ಮಡಿಕೇರಿ, ಏ.೪ : ೨೦೨೦-೨೧ನೇ ಸಾಲಿನ, ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾರತ್ನ, ಕ್ರೀಡಾಪೋಷಕ ಪ್ರಶಸ್ತಿಯನ್ನು ರಾಜ್ಯ ಸರಕಾರ ಪ್ರಕಟಿಸಿದೆ. ಕೀಡಾ ಸಚಿವ ಡಾ.ನಾರಾಯಣ ಗೌಡ ಅವರು ಪಟ್ಟಿಯನ್ನು ಘೋಷಿಸಿದ್ದಾರೆ. ಏಕಲವ್ಯ ಪ್ರಶಸ್ತಿಗೆ ಕೊಡಗಿನವರಾದ ಅಂತರರಾಷ್ಟಿçÃಯ ಹಾಕಿ ಆಟಗಾರ ಮೂರ್ನಾಡು ಕಿಗ್ಗಾಲುವಿನವರಾದ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ ಆಯ್ಕೆಗೊಂಡಿದ್ದಾರೆ. ಏಕಲವ್ಯ ಪ್ರಶಸ್ತಿಗೆ ೧೫ ಕ್ರೀಡಾ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಪ್ರಧಾನ್ ಸೋಮಣ್ಣ ಒಬ್ಬರಾಗಿದ್ದಾರೆ. ೧೯೯೨ ರಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳಿಗೆ ಕರ್ನಾಟಕ ಸರಕಾರದ ಕ್ರೀಡಾ ಇಲಾಖೆ ವತಿಯಿಂದ ಏಕಲವ್ಯ ಸೇರಿದಂತೆ ಇತರ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಏಕಲವ್ಯ ಪ್ರಶಸ್ತಿ ಏಕಲವ್ಯನ ಕಂಚಿನ ಪ್ರತಿಮೆ, ಸ್ಕೊçÃಲ್, ಸಮವಸ್ತç, ರೂ. ೨ ಲಕ್ಷ ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಪ್ರಧಾನ್ ಬಿಜೆಪಿ ಪ್ರಮುಖರಾದ ಪುದಿಯೊಕ್ಕಡ ಬೆಲ್ಲು ಸೋಮಯ್ಯ ಹಾಗೂ ಮೀನಾ ಸೋಮಯ್ಯ (ತಾಮನೆ-ಮಾತಂಡ) ದಂಪತಿಯ ಪುತ್ರ.