬೇಕು. ನಮ್ಮ ಸಹಕಾರ ಸದಾ ನಿಮ್ಮ ಸಮಾಜದ ಮೇಲೆ ಇರುತ್ತದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಎಲ್ಲರೂ ಒಗ್ಗೂಡಬೇಕು ಎಂದು ಕರೆ ನೀಡಿದರು. ಕೊಡಗು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ದೊರೇಶ್ ಮಾತನಾಡಿ ಬಾಂಧವರು ಕ್ರೀಡಾ ಕೂಟವನ್ನು ಯಶಸ್ವಿಯಾಗಿ ನಡೆಸಿ ಕೊಡಬೇಕೆಂದು

(ಮೊದಲ ಪುಟದಿಂದ) ಮನವಿ ಮಾಡಿಕೊಂಡರು. ಸಮಾರಂಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಸುಂದರಮ್ಮ, ವಸಂತಿ ಆರ್.ಬಿ. ಹಾಗೂ ನಗರ ಅಧ್ಯಕ್ಷ ಬಿ.ಆರ್.ಗಣೇಶ್ ಹಾಗೂ ತಾಲೂಕು ಅಧ್ಯಕ್ಷ ಎಂ.ಟಿ. ಮಧು ಉಪಸ್ಥಿತರಿದ್ದರು.

ಅವಿನಾಶ್ ಬೊಟ್ಲಪ್ಪ ನಿರೂಪಿಸಿ. ಎಂ.ಟಿ ಮಧು ವಂದಿಸಿದರು.

ನಂತರ ಪುರುಷರ ಸೂಪರ್ ೯ ಕ್ರಿಕೆಟ್ ಪಂದ್ಯಾಟ ನಡೆಯಿತು. ಮಹಿಳೆಯರ ಥ್ರೋಬಾಲ್ ಪಂದ್ಯಾಟ ಚಾಲನೆ ನಡೆಯಿತು. ತಾ. ೫ರಂದು (ಇಂದು) ಕ್ರಿಕೆಟ್ ಪಂದ್ಯಾಟ ಹಾಗೂ ಥ್ರೋಬಾಲ್ ಪಂದ್ಯಾಟ ನಡೆಯಲಿದೆ. ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಹಾಗೂ ವಯಸ್ಕರಿಗೆ ವಿವಿಧ ರೀತಿಯ ಕ್ರೀಡಾಕೂಟಗಳು ನಡೆಯಲಿವೆ.