ಮುಸಲ್ಮಾನರ ಪವಿತ್ರ ತಿಂಗಳಾದ ರಂಜಾನ್ ಇಸ್ಲಾಂ ಕ್ಯಾಲೆಂಡರ್ ಪ್ರಕಾರ ೯ನೇ ತಿಂಗಳಾಗಿದ್ದು, ತಾ. ೩ ರಿಂದ ರಂಜಾನ್ ಮಾಸ ಆರಂಗೊAಡಿದೆ. ರಂಜಾನ್ ತಿಂಗಳಲ್ಲಿ ಮುಸಲ್ಮಾನರು ಕಡ್ಡಾಯವಾಗಿ ಉಪವಾಸವನ್ನು ಆಚರಿಸುತ್ತಾರೆ. ಇಸ್ಲಾಂ ಧರ್ಮದ ಪಂಚ ತತ್ವಗಳಲ್ಲಿ ರಂಜಾನ್ ತಿಂಗಳ ಉಪವಾಸ ಮಹತ್ವ ಪಡೆದುಕೊಂಡಿದೆ.
ಉಪವಾಸ ವೃತದಿಂದ ಮನುಷ್ಯನ ದೇಹ ಮತ್ತು ಮನಸ್ಸಿನಲ್ಲಿ ತುಂಬಿದ ಮಾಲಿನ್ಯವನ್ನು ಉಪವಾಸ ಮಾಡಿ ಶುದ್ಧೀಕರಿಸುವ ಧಾರ್ಮಿಕ ಕ್ರಿಯೆಯಾಗಿದೆ ರಂಜಾನ್ ತಿಂಗಳಿನ ಉಪವಾಸ. ಇಸ್ಲಾಂ ಧರ್ಮದ ಪಾವಿತ್ರತೆಯನ್ನು ಕಾಪಾಡಲು ರಂಜಾನ್ ತಿಂಗಳನ್ನು ಆಯ್ಕೆ ಮಾಡಲಾಗಿದೆ. ಈ ತಿಂಗಳಿನಲ್ಲಿ ಎಲ್ಲರೊಡನೆ ಪ್ರೀತಿಯಿಂದ ಇರಬೇಕಾಗುತ್ತದೆ. ಮುಸಲ್ಮಾನನಾಗಿ ಹುಟ್ಟಿದ ಪ್ರತಿಯೊಬ್ಬ ಆರೋಗ್ಯ ಪ್ರಜೆಯೂ, (ಮಕ್ಕಳನ್ನು ಗರ್ಭಿಣಿಯರನ್ನು ಅನಾರೋಗ್ಯ ಪೀಡಿತರನ್ನು ಜನರನ್ನು ಹೊರತುಪಡಿಸಿ) ಕಡ್ಡಾಯವಾಗಿ ನಿರ್ವಹಿಸಬೇಕಾಗುತ್ತದೆ.
ಉಪವಾಸದ ಸಮಯ ಸೂರ್ಯೋದಯಕ್ಕೂ ಮುನ್ನ ಲಘು ಆಹಾರ ಸೇವನೆ ಮಾಡಿ ಉಪವಾಸ ವೃತ ಆರಂಭಿಸಿ ಸೂರ್ಯಾಸ್ತಮಾನದ ನಂತರವೇ ಆಹಾರ ಸೇವಿಸಬೇಕು. ಭಾರತೀಯ ಕಾಲಮಾನ ಬೆಳಿಗ್ಗೆ ೪:೪೫ ರಿಂದ ೬.೪೫ ರ ವರೆಗೆ ಆಗಿರುತ್ತದೆ ಸುಮಾರು ಹದಿನಾಲ್ಕು ಗಂಟೆಗಳ ಕಾಲ ವ್ರತ ಆಚರಿಸುತ್ತಾರೆ.
ರಂಜಾನ್ ತಿಂಗಳು ಮುಸಲ್ಮಾನರ ಪವಿತ್ರ ಗ್ರಂಥ ಕುರಾನ್ ಅನಾವರಣಗೊಂಡ ತಿಂಗಳಾಗಿದೆ. ರಂಜಾನ್ ತಿಂಗಳಿನಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ.
- ನೌಫಲ್