ಮಡಿಕೇರಿ, ಏ. ೪: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕರಡಿಗೋಡು ಗ್ರಾಮದ ಇವಾಲ್‌ಬ್ಯಾಕ್ ರೆಸಾರ್ಟ್ನಲ್ಲಿ ತಾ. ೧ ರಂದು ನಡೆದಿದ್ದ ಕಳವು ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿದರು. ತಾ. ೧ ರಂದು ಬೆಳಿಗ್ಗೆ ೧೧ ಗಂಟೆಗೆ ಮುಂಬೈನಿAದ ಬಂದ ಬಾಲಕೃಷ್ಣ ಭಂಡಾರಿ ಎಂಬವರ ಕುಟುಂಬ ಇವಾಲ್ ಬ್ಯಾಕ್ ರೆಸಾರ್ಟ್ನಲ್ಲಿ ರೂಂ. ನಂ. ೪೦೯, ೫೦೭ ರ ಕೊಠಡಿಗಳನ್ನು ಪಡೆದು ಒಡವೆ ಮತ್ತು ಹಣವನ್ನು ರೂಂ. ನಂ. ೪೦೯ ರ ಸೇಫ್‌ಲಾಕರ್‌ನಲ್ಲಿ ಇಟ್ಟು ಊಟಕ್ಕೆ ತೆರಳಿ ಊಟ ಮುಗಿಸಿ ಹಿಂತಿರುಗಿ ಬಂದ ವೇಳೆ ಸೇಫ್ ಲಾಕರ್ ಕಳುವಾಗಿರುವುದು ಕಂಡು ಬಂದಿತ್ತು.ಈ ಹಿನ್ನೆಲೆಯಲ್ಲಿ ಬಾಲಕೃಷ್ಣ ಭಂಡಾರಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಆರೋಪಿಗಳ ಪತ್ತೆಗಾಗಿ ಮಡಿಕೇರಿ ನಗರ ವೃತ್ತ ನಿರೀಕ್ಷಕರು, ಸಿದ್ದಾಪುರ ಠಾಣಾಧಿಕಾರಿ, ಸಿಬ್ಬಂದಿ ಹಾಗೂ ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಾಗ, ಈ ಹಿಂದೆ ಇವಾಲ್ ಬ್ಯಾಕ್ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ, ಪ್ರಸ್ತುತ ಮಡಿಕೇರಿ ರೆಸಾರ್ಟ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುಹ್ಯ ಹೈಸ್ಕೂಲ್ ಪೈಸಾರಿಯ ಕೆ.ಎಂ. ಪ್ರದೀಪ್ (೩೧) ಹಾಗೂ ಆತನ ಸ್ನೇಹಿತ ಚಾಲಕ ಕೆ.ಎಸ್. ಶರತ್ (೩೦) ಇವರುಗಳು ಕೃತ್ಯವೆಸಗಿದ್ದುದಾಗಿ ಪತ್ತೆಯಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಬಂಧಿತ ಆರೋಪಿಗಳಿಂದ ೫೦ ಸಾವಿರ ಮೌಲ್ಯದ ೧ ಜಖಂಗೊAಡ ಐಪ್ಯಾಡ್, ೫ ಲಕ್ಷ ಮೌಲ್ಯದ ಒಂದು ಡೈಮಂಡ್

(ಮೊದಲ ಪುಟದಿಂದ) ಬ್ರೇಸ್‌ಲೆಟ್, ೮೦ ಸಾವಿರ ಮೌಲ್ಯದ ಒಂದು ಡೈಮಂಡ್ ರಿಂಗ್, ಪ್ರದೀಪ್ ಬಳಿ ಇದ್ದ ೪೫ ಸಾವಿರ ರೂ., ಶರತ್ ಬಳಿಯಿದ್ದ ೩೫ ಸಾವಿರ ರೂ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ೬೦ ಸಾವಿರ ಮೌಲ್ಯದ ಬೈಕ್ (ಕೆ.ಎ. ೧೨ ಕೆ. ೯೦೧೪) ೨,೩೦,೦೦೦ ಮೌಲ್ಯದ ವ್ಯಾಗನರ್ ಕಾರು (ಕೆ.ಎ. ೦೫ - ಎಂ.ಬಿ. ೬೯೨೦) ಸೇರಿದಂತೆ ಒಟ್ಟು ೧೦ ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರಲ್ಲಿ ಪ್ರಮುಖ ಆರೋಪಿಯಾದ ಕೆ.ಎಂ. ಪ್ರದೀಪ್ ಈ ಹಿಂದೆ ಇವಾಲ್‌ಬ್ಯಾಕ್ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಅಕ್ರಮ ಕೃತ್ಯವೊಂದನ್ನು ನಡೆಸಿ ಆತನ ಮೇಲೆ ತನಿಖೆಯಾಗಿತ್ತು. ಅದಾದ ಬಳಿಕ ಅಲ್ಲಿ ಕೆಲಸ ಬಿಟ್ಟು ಮಡಿಕೇರಿಯ ರೆಸಾರ್ಟ್ ಒಂದರಲ್ಲಿ ವಿಭಾಗೀಯ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದ. ಇವಾಲ್‌ಬ್ಯಾಕ್ ರೆಸಾರ್ಟ್ನಲ್ಲಿ ವಿದ್ಯುತ್ ತಂತಿಬೇಲಿಯನ್ನು ಕಟ್ಟಿಂಗ್ ಪ್ಲೇಯರ್ ಮೂಲಕ ತುಂಡರಿಸಿ ಒಳನುಗ್ಗಿ ಪ್ರದೀಪ್ ಹಾಗೂ ಶರತ್ ಈ ಕೃತ್ಯವೆಸಗಿದ್ದರು. ಶ್ವಾನದಳ, ಬೆರಳಚ್ಚು ತಜ್ಞರ ಪರಿಶೀಲನೆಯೊಂದಿಗೆ ತನಿಖಾ ತಂಡ ರೆಸಾರ್ಟ್ನಲ್ಲಿ ಮಾಹಿತಿ ಕಲೆ ಹಾಕಿದಾಗ ಪ್ರದೀಪ್ ಅಕ್ರಮ ಕೃತ್ಯವೆಸಗಿ ಕೆಲಸ ಬಿಟ್ಟಿದ್ದ ಎಂಬದು ತಿಳಿದು ಬಂತು. ಆತನ ಮೇಲೆ ಸಂಶಯದಿAದ ಬೆನ್ನತ್ತಿದ್ದಾಗ ಅಲ್ಲಿ ನಡೆದಿದ್ದ ಕಳವು ಪ್ರಕರಣ ಬಯಲಾಯಿತು ಎಂದು ಎಸ್‌ಪಿ ಅಯ್ಯಪ್ಪ ವಿವರಿಸಿದರು.

ತನ್ನ ಮಾರ್ಗದರ್ಶದೊಂದಿಗೆ ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕ ವೆಂಕಟೇಶ್ ಪಿ.ವಿ. ಡಿಸಿಆರ್‌ಬಿ ಪೊಲೀಸ್ ನಿರೀಕ್ಷಕ ಐ.ಪಿ. ಮೇದಪ್ಪ, ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಮೋಹನ್‌ರಾಜ್, ಪ್ರೋಬೆಸನರಿ ಪಿಎಸ್‌ಐ ಪ್ರಮೋದ್, ಎಎಸ್‌ಐ ತಮ್ಮಯ್ಯ, ಮಡಿಕೇರಿ ನಗರ ವೃತ್ತ ಕಚೇರಿಯ ಸಿಬ್ಬಂದಿಗಳಾದ ಚರ್ಮಣ ಸಿ.ವಿ., ಕಿರಣ್ ಎ.ವಿ., ಸಿದ್ದಾಪುರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಬೆಳ್ಳಿಯಪ್ಪ ಪಿ., ರತನ್ ಟಿ.ಜೆ., ಲಕ್ಷಿö್ಮÃಕಾಂತ್, ವಸಂತ್‌ಕುಮಾರ್ ಹೆಚ್.ಕೆ. ಭರತ್, ಹರೀಶ್, ಶಿವಕುಮಾರ್, ಮಲ್ಲಪ್ಪ ಮುಶಿಗೇರಿ, ಮಡಿಕೇರಿ ನಗರ ಪೊಲೀಸ್ ಠಾಣೆಯ ದಿನೇಶ್ ಕೆ.ಕೆ., ನಾಗರಾಜ್ ಕಡಗನ್ನವರ್, ರುದ್ರಪ್ಪ ಜಿ., ಡಿಸಿಆರ್‌ಬಿ ಸಿಬ್ಬಂದಿಗಳಾದ ಯೋಗೇಶ್‌ಕುಮಾರ್, ನಿರಂಜನ್, ಸುರೇಶ್, ವಸಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕಾರ್ಯಾಚರಣೆ ತಂಡಕ್ಕೆ ನಗದು ಬಹುಮಾನ ನೀಡುವುದಾಗಿ ಎಸ್‌ಪಿ ಘೋಷಿಸಿದರು.