ಮಡಿಕೇರಿ, ಏ. ೩: ಕೊಡವ ಕೌಟುಂಬಿಕ ಹಾಕಿ ಉತ್ಸವ ಆರಂಭಗೊAಡ ನಂತರದ ಮೂರನೇ ವರ್ಷದಲ್ಲಿ ಮತ್ತೊಂದು ಪ್ರಯತ್ನವಾಗಿ ಕೀತಿಯಂಡ ಕುಟುಂಬದ ಮೂಲಕ ಪ್ರಾರಂಭಿಸಲಾದ ಕೌಟುಂಬಿಕ ಕ್ರಿಕೆಟ್ ಉತ್ಸವ ಸತತ ೧೯ ವರ್ಷಗಳು ನಡೆದಿತ್ತು. ಆದರೆ ೨೦೧೮ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ನಂತರದ ವರ್ಷಗಳಲ್ಲಿನ ಕೊರೊನಾ ಪರಿಸ್ಥಿತಿಯಿಂದಾಗಿ ೨೦೧೯ರಿಂದ ೨೦೨೧ರವರೆಗೆ ಮೂರು ವರ್ಷಗಳ ಕಾಲ ನಡೆದಿರಲಿಲ್ಲ.

೨೦೧೮ರಲ್ಲಿ ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮಡ್ಲಂಡ ಕಪ್ ಕ್ರಿಕೆಟ್ ನಡೆದಿದ್ದು, ಇದರಲ್ಲಿ ೨೧೧ ಕುಟುಂಬಗಳು ಪಾಲ್ಗೊಂಡಿದ್ದವು. ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ವಾರ್ಷಿಕ ಪಂದ್ಯಾಟ ಜರುಗುತ್ತಿತ್ತು. ಆ ವರ್ಷ ಮುಂದಿನ ಸಾಲಿನ (೨೦೧೯) ಉತ್ಸವ ಆಯೋಜನೆಗಾಗಿ ಕೊಡವ ಕ್ರಿಕೆಟ್ ಅಕಾಡೆಮಿ ಹಾಗೂ ಮಡ್ಲಂಡ ಕುಟುಂಬಸ್ಥರಿAದ ಚೆಂಬೆಬೆಳ್ಳೂರು ಮೂಲದ ಪೊರುಕೊಂಡ ಕುಟುಂಬ ಧ್ವಜ ಸ್ವೀಕರಿಸಿತ್ತು.

ಆದರೆ ಸತತ ಮೂರು ವರ್ಷ ಈ ಉತ್ಸವ ಆಯೋಜನೆ ಸಾಧ್ಯವಾಗಿರಲಿಲ್ಲ. ವರ್ಷಂಪ್ರತಿ ಜಿಲ್ಲೆಯ ವಿವಿಧೆಡೆಗಳಲ್ಲಿ ಈ ಪಂದ್ಯಾವಳಿ ಜರುಗುತ್ತಿತ್ತು. ಇದೀಗ ಪೊರುಕೊಂಡ ಕುಟುಂಬ ೨೦೨೨ರ ಉತ್ಸವ ನಡೆಸಲು ಸಿದ್ಧತೆ ನಡೆಸಿದೆ. ಮೇ ೧ ರಿಂದ ಅಮ್ಮತ್ತಿಯಲ್ಲಿ ಪಂದ್ಯಾವಳಿ ನಡೆಸಲಾಗುತ್ತಿದ್ದು, ೨೦೦ಕ್ಕೂ ಅಧಿಕ ಕುಟುಂಬ ತಂಡಗಳ ಭಾಗವಹಿಸುವಿಕೆಯ ನಿರೀಕ್ಷೆ ಹೊಂದಿರುವದಾಗಿ ಅವರು ತಿಳಿಸಿದ್ದಾರೆ.

ಈ ಬಾರಿ ಏನೇನು...?

ಮೂರು ವರ್ಷಗಳ ಅಂತರದ ಬಳಿಕ ಕೌಟುಂಬಿಕ ಉತ್ಸವ ನಡೆಯುತ್ತಿರುವುದರಿಂದ ಇದಕ್ಕೆ ಒಂದಷ್ಟು ಸಂಭ್ರಮದ ಲೇಪನ ನೀಡುವ ಮೂಲಕ ಈ ಹಿಂದಿನ ಕಳೆ ಮೂಡಿಸುವಂತಹ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಸಕ್ತ ವರ್ಷವೂ ಕೌಟುಂಬಿಕ ಹಾಕಿ ಉತ್ಸವ ಇಲ್ಲದಿರುವ ಕಾರಣ ಈ ಬಾರಿ ಹೆಚ್ಚಿನ ತಂಡಗಳನ್ನು ನಿರೀಕ್ಷಿಸಲಾಗುತ್ತಿದೆ. ಅಮ್ಮತ್ತಿಯ ಪ್ರೌಢಶಾಲಾ ಮೈದಾನ ಹಾಗೂ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೇ ೧ ರಿಂದ ಪಂದ್ಯಾಟ ಆರಂಭವಾಗಲಿದೆ. ಈಗಾಗಲೇ ತಂಡಗಳ ನೋಂದಣಿ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ.

ಸೌತ್ ಕೂರ್ಗ್ ವಾರಿರ‍್ಸ್ v/s ನಾರ್ತ್ ಕೂರ್ಗ್ ವಾರಿಯರ್ಸ್

ಉದ್ಘಾಟನಾ ದಿನದಂದು ಸೌತ್ ಕೂರ್ಗ್ ವಾರಿರ‍್ಸ್ ಹಾಗೂ ನಾರ್ತ್ ಕೂರ್ಗ್ ವಾರಿರ‍್ಸ್ ಎಂಬ ಎರಡು ತಂಡಗಳನ್ನು ರಚಿಸಿ ಈ ತಂಡಗಳ ನಡುವೆ ಪ್ರದರ್ಶನ ಪಂದ್ಯ ಏರ್ಪಡಿಸಲಾಗುತ್ತಿದೆ. ಪ್ರದರ್ಶನ ಪಂದ್ಯವನ್ನು ಲೆದರ್‌ಬಾಲ್‌ನಲ್ಲಿ ಆಡಿಸುವ ಚಿಂತನೆ ನಡೆದಿದೆ.

ಈ ಬಾರಿ ವಿನ್ನರ್ಸ್ ಹಾಗೂ ರನ್ನರ್ಸ್ ತಂಡದೊAದಿಗೆ ಮೂರನೆ ಸ್ಥಾನಕ್ಕೂ ಪಂದ್ಯ ನಡೆಸಿ ಇದರಲ್ಲಿ ವಿಜೇತರಿಗೂ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಟ್ರೋಫಿ ಹಾಗೂ ನಗದು ನೀಡಲಾಗುವುದು. ಅಲ್ಲದೆ ಆರಂಭದಿAದ ಪರಾಜಿತಗೊಂಡು ನಿರ್ಗಮಿಸುವ ಎಲ್ಲಾ ತಂಡಕ್ಕೂ ಸ್ಮರಣಿಕೆ ನೀಡಲಾಗುತ್ತಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಪೊರುಕೊಂಡ ಬೋಪಣ್ಣ ಹಾಗೂ ಕಾರ್ಯದರ್ಶಿ ಸುನಿಲ್ ತಿಳಿಸಿದ್ದಾರೆ.

‘ತಂದ್ - ಬೆಂದ್’ ಕಾರ್ನರ್

ಪಂದ್ಯಾವಳಿಯ ಸಂದರ್ಭದಲ್ಲಿ ಮೈದಾನದಲ್ಲಿ ವಿಶೇಷವಾಗಿ ‘ತಂದ್ - ಬೆಂದ್’ ಕಾರ್ನರ್ ಕಾರ್ಯನಿರ್ವಹಿಸಲಿದೆ. ಜನಾಂಗದ ಆಸಕ್ತ ಯುವಕ - ಯುವತಿಯರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಹೊನಲು ಬೆಳಕಿನ ಆಕರ್ಷಣೆ

ಈ ಬಾರಿ ಮತ್ತೊಂದು ವಿಶೇಷತೆ ಹಾಗೂ ಆಕರ್ಷಣೆಯಾಗಿ ಸಮಿಫೈನಲ್ ಹಾಗೂ ಫೈನಲ್ ಪಂದ್ಯಾಟವನ್ನು ಹೊನಲು ಬೆಳಕಿನಲ್ಲಿ (ಫ್ಲಡ್‌ಲೈಟ್) ಆಯೋಜಿಸಲಾಗುತ್ತಿದ್ದು, ಇದಕ್ಕೂ ಸಿದ್ಧತೆ ನಡೆದಿದೆ ಎಂದು ಅವರುಗಳು ತಿಳಿಸಿದ್ದಾರೆ. ಉತ್ಸವದ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮದ ಆಕರ್ಷಣೆಯೂ ಇರಲಿದೆ.

ಸಮಿತಿಯ ಖಜಾಂಚಿಯಾಗಿ ದಿಲೀಪ್ ಸೇರಿದಂತೆ ಇತರ ನಿರ್ದೇಶಕರು, ಕುಟುಂಬಸ್ಥರು ಕಾರ್ಯನಿರ್ವಹಿಸುತ್ತಿದ್ದು, ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಹೆಚ್ಚಿನ ವಿವರಕ್ಕೆ ೯೬೮೬೧೦೭೨೯೭ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಬಹುದಾಗಿದೆ.