ಶನಿವಾರಸAತೆ, ಏ. ೪: ಕರ್ನಾಟಕ ರಾಜ್ಯದಲ್ಲಿ ಗೋ ಮಾಂಸ ಮಾರಾಟ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ ಹಾಸನ ಜಿಲ್ಲೆಯಿಂದ ತಂದು ಮಾರಾಟಕ್ಕೆ ಇಟ್ಟುಕೊಂಡಿದ್ದ ಅಸ್ಸಾಂ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದೊರೆತ ಖಚಿತ ಮಾಹಿತಿ ಅನ್ವಯ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಪಿ.ಎಸ್.ಐ. ಗೋವಿಂದ್ ರಾಜ್, ಎಎಸ್ಐಗಳಾದ ಶಿವಲಿಂಗ, ಶಶಿಧರ್, ಅಪರಾಧ ಪತ್ತೆದಳದ ಲೋಕೇಶ್, ಮುರಳಿ, ಸತೀಶ್, ಸಿಬ್ಬಂದಿ ಕುಮಾರ್, ಶಶಿಧರ್ ಸ್ಥಳಕ್ಕೆ ಧಾವಿಸಿದ್ದು, ಬೈಕ್ನಲ್ಲಿ ಚೀಲವಿರಿಸಿ ನಿಂತಿದ್ದ ಇಬ್ಬರು ವ್ಯಕ್ತಿಗಳ ಬಗ್ಗೆ ಸಂಶಯ ಮೂಡಿ ಸುತ್ತುವರೆದು ವಿಚಾರಿಸಿದ್ದಾರೆ. ಚೀಲವನ್ನು ತೆಗೆಸಿ ನೋಡಿದಾಗ ಮಾಂಸ ತುಂಬಿದ್ದ ಕಪ್ಪು ಪ್ಲಾಸ್ಟಿಕ್ ಕವರುಗಳಿದ್ದವು.
ವಿಚಾರಣೆಗೆ ಒಳಪಡಿಸಲಾಗಿ, ಆರೋಪಿಗಳು ಅಸ್ಸಾಂ ರಾಜ್ಯದ ಮಹಮ್ಮದ್ಆಲಿ (೩೮) ಹಾಗೂ ಶಹಲಮ್ ಶೇಕ್ (೨೧) ಇಬ್ಬರೂ ಮಾಲಂಬಿ ಗ್ರಾಮದ ಅರುಣ್ ಎಸ್ಟೇಟ್ನಲ್ಲಿ ಕೂಲಿ ಕಾರ್ಮಿಕರು. ಅವರಲ್ಲಿದ್ದ ಬಿಳಿ ಚೀಲದೊಳಗೆ ೧೬ ಕಪ್ಪು ಬಣ್ಣದ ಕವರಿನಲ್ಲಿ ಹಸಿ ಮಾಂಸವಿರುವುದು ಕಂಡುಬAದಿತ್ತು. ಹಾಸನದಿಂದ ತಂದಿದ್ದು, ಮಾರಾಟಕ್ಕೆ ಇಟ್ಟುಕೊಂಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.
ತೂಕ ಮಾಡಿದಾಗ ರೂ. ೬ ಸಾವಿರ ಮೌಲ್ಯದ ೨೮.೩೭೦ ಕೆ.ಜಿ. ಮಾಂಸ ಇರುವುದಾಗಿ ತಿಳಿದುಬಂದಿದೆ. ಸರಕಾರದ ಪರವಾನಗಿ ಇಲ್ಲದೆ ಮಾರಾಟಕ್ಕೆ ಯತ್ನಿಸಿದ ಗೋಮಾಂಸ, ಬೈಕ್ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಶು ವೈದ್ಯಾಧಿಕಾರಿ ಅವರಿಂದ ದೃಢೀಕರಣ ಪತ್ರ ಪಡೆದು ಮಾದರಿಗಾಗಿ ಸಂಗ್ರಹಿಸಿದ ಮಾಂಸವನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ೧೫ ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.