ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ ಈಗ ಇವರು ಯಾರೆಂದು ನಮಗೆ ಬಹುಶ ತಿಳಿದೇ ಇಲ್ಲ ಎಂದೆನಿಸುತ್ತದೆ. ಕನ್ನಡ ನಾಡಿಗೆ ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ ಹಲವಾರು ಮಹನೀಯರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿ ಮರೆಯಾಗಿರುವುದು ಸಹಜ. ಆದರೆ ಪ್ರಸ್ತುತ ಬೆಂಜಮಿನ್ ಲೆವಿಸ್ ರೈಸ್ ಯಾರು ಎಂಬುದೇ ಬಹಳಷ್ಟು ಕನ್ನಡಿಗರಿಗೆ ತಿಳಿದಿರುವುದಿಲ್ಲ. ಏಕೆಂದರೆ ಇವರ ಹೆಸರಿನಲ್ಲಿ ನಮ್ಮ ನಾಡಿನಲ್ಲಿ ಯಾವುದೇ ರಸ್ತೆ, ಪುತ್ತಳಿ, ವೃತ್ತ, ಬಡಾವಣೆ ಯಾವುದು ಇರುವುದಿಲ್ಲ ಹಾಗೂ ಇವರ ಬಗ್ಗೆ ಕನಿಷ್ಟ ನೆನಪೂ ಸಹ ಮೂಡಿಸುವ ಮಾಹಿತಿಗಳೂ ಕೂಡ ಮರೆಯಾಗುತ್ತಿವೆ. ಯಾವುದೇ ಪ್ರದೇಶದ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸಗಳ ಅಧ್ಯಯನಕ್ಕೆ ಶಾಸನಗಳು ಅಮೂಲ್ಯ ಆಕರಗಳು, ಇವು ಒಂದು ಜನಾಂಗದ ಆಸ್ತಿ ಕನ್ನಡ ನಾಡಿನ ಶಾಸನ ಸಂಪತ್ತು ಹೇರಳವಾಗಿದ್ದರೂ ಅವುಗಳು ಮರೆಯಾಗಿದ್ದಾಗ, ಅವುಗಳನ್ನು ಹುಡುಕಿ ಸಂಶೋಧಿಸಿ ಕನ್ನಡ ನಾಡಿನ ಹಿರಿಮೆ ಸಾರಿದ ಈ ಸಾಹಸಿಗೆ ನಮ್ಮ ನಾಡಿನ ಕನ್ನಡಿಗರ ಹೃದಯದಲ್ಲಿ ಸ್ಥಾನ ಸಿಗಬೇಕಾದದ್ದು ನ್ಯಾಯ. ಅಲ್ಲದೆ ಕನ್ನಡ ಇತಿಹಾಸಕ್ಕೆ ಕೊಡುಗೆ ನೀಡಿ, ಕನ್ನಡ ನಾಡಿನಲ್ಲಿ ಹಲವಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಮರೆಯಾಗಿಹೋದ ಒಬ್ಬ ಧೀಮಂತ ವ್ಯಕ್ತಿ ಬಗ್ಗೆ ತಿಳಿಯಬೇಕಾಗಿದೆ ಹಾಗೂ ಮುಂದಿನ ಪೀಳಿಗೆಗೆ ಇಂತಹ ಮಹನೀಯರ ಬಗ್ಗೆ ತಿಳಿಸಿ ಕೊಡಬೇಕಾಗಿದಲ್ಲದೆ ಬೆಂಜಮಿನ್ ಲೆವಿಸ್ ರೈಸ್ ರವರ ಬಗ್ಗೆ ತಿಳಿಯುವುದು ಕೂಡ ಅಷ್ಟೇ ಮುಖ್ಯ. ಬೆಂಜಮಿನ್ ಲೆವಿಸ್ ರೈಸ್ (೧೮೩೭-೧೯೨೭) ಈತ ಹುಟ್ಟಿದ್ದ ಜುಲೈ ೧೭, ೧೮೩೭ರಲ್ಲಿ ಇಂಗ್ಲೆAಡಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಈತ ಕ್ರಿ, ಶ ೧೮೬೦ರಲ್ಲಿ ಭಾರತಕ್ಕೆ ಪದಾರ್ಪಣೆ ಮಾಡಿದರು. ಅವರಿಗೆ ಮೊದಲು ಲಭಿಸಿದ ನೌಕರಿ ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಹುದ್ದೆ. ತದನಂತರ ಕ್ರಿ,ಶ ೧೮೬೫ ರಿಂದ ೧೮೬೮ ವರೆಗೆ ಮೈಸೂರು ಹಾಗೂ ಕೊಡಗು ಪ್ರಾಂತಗಳಲ್ಲಿ ಶಾಲಾ ತನಿಖಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನಂತರದಲ್ಲಿ ಕ್ರಿ,ಶ ೧೮೬೮ರಲ್ಲಿ ವಿದ್ಯಾ ಇಲಾಖೆಯ ಮುಖ್ಯಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇವರು ಮೈಸೂರು ಪ್ರಾಂತದಲ್ಲಿ ಜನಗಣತಿ ಆರಂಭಿಸಿ ಮಾಹಿತಿ ಅಂಕಿ ಅಂಶ ಕಲೆ ಹಾಕಿ ಯೋಜನೆ ತಯಾರಿಕೆಗೆ ಅನುವು ಮಾಡಿಕೊಟ್ಟಿದ್ದರು. ಈ ಜನಗಣತಿ ಭಾರತದ ಮೊದಲ ಜನಗಣತಿ ಎಂದು ಇಂದಿಗೂ ಹೇಳಲಾಗುತ್ತದೆ. ಭಾರತದ ಮೊದಲ ಜನಗಣತಿ ಪ್ರಾರಂಭವಾಗಿದ್ದು ಕನ್ನಡ ನಾಡಿನಲ್ಲಿ ಎಂದರೆ ಅದು ಪ್ರತಿ ಕನ್ನಡಿಗನು ಕೂಡ ಹೆಮ್ಮೆಪಡಬೇಕಾದ ವಿಷಯ. ಇದೇ ಆಧಾರದ ಮೇಲೆ ಇಂದಿಗೂ ಸಹ ಭಾರತ ಜನಗಣತಿಯನ್ನು ಪ್ರತಿ ಹತ್ತು ವರ್ಷಕೊಮ್ಮೆ ದೇಶದಾದ್ಯಂತ ನಡೆಸಲಾಗುತ್ತಿದೆ. ಹೀಗೆ ಕ್ರಿ,ಶ ೧೮೮೨ ರಲ್ಲಿ ‘ಹಂಟರ್ ವಿದ್ಯಾ ಸಮಿತಿಯ' ಕಾರ್ಯದರ್ಶಿಯಾಗಿ ಇಲಾಖೆಯ ಜವಾಬ್ದಾರಿಯನ್ನು ನಿರ್ವಹಿಸಿ ಅಂದಿನ ಸರ್ಕಾರದ ಮೆಚ್ಚುಗೆಗೂ ಪಾತ್ರರಾಗಿದ್ದರು. ಇದಲ್ಲದೆ ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ ಈಗ ಇವರು ಯಾರೆಂದು ನಮಗೆ ಬಹುಶ ತಿಳಿದೇ ಇಲ್ಲ ಎಂದೆನಿಸುತ್ತದೆ. ಕನ್ನಡ ನಾಡಿಗೆ ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ ಹಲವಾರು ಮಹನೀಯರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿ ಮರೆಯಾಗಿರುವುದು ಸಹಜ. ಆದರೆ ಪ್ರಸ್ತುತ ಬೆಂಜಮಿನ್ ಲೆವಿಸ್ ರೈಸ್ ಯಾರು ಎಂಬುದೇ ಬಹಳಷ್ಟು ಕನ್ನಡಿಗರಿಗೆ ತಿಳಿದಿರುವುದಿಲ್ಲ. ಏಕೆಂದರೆ ಇವರ ಹೆಸರಿನಲ್ಲಿ ನಮ್ಮ ನಾಡಿನಲ್ಲಿ ಯಾವುದೇ ರಸ್ತೆ, ಪುತ್ತಳಿ, ವೃತ್ತ, ಬಡಾವಣೆ ಯಾವುದು ಇರುವುದಿಲ್ಲ ಹಾಗೂ ಇವರ ಬಗ್ಗೆ ಕನಿಷ್ಟ ನೆನಪೂ ಸಹ ಮೂಡಿಸುವ ಮಾಹಿತಿಗಳೂ ಕೂಡ ಮರೆಯಾಗುತ್ತಿವೆ. ಯಾವುದೇ ಪ್ರದೇಶದ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸಗಳ ಅಧ್ಯಯನಕ್ಕೆ ಶಾಸನಗಳು ಅಮೂಲ್ಯ ಆಕರಗಳು, ಇವು ಒಂದು ಜನಾಂಗದ ಆಸ್ತಿ ಕನ್ನಡ ನಾಡಿನ ಶಾಸನ ಸಂಪತ್ತು ಹೇರಳವಾಗಿದ್ದರೂ ಅವುಗಳು ಮರೆಯಾಗಿದ್ದಾಗ, ಅವುಗಳನ್ನು ಹುಡುಕಿ ಸಂಶೋಧಿಸಿ ಕನ್ನಡ ನಾಡಿನ ಹಿರಿಮೆ ಸಾರಿದ ಈ ಸಾಹಸಿಗೆ ನಮ್ಮ ನಾಡಿನ ಕನ್ನಡಿಗರ ಹೃದಯದಲ್ಲಿ ಸ್ಥಾನ ಸಿಗಬೇಕಾದದ್ದು ನ್ಯಾಯ. ಅಲ್ಲದೆ ಕನ್ನಡ ಇತಿಹಾಸಕ್ಕೆ ಕೊಡುಗೆ ನೀಡಿ, ಕನ್ನಡ ನಾಡಿನಲ್ಲಿ ಹಲವಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಮರೆಯಾಗಿಹೋದ ಒಬ್ಬ ಧೀಮಂತ ವ್ಯಕ್ತಿ ಬಗ್ಗೆ ತಿಳಿಯಬೇಕಾಗಿದೆ ಹಾಗೂ ಮುಂದಿನ ಪೀಳಿಗೆಗೆ ಇಂತಹ ಮಹನೀಯರ ಬಗ್ಗೆ ತಿಳಿಸಿ ಕೊಡಬೇಕಾಗಿದಲ್ಲದೆ ಬೆಂಜಮಿನ್ ಲೆವಿಸ್ ರೈಸ್ ರವರ ಬಗ್ಗೆ ತಿಳಿಯುವುದು ಕೂಡ ಅಷ್ಟೇ ಮುಖ್ಯ. ಬೆಂಜಮಿನ್ ಲೆವಿಸ್ ರೈಸ್ (೧೮೩೭-೧೯೨೭) ಈತ ಹುಟ್ಟಿದ್ದ ಜುಲೈ ೧೭, ೧೮೩೭ರಲ್ಲಿ ಇಂಗ್ಲೆAಡಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಈತ ಕ್ರಿ, ಶ ೧೮೬೦ರಲ್ಲಿ ಭಾರತಕ್ಕೆ ಪದಾರ್ಪಣೆ ಮಾಡಿದರು. ಅವರಿಗೆ ಮೊದಲು ಲಭಿಸಿದ ನೌಕರಿ ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಹುದ್ದೆ. ತದನಂತರ ಕ್ರಿ,ಶ ೧೮೬೫ ರಿಂದ ೧೮೬೮ ವರೆಗೆ ಮೈಸೂರು ಹಾಗೂ ಕೊಡಗು ಪ್ರಾಂತಗಳಲ್ಲಿ ಶಾಲಾ ತನಿಖಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನಂತರದಲ್ಲಿ ಕ್ರಿ,ಶ ೧೮೬೮ರಲ್ಲಿ ವಿದ್ಯಾ ಇಲಾಖೆಯ ಮುಖ್ಯಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇವರು ಮೈಸೂರು ಪ್ರಾಂತದಲ್ಲಿ ಜನಗಣತಿ ಆರಂಭಿಸಿ ಮಾಹಿತಿ ಅಂಕಿ ಅಂಶ ಕಲೆ ಹಾಕಿ ಯೋಜನೆ ತಯಾರಿಕೆಗೆ ಅನುವು ಮಾಡಿಕೊಟ್ಟಿದ್ದರು. ಈ ಜನಗಣತಿ ಭಾರತದ ಮೊದಲ ಜನಗಣತಿ ಎಂದು ಇಂದಿಗೂ ಹೇಳಲಾಗುತ್ತದೆ. ಭಾರತದ ಮೊದಲ ಜನಗಣತಿ ಪ್ರಾರಂಭವಾಗಿದ್ದು ಕನ್ನಡ ನಾಡಿನಲ್ಲಿ ಎಂದರೆ ಅದು ಪ್ರತಿ ಕನ್ನಡಿಗನು ಕೂಡ ಹೆಮ್ಮೆಪಡಬೇಕಾದ ವಿಷಯ. ಇದೇ ಆಧಾರದ ಮೇಲೆ ಇಂದಿಗೂ ಸಹ ಭಾರತ ಜನಗಣತಿಯನ್ನು ಪ್ರತಿ ಹತ್ತು ವರ್ಷಕೊಮ್ಮೆ ದೇಶದಾದ್ಯಂತ ನಡೆಸಲಾಗುತ್ತಿದೆ. ಹೀಗೆ ಕ್ರಿ,ಶ ೧೮೮೨ ರಲ್ಲಿ ‘ಹಂಟರ್ ವಿದ್ಯಾ ಸಮಿತಿಯ' ಕಾರ್ಯದರ್ಶಿಯಾಗಿ ಇಲಾಖೆಯ ಜವಾಬ್ದಾರಿಯನ್ನು ನಿರ್ವಹಿಸಿ ಅಂದಿನ ಸರ್ಕಾರದ ಮೆಚ್ಚುಗೆಗೂ ಪಾತ್ರರಾಗಿದ್ದರು. ಇದಲ್ಲದೆ ಹದಿನಾರು ವರ್ಷದಲ್ಲಿ ಎಪಿಗ್ರಾಫಿಯಾ ಕರ್ನಾಟಕದ ಉಳಿದ ಹತ್ತು ಬೃಹತ್ ಸಂಪುಟಗಳನ್ನು ಪ್ರಕಟ ಮಾಡಿ ಜಿಲ್ಲಾವಾರು ಶಾಸನಗಳ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಬಿ.ಎಲ್.ರೈಸ್‌ರವರು ಹನ್ನೆರಡು ಸಂಪುಟಗಳ ಕರ್ನಾಟಕ ಎಪಿಗ್ರಾಫಿಯ ಪ್ರಕಟಿಸಿದ ಬೆನ್ನಹಿಂದೆ ಅದರಲ್ಲಿ ಕ್ರಿ.ಶ. ೧೮೬೯ರ ಶಾಸನಗಳು ಬೆಳಕಿಗೆ ಬಂದಿದ್ದವು. ಅವರ ಕಾರ್ಯಕ್ಕೆ ಹಲವಾರು ಘನ ವಿಧ್ವಾಂಸರು, ಮೇಧಾವಿಗಳು, ಹಿರಿಯರು, ಜೊತೆಗೆ ಹಲವು ಗ್ರಾಮಗಳ ಜನತೆ ಪ್ರೋತ್ಸಾಹ ನೀಡಿ ಮಾಹಿತಿ ಕಲೆಹಾಕಲು ನೆರವಾಗಿದ್ದರು. ಇದರಿಂದಾಗಿ ಕರ್ನಾಟಕದ ಚರಿತ್ರೆಯನ್ನು ಅರಿಯಲು ಒಂದು ಒಳ್ಳೆಯ ಆಧಾರ ಸಿಕ್ಕಿತು. ಬಿ.ಎಲ್.ರೈಸ್ ಕಂಡು ಹಿಡಿದ ಶಾಸನಗಳು ಕರ್ನಾಟಕದ ಚರಿತ್ರೆಯನ್ನು ಕ್ರಿ. ಪೂ. ೩ನೆಯ ಶತಮಾನಕ್ಕೆ ಕರೆದೊಯ್ದವು. ಈ ಎಲ್ಲಾ ಶಾಸನಗಳಿಂದ ತಿಳಿದು ಬಂದ ರಾಜಕೀಯ ತಿರುಳನ್ನು ಬಿ.ಎಲ್.ರೈಸ್ ರವರು "ಮೈಸೂರ್ ಅಂಡ್ ಕೂರ್ಗ್ ಫ್ರಂ ಇನಪ್ಶನ್ಸ್" ಎಂಬ ಗ್ರಂಥದಲ್ಲಿ ಬರೆದಿದ್ದಾರೆ. ಇವರು ಪ್ರಕಟಿಸಿರುವ ಎಪಿಗ್ರಾಫಿಯಾ ಶೇಣಿಯ ಗ್ರಂಥಗಳಲ್ಲಿ ಹಲವು ದೇವಾಲಯಗಳ ನಕ್ಷೆ ಪ್ರಕಟಗೊಂಡಿದ್ದು ಇವರು ಎಷ್ಟು ವೈಜ್ಞಾನಿಕವಾಗಿ ಅವುಗಳ ಅಧ್ಯಯನ ಮಾಡಿದ್ದಾರೆ ಎಂಬುದನ್ನು ಅದು ಎತ್ತಿ ತೋರಿಸುತ್ತವೆ. ಅಲ್ಲದೆ ಇವರು ಸಂಗ್ರಹಿಸಿದ ‘ಓಲೆಗರಿ', ‘ಹಸ್ತಪ್ರತಿ' ಹಾಗೂ ಇದೆ ಅವಧಿಯಲ್ಲಿ ಪ್ರಾಚೀನ ಗ್ರಂಥಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಲು ಮೈಸೂರಿನ ಅರಸರ ಕೊಡುಗೆಯಾಗಿ "ಓರಿಯಂಟಲ್ ರೀಸರ್ಚ್ ಸೆಂಟರ್" ಅಸ್ತಿತ್ವಕ್ಕೆ ಬಂದಿದ್ದು. ಅದರಲ್ಲಿ ಇವರ ಎಷ್ಟೋ ಅಮೂಲ್ಯ ಸಂಗ್ರಹ ವನ್ನು ಇಂದಿಗೂ ಕಾಣಬಹುದು. ಕ್ರಿ,ಶ ೧೮೮೪ರಲ್ಲಿ ಬಿ.ಎಲ್.ರೈಸ್ "ಬಿಬ್ಲಿಯೋತಿಕಾ ಕರ್ನಾಟಕ ಗ್ರಂಥಮಾಲೆ"ಯನ್ನು ಆರಂಭಿಸಿ ಈ ಮಾಲೆಯಲ್ಲಿ "ಕರ್ನಾಟಕ ಭಾಷಾಭೂಷಣ" ,"ಕರ್ನಾಟಕ ಶಬ್ದಾನುಶಾಸನ" "ಪಂಪ ರಾಮಾಯಣ", "ಪಂಪ ಭಾರತ", "ಕವಿರಾಜ ಮಾರ್ಗ" ಹಾಗೂ "ಕಾವ್ಯಾವಲೋಕನ" ಮುಂತಾದ ಪ್ರಾಚೀನ ಗ್ರಂಥಗಳನ್ನು ಪ್ರಕಟಣೆ ಮಾಡುತ್ತಾರೆ. ಕನ್ನಡ ನೆಲದ ಬಗ್ಗೆ ಅತಿಯಾದ ಪ್ರೀತಿ ಇಟ್ಟುಕೊಂಡಿದ್ದ ಇವರು ನಿವೃತ್ತರಾದ ಮೇಲೆ ಬ್ರಿಟನ್ ದೇಶದ ಹ್ಯಾರೋ ನಗರದಲ್ಲಿ ನೆಲೆಗೊಂಡರು. ತಮ್ಮ ಅವಿಶ್ರಾಂತ ದುಡಿಮೆಯಿಂದ ಕನ್ನಡ ನೆಲದ ಶಾಸನ ಸಂಪತ್ತನ್ನು ಹೊರತೆಗೆದು ಕನ್ನಡ ನಾಡಿನ ಹಾಗೂ ದಕ್ಷಿಣ ಭಾರತದ ಇತಿಹಾಸದ ಮೇಲೆ ಬೆಳಕುಚೆಲ್ಲಿ ಇತಿಹಾಸ ಹಾಗೂ ಸಾಹಿತ್ಯ ಅಧ್ಯಯನಕ್ಕೆ ಅನುವುಮಾಡಿಕೊಟ್ಟು ಕ್ರಿ,ಶ ೧೯೨೭ರ ಜುಲೈ ೧೦ರಂದು ೯೦ನೇ ವಯಸ್ಸಿನಲ್ಲಿ ಅವರು ನಿಧನ ಹೊಂದಿದರು.

-ಸತೀಶ್ ಕುಮಾರ್ ಎ. ಎಸ್.

ಇತಿಹಾಸ ಉಪನ್ಯಾಸಕರು, ವೀರಾಜಪೇಟೆ.

ಮೊ:೯೬೩೨೪೩೨೩೧೫