ನವದೆಹಲಿ, ಏ. ೩: ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ದೇಶದ ವಿವಿಧೆಡೆಗಳಲ್ಲಿ ಭೂಕಂಪಗಳು ಸಂಭವಿಸಿವೆ. ಆಂಧ್ರಪ್ರದೇಶದ ತಿರುಪತಿಯಲ್ಲಿ ಭಾನುವಾರ ಬೆಳಗಿನ ಜಾವ ೧.೧೦ ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ೩.೬ ತೀವ್ರತೆಯ ಭೂಕಂಪ ಸಂಭವಿಸಿದೆ. ತಿರುಪತಿಯಿಂದ ಈಶಾನ್ಯಕ್ಕೆ ೮೫ ಕಿಮೀ ದೂರದಲ್ಲಿ ಭೂಗರ್ಭದ ೨೦ ಕಿಮೀ ಆಳದಲ್ಲಿ ಕಂಪನದ ಕೇಂದ್ರವಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತç ಕೇಂದ್ರ ತಿಳಿಸಿದೆ. ಭೂಕಂಪದಿAದ ಯಾವುದೇ ಹಾನಿಗಳಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಜಮ್ಮು-ಕಾಶ್ಮೀರದ ಲಡಾಖ್‌ನಲ್ಲಿರುವ ಅಲ್ಚಿ ಪ್ರದೇಶದ ಉತ್ತರದಲ್ಲಿ ಇಂದು ಬೆಳಗ್ಗೆ ೭.೨೯ರ ವೇಳೆ ಭೂಮಿ ಕಂಪಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೪.೩ರಷ್ಟು ದಾಖಲಾಗಿದೆ. ಶನಿವಾರ ರಾತ್ರಿ ೨.೫೦ರ ಸುಮಾರಿಗೆ ಅಂಡಮಾನ್-ನಿಕೋಬಾರ್‌ನ ದಿಗ್ಲಿಪುರ್ ಪ್ರದೇಶದಲ್ಲಿಯೂ ಕಂಪನ ಸಂಭವಿಸಿದೆ. ಭೂಕಂಪನ ಪ್ರಮಾಣ ರಿಕ್ಟರ್ ಮಾಪಕದಲ್ಲಿ ೪.೪ರಷ್ಟು ದಾಖಲಾಗಿದೆ ಎಂದು ತಿಳಿದು ಬಂದಿದೆ. ಅದೃಷ್ಠವಶಾತ್ ಎಲ್ಲಿಯೂ ಯಾವುದೇ ಹಾನಿಗಳು ಸಂಭವಿಸಿದ ಕುರಿತು ವರದಿಯಾಗಿಲ್ಲ.