x
ಮಡಿಕೇರಿ, ಏ. ೪: ಶಾಂತಿ - ಸೌಹಾದÀðತೆಗೆ ಹೆಸರಾಗಿರುವ ಕೊಡಗಿನಲ್ಲೂ ಕೂಡ ಧರ್ಮಗಳ ಆಚಾರ - ವಿಚಾರ ಸಂಬAಧ ಸಾಮರಸ್ಯ ಕದಡುವ ಪ್ರಯತ್ನಗಳು ನಡೆಯುತ್ತಿದ್ದು, ಇದು ಖಂಡನೀಯ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿದರು. ಕೊಡಗಿನಲ್ಲಿ ಅನಾದಿ ಕಾಲದಿಂದಲೂ ಹಿಂದೂ, ಮುಸ್ಲಿಂ ಎಂಬ ಭಾವನೆ ಇಲ್ಲದೆ ಎಲ್ಲರೂ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಕೊಡಗಿನ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಮುಸ್ಲಿಮರ ಅಂಗಡಿಗಳಿದ್ದು, ವ್ಯಾಪಾರ, ವಹಿವಾಟು ಮೂಲಕ ಉತ್ತಮ ವಾತಾವರಣವಿದ್ದ ಕಾಲವಿತ್ತು. ಯಾವುದೇ ಅಹಿತಕರ ಘಟನೆಗಳಿಲ್ಲದೆ ಎಲ್ಲರೂ ಸಾಮರಸ್ಯದ ಜೀವನ ನಡೆಸುವ ವ್ಯವಸ್ಥೆಯಿತ್ತು. ಆದರೆ, ಇಂದು ಕೆಲವು ಹಿಂದೂ ಸಂಘಟನೆಗಳು ಹಾಗೂ ಮುಸ್ಲಿಂ ಸಂಘಟನೆಗಳ ಧೋರಣೆಯಿಂದ ಜನಜೀವನ ಸಂಘರ್ಷದೆಡೆಗೆ ಸಾಗುತ್ತಿರುವುದು ವಿಷಾದಕರ ಎಂದು ಅವರು ಹೇಳಿದರು.
ಬಿಜೆಪಿ ತನ್ನ ಅಧಿಕಾರ ಉಳಿಸಿ ಕೊಳ್ಳಲು ಹಿಂದೂ ಸಂಘಟನೆಗಳ ಮೂಲಕ ಸಮಾಜವನ್ನು ಒಡೆದು, ಅಧಿಕಾರದ ಚುಕ್ಕಾಣಿಯನ್ನು ಮತ್ತೆ ಹಿಡಿಯುವ ತಂತ್ರಗಾರಿಕೆ ಮಾಡುತ್ತಿದೆ ಎಂದು ದೂರಿದರು. ಬಿಜೆಪಿಯ ನಾಯಕರು ಹಾಗೂ ಪ್ರತಿನಿಧಿಗಳು ಕೂಡ ವ್ಯಾಪಾರ, ವ್ಯವಹಾರ ಕ್ಷೇತ್ರಗಳಲ್ಲಿ ಮುಸ್ಲಿಂರೊAದಿಗೆ ಪಾಲುದಾರಿಕೆಯನ್ನು ಹೊಂದಿರುವುದು ಬಹಿರಂಗ ಸತ್ಯವಾಗಿದೆ. ಆದರೆ, ಆಡಳಿತ ಕ್ಷೇತ್ರಕ್ಕೆ ಬರುವಾಗ ತಮ್ಮ ಅಧಿಕಾರ ಉಳಿಸಿಕೊಳ್ಳಲು ಇಲ್ಲಸಲ್ಲದ ಅರಾಜಕತೆಯನ್ನು ಉಂಟುಮಾಡಿ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ ಎಂದು ಧರ್ಮಜ ಉತ್ತಪ್ಪ ಹೇಳಿದರು.
ಇಂದು ಮುಸ್ಲಿಂ ಮತೀಯರು ಕೂಡ ಕೆಲವು ಮೂಲಭೂತವಾದಿ ಸಂಘಟನೆಗಳೊAದಿಗೆ ಕೈಜೋಡಿಸಿಕೊಂಡು ಎಸ್‌ಡಿಪಿಐ, ಪಿಎಫ್‌ಐ ಮಾತು ಕೇಳಿಕೊಂಡು ಜಾತ್ಯತೀತತೆಯನ್ನು ಬಿಟ್ಟು ಮೂಲಭೂತವಾದಿತನಕ್ಕೆ ಮಾರು ಹೋಗುತ್ತಿರುವುದು ಕಂಡು ಬರುತ್ತಿದೆ. ಎಸ್‌ಡಿಪಿಐ ತನ್ನ ರಾಜಕೀಯ ಬೇಳೆೆ ಬೇಯಿಸಿಕೊಳ್ಳಲು ಕೊಡಗಿನ ಮುಸ್ಲಿಮರ ಮನದಲ್ಲಿ ವಿಷಬೀಜ ಬಿತ್ತಿ ಮೂಲಭೂತವಾದಿತನಕ್ಕೆ ಪ್ರೋತ್ಸಾಹÀ ನೀಡುತ್ತಿದೆ. ಇದು ಅತ್ಯಂತ ವಿಷಾದಕರ ಬೆಳವಣಿಗೆಯಾಗಿದೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲಾ ಜಾತಿ, ಧರ್ಮದವರು ದೇಶದ ಈ ರೀತಿಯ
(ಮೊದಲ ಪುಟದಿಂದ) ಸಂಘಟನೆಗಳನ್ನು ದೂರ ಇಡಬೇಕು. ಭಾರತದ ಸಂವಿಧಾನವು ಜಾತ್ಯತೀತ ನೆಲೆಗಟ್ಟಿನಲ್ಲಿ ರಚನೆಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಿದೆ. ದೇಶದ ಅಭಿವೃದ್ಧಿಯ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕೇ ಹೊರತು, ಧರ್ಮದ ಆಚಾರ - ವಿಚಾರಗಳನ್ನು ಮುಂದಿಟ್ಟುಕೊAಡು ಅರಾಜಕತೆ ಸೃಷ್ಟಿಸಿದರೆ ದೇಶಕ್ಕು, ರಾಜ್ಯ, ಜಿಲ್ಲೆಗೂ ನಷ್ಟವಾಗಲಿದೆ. ಇದು ಜನ ಸಾಮಾನ್ಯರ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ ಎಂದು ಅಭಿಪ್ರಾಯಪಟ್ಟರು.
ಅವರವರ ಧರ್ಮದ ಆಚಾರ, ವಿಚಾರಗಳಿಗೆ ಯಾರು ಅಡ್ಡಿಯಾಗಬಾರದು. ಅವರವರ ಸ್ವಾಭಿಮಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಜೀವನ ಸಾಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಪ್ರಚೋದನೆಗೆ ಯಾರೂ ಒಳಗಾಗಬಾರದು. ಮುಸ್ಲಿಂ ಬಾಂಧವರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನಾವೆಲ್ಲರೂ ಒಂದೇ ಮನುಷ್ಯ ಜಾತಿಯ, ಧರ್ಮದ ಆಧಾರದಲ್ಲಿ ಒಬ್ಬರಿಗೊಬ್ಬರು ಸಹಬಾಳ್ವೆಯಿಂದ ಜೀವನ ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ಮೂಲಕ ಅಭಿವೃದ್ಧಿ ಮತ್ತು ಏಕತೆಯಲ್ಲಿ ಭಾರತವನ್ನು ಮಾದರಿ ದೇಶವನ್ನಾಗಿ ಮಾಡಬೇಕಾಗಿದೆ. ಆರ್‌ಎಸ್‌ಎಸ್ ರೀತಿಯಲ್ಲಿ ಎಸ್‌ಡಿಪಿಐ ಕೂಡ ಧರ್ಮವನ್ನು ಒಡೆದು ಅರಾಜಕತೆ ಸೃಷ್ಟಿಸಲು ಮುನ್ನುಗ್ಗುತ್ತಿದೆ. ಆದ್ದರಿಂದ ಜಾತ್ಯತೀತತೆಯಲ್ಲಿ ನಂಬಿಕೆಯಿಟ್ಟಿರುವ ಕಾಂಗ್ರೆಸ್ ಪಕ್ಷ ಎಲ್ಲರಿಗೂ ಭದ್ರತೆ ನೀಡಲು ಬದ್ಧವಾಗಿದೆ. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಇನ್ನು ಮುಂದೆಯೂ ಏಕತೆಗಾಗಿ ಶ್ರಮಿಸಲಿದ್ದು, ಧರ್ಮಾಧಾರಿತ ರಾಜಕೀಯವನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಧರ್ಮಜ ಉತ್ತಪ್ಪ ಹೇಳಿದರು. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಶೀತಲ್ ಕುಮಾರ್ ಮಾತನಾಡಿ ಕೊಡಗಿನಲ್ಲಿ ಪಕ್ಷ ಸಂಘಟನೆ ಕಾರ್ಯ ಉತ್ತಮವಾಗಿ ನಡೆಯುತ್ತಿದ್ದು, ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕ ಕೂಡ ಜನಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಮುಖ ಸೂರಜ್ ಹೊಸೂರು, ಕಾಂಗ್ರೆಸ್‌ನ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ರಂಜಿ ಪೂಣಚ್ಚ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ನವೀನ್, ಜಿ.ಪಂ,. ಮಾಜಿ ಸದಸ್ಯ ಬಾಲಕೃಷ್ಣ ಉಪಸ್ಥಿತರಿದ್ದರು.